ADVERTISEMENT

ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ

ಗುಲಗಂಜಿಕೊಪ್ಪದಲ್ಲಿ ‘ಗ್ರಾಮ ವಿಕಾಸ’ ಯೋಜನೆಗೆ ಚಾಲನೆ; ಶಾಸಕ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:21 IST
Last Updated 3 ಮಾರ್ಚ್ 2017, 7:21 IST

ಲಕ್ಷ್ಮೇಶ್ವರ: ಗ್ರಾಮಗಳ ಉದ್ಧಾರದಿಂದ ದೇಶದ ಅಭಿವೃದ್ದಿ ಸಾಧ್ಯ. ಕುಡಿಯುವ ನೀರು, ರಸ್ತೆ, ಚರಂಡಿ ಹೀಗೆ ಹಲವು ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಮ ಕೃಷ್ಣ ದೊಡ್ಡಮನಿ ಹೇಳಿದರು.

ಇಲ್ಲಿಗೆ ಸಮೀಪದ ಗೋವನಾಳ ಗ್ರಾಮ ಪಂಚಾಯ್ತಿ ಗುಲಗಂಜಿಕೊಪ್ಪ ಗ್ರಾಮದಲ್ಲಿ ‘ಗ್ರಾಮ ವಿಕಾಸ’ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹಳ್ಳಿ ಜನರ ಜೀವನ ಮಟ್ಟ ಸುಧಾ ರಣೆ, ಶೈಕ್ಷಣಿಕ ಪ್ರಗತಿ, ಕೃಷಿಕರ ಆರ್ಥಿಕ ಸ್ವಾಲಂಬನೆ, ದುಡಿಯುವ ಕೈಗಳಿಗೆ ಉದ್ಯೋಗ, ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ರಸ್ತೆ ನಿರ್ಮಾಣ ಹೀಗೆ ಅನೇಕ ಪ್ರಗತಿಪರ ಕಾರ್ಯಕ್ರಮ ಹಾಕಿ ಕೊಳ್ಳುವ ಮೂಲಕ ಗ್ರಾಮಗಳ ಸರ್ವ ತೋಮುಖ ವಿಕಾಸಕ್ಕೆ ಈ ಯೋಜನೆ ಮುನ್ನುಡಿ ಬರೆದಿದೆ ಎಂದರು.

ರಾಜ್ಯ ಸರ್ಕಾರ ಬರಗಾಲದ ಬವಣೆ ನೀಗಿಸಲು ಕೃಷಿ ಹೊಂಡಗಳ ನಿರ್ಮಾಣ, ಕೆರೆಗಳ ಹೂಳೆತ್ತುವುದು. ಬಾಂದಾರ ನಿರ್ಮಾಣ ಮಾಡುವ ಮೂಲಕ ತಾಲ್ಲೂ ಕಿನ ಎಲ್ಲ ಪ್ರದೇಶಗಳಲ್ಲಿ ನೀರು ನಿಲ್ಲುವ ಕೆಲಸ ಮಾಡಲಾಗುತ್ತಿದೆ.

ಅಂದಾಜು ₹ 150 ಕೋಟಿ ವೆಚ್ಚದಲ್ಲಿ ಮಳೆಗಾಲ ದಲ್ಲಿ ಕ್ಷೇತ್ರದಲ್ಲಿ ಎಲ್ಲ ಕೆರೆ ಕಟ್ಟೆ ಹಾಗೂ ಬಾಂದಾರ ತುಂಬಿಸುವ ಯೋಜನೆ ರೂಪಿಸಲಾಗಿದ್ದು ಇದಕ್ಕೆ ಸಂಬಂಧಿಸಿ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದ್ದು ಇದಕ್ಕೆ ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ. ಶೀಘ್ರದಲ್ಲಿ ಕಾಮ ಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಗೋವನಾಳ ಗ್ರಾಮದಲ್ಲಿ ಸುಮಾರು ₹ 20 ಲಕ್ಷ ವೆಚ್ಚ ದಲ್ಲಿ ಎಸ್‌.ಸಿ. ಕಾಲೊನಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಚಾಲನೆ ನೀಡಿದರು.

ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರ ಮಠ, ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮವ್ವ ದೊಡ್ಡಮನಿ, ಅಣ್ಣಪ್ಪ ರಾಮಗೇರಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ನೀಲಮ್ಮ ಶಿವಬಸಣ್ಣವರ, ನೀಲಪ್ಪಗೌಡ ದುರಗನಗೌಡರ, ದುರಗವ್ವ ರಾಮಗೇರಿ, ಭರಮಣ್ಣ ರೊಟ್ಟಿಗವಾಡ, ಶೇಖಣ್ಣ ಕೊರಡೂರ, ರಾಮಣ್ಣ ಡಂಬಳ, ನಿಂಗಪ್ಪ ಹುಬ್ಬಳ್ಳಿ, ಶಿವಗಂಗವ್ವ ಪಶುಪತಿಹಾಳ, ಶರಣಯ್ಯ ಲಿಂಬಯಯ್ಯಸ್ವಾಮಿಠ, ವಿರೂ ಪಾಕ್ಷಪ್ಪ ನಂದೆಣ್ಣವರ,

ನಾಗರಾಜ ದೊಡ್ಡಮನಿ, ಚಂದ್ರಗೌಡ ಕರಿಗೌಡರ, ನಿಂಗಪ್ಪ ಮಣಿಕಟ್ಟಿನ, ತಿಪ್ಪಣ್ಣ ಸಂಶಿ, ವೈ.ಡಿ. ಮರಿಲಿಂಗನಗೌಡ್ರ, ಅಲ್ಲಿಸಾಬ್ ದೊಡ್ಡಮನಿ, ಸಂತೋಷ ಗಾಜಿ, ಹನಮಂತಗೌಡ ರಾಯನಗೌಡ್ರ, ಜಯಕ್ಕ ಕಳ್ಳಿ, ನಾರಾಯಣಸಾ ಪವಾರ, ನಿಂಗನ ಗೌಡ ಪಾಟೀಲ, ನಾಗರಾಜ ಮಡಿವಾ ಳರ, ಪಿಡಿಓ ಪಿ.ಆರ್. ಕಾರಬಾರಿ, ಜಿಲ್ಲಾ ಪಂಚಾಯ್ತಿ ಎಇಇ ಬಿ.ಕೆ. ಜ್ಯೋತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT