ADVERTISEMENT

ಕೊಣ್ಣೂರಿನಿಂದ ಶ್ರೀಶೈಲಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:08 IST
Last Updated 11 ಮಾರ್ಚ್ 2017, 11:08 IST
ನರಗುಂದ: ತಾಲ್ಲೂಕಿನ ಕೊಣ್ಣೂರಿನ  ನೂರಾರು ಭಕ್ತರು  ವಿರಕ್ತಮಠದ ಡಾ. ಶಿವಕುಮಾರ ಶಿವಾಚಾರ್ಯರ ಸಾನ್ನಿಧ್ಯ ದಲ್ಲಿ  44 ನೇ ವರ್ಷದ  ಶ್ರೀಶೈಲ ಪಾದ ಯಾತ್ರೆ ಕಾರ್ಯಕ್ರಮ ನಡೆಯಿತು. 
 
ಸುಮಾರು 42 ದಿನಗಳ ಕಾಲ ಶಿವದೀಕ್ಷೆ ಸ್ವೀಕರಿಸಿ ಶಿವಮಾಲೆ ಧರಿಸಿದ ಶಿವ ಸ್ವಾಮಿಗಳು  ಹಾಗೂ ನೂರಾರು ಜನ ಭಕ್ತರು ಸೇರಿಕೊಂಡು ಮಲ್ಲಯ್ಯನ ಉತ್ಸವ ಮೂರ್ತಿ  ಇರುವ ಕಂಬಿಯನ್ನು ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಸಕಲ ವಾದ್ಯ– ಮೇಳಗಳ ಮೂಲಕ ಮೆರವಣಿಗೆ ಮಾಡಲಾಯಿತು. 
ಕೊಣ್ಣೂರನಿಂದ ಶ್ರೀಶೈಲ ಮಲ್ಲ ಯ್ಯನ ದರ್ಶನ ಮಾಡಲು ಮಲ್ಲಿಕಾ ರ್ಜುನ ರುದ್ರಪ್ಪ ಬಡಕಪ್ಪನವರ ಎಂಬ ಭಕ್ತ ಮರಗಾಲು ಕಟ್ಟಿಕೊಂಡು ಪಾದ ಯಾತ್ರೆಗೆ ತೆರಳಿದನು.
 
ಶಿವಕುಮಾರ ಶಿವಾಚಾರ್ಯರು ಮಾತನಾಡಿ ಶ್ರೀಶೈಲ ಮಲ್ಲಯ್ಯನ  ಶಿವಮಾಲೆಯನ್ನು ಧರಿಸುವ ಭಕ್ತರು ಶ್ರದ್ಧಾಭಕ್ತಿಯಿಂದ  ತನು ಮನದಿಂದ ಮಲ್ಲಯ್ಯನ ಧ್ಯಾನ ಮಾಡಬೇಕು. ಆಗ ಮಾತ್ರ ಮನಸ್ಸಿನ ಕೊಳೆಯನ್ನು ತೊಳೆ ಯಲು ಸಾಧ್ಯ ಎಂದರು. 
 
ಬನಶಂಕರಿ, ಕಾಟಾಪುರ, ಮುದ ಗಲ್, ಧೂಮತಿ, ನಾಗಲೋಟಿ, ಅಡಕೇ ಶ್ವರ  ಮಾರ್ಗವಾಗಿ ಭಕ್ತರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.