ADVERTISEMENT

ಕನ್ನಡ ಬಾವುಟ ಅಧಿಕೃತವಾಗಿಸಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 7:09 IST
Last Updated 23 ಜುಲೈ 2017, 7:09 IST
ಗಜೇಂದ್ರಗಡದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ಬಾವುಟವನ್ನು ಕರ್ನಾಟಕದ ರಾಜ್ಯ ಬಾವುಟವನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಗಜೇಂದ್ರಗಡದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕನ್ನಡ ಬಾವುಟವನ್ನು ಕರ್ನಾಟಕದ ರಾಜ್ಯ ಬಾವುಟವನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು   

ಗಜೇಂದ್ರಗಡ: ಕನ್ನಡ ನಾಡು ನುಡಿಯ ಪ್ರತೀಕವಾಗಿರುವ ಹಳದಿ, ಕೆಂಪು ಬಾವುಟವನ್ನು ರಾಜ್ಯದ ಅಧಿಕೃತ ಧ್ವಜ ವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಕನ್ನಡ ಭಾಷೆಗೆ ಅನೇಕ ವರ್ಷಗಳ ಇತಿಹಾಸವಿದೆ. ಹಿಂದಿನಿಂದಲೂ ನಾಡಿನ ಪ್ರತೀಕವಾಗಿರುವ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ಕಾನೂನು ರೀತಿ ರಾಜ್ಯದ ಅಧಿಕೃತ ಧ್ವಜವಲ್ಲ. ಆದರೆ, ಅದು ಜನ ಮಾನಸದಲ್ಲಿ ಅಚ್ಚೊತ್ತಿದೆ. ಹೀಗಾಗಿ, ಈಗಿರುವ ಕನ್ನಡ ಬಾವುಟನನ್ನು ಅಧಿ ಕೃತ ರಾಜ್ಯದ ಧ್ವಜವನ್ನಾಗಿ ಘೋಷಿಸ ಬೇಕು ಎಂದರು.

ರಾಜ್ಯದ ಭಾಷೆ, ಗಡಿ, ನೀರಿನ ವಿಷಯ ಬಂದಾಗ ಕೇಂದ್ರದ ಮಲ ತಾಯಿ ಧೋರಣೆ ಖಂಡಿಸಿ, ಹೋರಾ ಡಲು ಬೇಕಾದ ರಾಜ್ಯದ ಲಾಂಛನವೇ ಕನ್ನಡ ಬಾವುಟ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಭಾಷೆ ಹೇರುತ್ತಿರುವ ಕೇಂದ್ರದ ವಿರುದ್ಧ ಹೋರಾಟ ಮಾಡಲು ಕನ್ನಡ ಬಾವುಟ ಇದು.

ADVERTISEMENT

ಈ ಬಾವುಟವನ್ನು ಕರ್ನಾಟಕದ ಬಾವುಟವನ್ನಾಗಿ ಮಾಡುವುದರಲ್ಲಿ ತಪ್ಪೇನಿಲ್ಲ. ಹಳದಿ ಮತ್ತು ಕೆಂಪು ಬಣ್ಣ ಹೊಂದಿರುವ ಈ ಬಾವುಟವನ್ನು ಯಥಾ ವತ್ತಾಗಿ ಅಧೀಕೃತ ಬಾವುಟನ್ನಾಗಿಸ ಬೇಕು. ಇಲ್ಲವಾದಲ್ಲಿ ಕರವೇ ರಾಜ್ಯದಾ ದ್ಯಂತ ಬೀದಿಗಿಳಿದು ಹೋರಾಟ ಮಾಡ ಬೇಕಾಗುತ್ತದೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕ.ರ.ವೇ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಪೂಜಾರ, ಬಸವರಾಜ ಹೊಸಮನಿ, ಅಲ್ಲಾಬಕ್ಷ ಮುಚ್ಚಾವಲಿ, ಜೀವನಸಾಬ್ ಸರ್ಕಾವಸ್, ಮಂಜುನಾಥ ಹೂಗಾರ, ಕಳಕಪ್ಪ ಮಂಗ ಳೂರ, ಬಾಬು ಗೋಡೆಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.