ADVERTISEMENT

‘ಧರ್ಮ, ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆ’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:43 IST
Last Updated 22 ಏಪ್ರಿಲ್ 2017, 6:43 IST
ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ದೊಡ್ಡೂರ ಲಂಬಾಣಿ ತಾಂಡಾದಲ್ಲಿ ಈಚೆಗೆ ಗಾಳಿ ಮರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾ ಪನೆ ಹಾಗೂ ಕಳಸಾರೋಹಣ ಕಾರ್ಯ ಕ್ರಮ ವಿಜೃಂಭಣೆಯಿಂದ ನಡೆಯಿತು.
 
ಲಂಬಾಣಿ ಸಮಾಜದ ಗುರು ಸೋಮಸಾದ ಪೂಜಾರ ಮಾತನಾಡಿ, ‘ನಮ್ಮ ಸಂಪ್ರದಾಯ, ಆಚಾರ, ವಿಚಾರ,ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇವರಿಗಿಂತ ದೊಡ್ಡ ವರು ಯಾರೂ ಇಲ್ಲ.
 
ದೇವರ ಮೇಲಿನ ಶ್ರದ್ದೆ, ಭಕ್ತಿ ಅಚಲವಾಗಿರಬೇಕು. ಸಂತ ಸೇವಾಲಾಲ್ ಮಹಾರಾಜರು ಹಾಕಿ ಕೊಟ್ಟ ಧರ್ಮ ಮಾರ್ಗದಲ್ಲಿ ನಾವೆಲ್ಲ ಬದುಕು ಸಾಗಿಸಬೇಕು. ಪರೋಪಕಾರ ದಿಂದ ಮನುಷ್ಯನ ಜನ್ಮ ಸಾರ್ಥವಾಗು ತ್ತದೆ’ ಎಂದು ಹೇಳಿದರು.
 
ಬೆಳಿಗ್ಗೆ ಗ್ರಾಮದಲ್ಲಿ ಮಹಿಳೆಯರು ಕುಂಭ ಹೊತ್ತು ಕಳಸದ ಮೆರವಣಿಗೆ ನಡೆಸಿದರು. ನಂತರ ದೇವಸ್ಥಾನದಲ್ಲಿ ಹೋಮ ಹವನ ಮಾಡುವ ಮೂಲಕ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾ ರೋಹಣ ಕಾರ್ಯ ಯಶಸ್ವಿಯಾಗಿ ನೆರ ವೇರಿಸಲಾಯಿತು. ವಿವಿಧ ಧಾರ್ಮಿಕ ಆಚರಣೆ ನಡೆದವು.
 
ಟೋಪಣ್ಣ ಲಮಾಣಿ, ಕುಬೇರ ಲಮಾಣಿ, ದೇವಪ್ಪ ಲಮಾಣಿ, ಯಮ ನಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಹನಮಂತ ಯಲಿಗಾರ, ಹಾಲಪ್ಪ ಲಮಾಣಿ, ಪೋಲಿ ಲಮಾಣಿ, ಫಕ್ಕೀರಪ್ಪ ಲಮಾಣಿ, ಪಾರಪ್ಪ ಲಮಾಣಿ, ಲಕ್ಷ್ಮಪ್ಪ ಲಮಾಣಿ, ಕಾಳಪ್ಪ ನಾಯ್ಕರ್, ಶಾಂತ ಕುಮಾರ ಪೆಮ್ಮಾರ, ಪಾಂಡು ಪುರೋ ಹಿತ, ಶಂಕರ ಪೊಲೀಸ, ತುಳಜಪ್ಪ ಲಮಾಣಿ, ಅರ್ಜುನ ಕಾರಬಾರಿ, ಸೋಮು ಪೂಜಾರ, ಬಸು ಅಲ್ಲಿಪೂರ, ಅಮರಪ್ಪ ಗುಡಗುಂಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.