ADVERTISEMENT

ಜೀವಜಲಕ್ಕೆ ಗ್ರಾಮಸ್ಥರ ಪರದಾಟ

ಲಕ್ಷ್ಮೇಶ್ವರ ಹೋಬಳಿ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ತತ್ವಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:16 IST
Last Updated 18 ಫೆಬ್ರುವರಿ 2017, 10:16 IST
ಲಕ್ಷ್ಮೇಶ್ವರ ಸಮೀಪದ ಯಳವತ್ತಿ ಗ್ರಾಮದಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು
ಲಕ್ಷ್ಮೇಶ್ವರ ಸಮೀಪದ ಯಳವತ್ತಿ ಗ್ರಾಮದಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರು   
ಲಕ್ಷ್ಮೇಶ್ವರ: ಈಗಿನ್ನೂ ಬೇಸಿಗೆ ಕಾಲಿಡು ತ್ತಿದ್ದು ಈಗಾಗಲೇ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಉಂಟಾ ಗಿದೆ. ಸತತ ಎರಡು ವರ್ಷ ಬರಗಾಲ ದಿಂದಾಗಿ ನೀರಿನ ಮೂಲಗಳಾದ ಹಳ್ಳ, ಕೊಳ್ಳ, ಕೆರೆ, ಬಾವಿ, ವರ್ತಿಗಳು ಬತ್ತಿದ್ದು ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. 
 
ಬಾಲೆಹೊಸೂರು ಮತ್ತು ಬನ್ನಿಕೊಪ್ಪ ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು ಬನ್ನಿ ಕೊಪ್ಪಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. 
 
‘ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಶಿಗ್ಲಿಯಲ್ಲೂ ಸಮಸ್ಯೆ ಉಂಟಾ ಗಿತ್ತು. ಆದರೆ ಗ್ರಾಮದ ರೈತರಾದ ಚಂದ್ರಪ್ಪ ಮತ್ತು ನೀಲಪ್ಪ ತೋಟದ ಇವರು ಉಚಿತವಾಗಿ ತಮ್ಮ ಸ್ವಂತದ ಕೊಳವೆಬಾವಿ ನೀರನ್ನು ಗ್ರಾಮಸ್ಥರಿಗೆ ಕೊಡುತ್ತಿದ್ದಾರೆ. ಹೀಗಾಗಿ, ಸದ್ಯ ಅಲ್ಲಿನ ನೀರಿನ ಸಮಸ್ಯೆ ಬಗೆ ಹರಿದಿದ್ದು ಉಳಿ ದಂತೆ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌.ವೈ. ಗುರಿ ಕಾರ ಹೇಳಿದರು.
 
ಬಸಾಪುರ, ರಾಮಗಿರಿ, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಮಾಗಡಿ, ಗೊಜ ನೂರು, ಪುಟಗಾಂವ್‌ ಬಡ್ನಿ, ಬಟ್ಟೂರು, ಅಡರಕಟ್ಟಿ, ಗೋವನಾಳ  ಗ್ರಾಮಗಳಲ್ಲೂ ನೀರಿನ ಕೊರತೆ ಕಾಡುತ್ತಿದೆ. ಅದರಲ್ಲೂ ಯಳವತ್ತಿ ಗ್ರಾಮಸ್ಥರು ನಿತ್ಯ ನೀರು ತ ರುವುದಕ್ಕಾಗಿ  ಹೆಣಗುವಂತಾಗಿದೆ. ಮಹಿಳೆಯರು, ಮಕ್ಕಳು ದೂಡುವ ಗಾಡಿ ಅಥವಾ ಸೈಕಲ್‌ ಮೇಲೆ ಕೊಡ ಹೇರಿ ನೀರು ತರುವುದು ಇಲ್ಲಿ ಸಾಮಾನ್ಯ.
 
‘ದಿನಾ ನೀರಿಗೆ ಕಾಯದ ಒಂದ ಕೆಲ್ಸಾ ಆಗೇತ್ರಿ. ಸಣ್ಯಾಗಿ ಬೀಳ ನೀರಿಂದ ಒಂದ ಕೊಡಾನೂ ಲಗೂನ ತುಂಬ ಗಿಲ್ರೀ’ ಎಂದು ಯಳವತ್ತಿ ಗ್ರಾಮದ ಪುಟ್ಟವ್ವ ಗಾಣಿಗೇರ ಹೇಳುತ್ತಾರೆ. 
 
ಇನ್ನು ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರದಗಟ್ಟಿ, ಯಲ್ಲಾಪುರ, ದೊಡ್ಡೂರು, ಉಂಡೇನಹಳ್ಳಿ, ಮುನಿ ಯನ ತಾಂಡಾ, ಕೊಂಡಿಕೊಪ್ಪ ಗ್ರಾಮ ಗಳಲ್ಲಿ ನೀರಿನ ಸಮಸ್ಯೆ ಇದ್ದು, ನೀರು ಪೂರೈಕೆಗಾಗಿ ತಾಲ್ಲೂಕು ಆಡಳಿತ ಕೊಳವೆಬಾವಿ ಕೊರೆಯಿಸಬೇಕು ಎಂದು ಹರದಗಟ್ಟಿ ಗ್ರಾಮದ ತಾವರೆಪ್ಪ ಲಮಾಣಿ ಆಗ್ರಹಿಸಿದ್ದಾರೆ. 
 
ಇನ್ನು ಇದೇ ಪರಿಸ್ಥಿತಿ ಲಕ್ಷ್ಮೇಶ್ವರ ದಲ್ಲೂ ಇದ್ದು ಈವರೆಗೆ ನೀರು ಪೂರೈ ಸುತ್ತಿದ್ದ ಮೇವುಂಡಿ ಜಾಕ್‌ವೆಲ್‌ನಲ್ಲಿ ನೀರಿಲ್ಲದ ಕಾರಣ ತುಂಗಭದ್ರಾ ನೀರು ಬಂದಾಗಿ ತಿಂಗಳು ಕಳೆದಿದೆ. ನದಿ ನೀರು ಬಂದ್‌ ಆಗಿದ್ದರಿಂದ ಲಕ್ಷ್ಮೇಶ್ವರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. 
ಇಲ್ಲಿನ ಬಸ್ತಿಬಣದ ಭೋವಿ ಓಣಿ, ಮ್ಯಾಗೇರಿ, ಬಳಿಗಾರ ಓಣಿಗಳಲ್ಲಿನ ನಿವಾ ಸಿಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ನೀರಿಗಾಗಿ ಖಾಸಗಿ ಕೊಳವೆಬಾವಿಗಳನ್ನು ಆಶ್ರಯಿಸುವಂತಾಗಿದೆ. 
 
ನೀರಿನ ಬೇಡಿಕೆ ಹೆಚ್ಚಾಗಿದ್ದರಿಂದ ಟ್ಯಾಂಕರ್‌ ನೀರಿನ ಬೆಲೆಯೂ ಹೆಚ್ಚಾಗಿದೆ. ಇನ್ನು ಬೇಸಿಗೆ ಕಳೆಯುವುದು ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ
ನಾಗರಾಜ ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.