ADVERTISEMENT

ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹ

ಮುಂಡರಗಿ: ನೀರು ಪೂರೈಕೆಯಲ್ಲಿ ತಾರತಮ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:08 IST
Last Updated 2 ಮಾರ್ಚ್ 2017, 5:08 IST

ಮುಂಡರಗಿ: ಪಟ್ಟಣದ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ತಾರತಮ್ಯ ಎಸಗುತ್ತಿದ್ದು, ತಮಗೆ ಬೇಕಾದ ವಾರ್ಡ್‌ಗಳಿಗೆ ಮೂರು ದಿನಗಳಿಗೊಮ್ಮೆ ಹಾಗೂ ಇನ್ನುಳಿದ ವಾರ್ಡ್‌ಗಳಿಗೆ ವಾರಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ ಎಂದು ಸದಸ್ಯ ರಾಘ ವೇಂದ್ರ ಕುರಿಯವರ ಆರೋಪಿಸಿದರು.

ಸ್ಥಳೀಯ ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತ ನಾಡಿದ ಅವರು, ಈಗಾಗಲೆ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾ ಗಿದ್ದು, ಸಾರ್ವಜನಿಕರು ನೀರಿಗಾಗಿ ಪರ ದಾಡುತ್ತಿದ್ದಾರೆ. ಪುರಸಭೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಈ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿ ಕಾರಿ ಎಂ.ಎ.ನೂರುಲ್ಲಾಖಾನ್, ಕುಡಿ ಯುವ ನೀರಿನ ಅಭಾವವಾಗದಂತೆ ಈಗಾ ಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾ ಗಿದೆ. ಜತೆಗೆ ಎಲ್ಲ ವಾರ್ಡ್‌ಗಳಿಗೆ ಸಮಾನ ವಾಗಿ ಮತ್ತು ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ ಎಂದು ಸ್ಪಷ್ಟಿಕರಣ ನೀಡಿದರು.


ಸದಸ್ಯ ಚಂದ್ರಶೇಖರ ಬಡಿಗೇರ ಮಾತ ನಾಡಿ, ಪುರಸಭೆಯ ಮಳಿಗೆಗಳನ್ನು ಅಧಿಕೃತವಾಗಿ ಬಾಡಿಗೆ ಪಡೆದವರು ಮಾತ್ರ ಮಳಿಗೆಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಎಲ್ಲ ಸದಸ್ಯರ ಒಪ್ಪಿಗೆಯ ಮೇರಿಗೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಹೇಮಾ ವತಿ ಅಬ್ಬಿಗೇರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಗಮನಕ್ಕೆ ತಾರದೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ– ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋ ಪಿಸಿ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಸದಸ್ಯ ಸೋಮನಗೌಡ್ರ ಗೌಡ್ರ ಸಾಮಾನ್ಯ ಸಭೆಯಲ್ಲಿ ಧರಣಿ ನಡೆಸಿ ದರು. ಪುರಸಭೆ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಕುರಿತು ಮಾತ್ರ ಚರ್ಚಿಸಬೇಕು. ಎಸ್‌ಡಿಎಂಸಿ ಆಯ್ಕೆ ವಿಚಾರ ಸಭೆಯಲ್ಲಿ ತರುವುದು ಸರಿಯಲ್ಲ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಮನವಿ ಮಾಡಿ ದರು. ನಂತರ ಸೋಮನಗೌಡ ಗೌಡ್ರ ಧರಣಿ ಕೈಬಿಟ್ಟರು.

ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್, ಸದಸ್ಯರಾದ ಬಸವರಾಜ ರಾಮೇನಹಳ್ಳಿ, ಪ್ರಭು ಅಬ್ಬಿಗೇರಿ, ಪ್ರೇಮವ್ವ ಗಣದಿನ್ನಿ, ರಿಹಾನಾಬೇಗಂ ಕೆಲೂರ, ದಾನೇಶ್ವರಿ ಭಜಂತ್ರಿ, ಬಸವ ರಾಜ ಗಣಾಚಾರಿ, ಕೊಟ್ರಮ್ಮ ಇಟಗಿ, ರೇಖಾ ದೇಸಾಯಿ, ಪಕ್ರುಸಾಬ್ ಹಾರೋ ಗೇರಿ, ಲಿಂಗರಾಜಗೌಡ ಪಾಟೀಲ, ಶಾರದಾ ದೇಸಾಯಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT