ADVERTISEMENT

ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 7:18 IST
Last Updated 24 ನವೆಂಬರ್ 2017, 7:18 IST
ನರಗುಂದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 862ನೇ ದಿನವಾದ ಗುರುವಾರ ಬದಾಮಿ ತಾಲ್ಲೂಕಿನ ಕರಡಿಗುಡ್ಡದ ರೈತ ಮುಖಂಡ ಬಿ.ಎಚ್‌.ನರಿ ಮಾತನಾಡಿದರು
ನರಗುಂದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 862ನೇ ದಿನವಾದ ಗುರುವಾರ ಬದಾಮಿ ತಾಲ್ಲೂಕಿನ ಕರಡಿಗುಡ್ಡದ ರೈತ ಮುಖಂಡ ಬಿ.ಎಚ್‌.ನರಿ ಮಾತನಾಡಿದರು   

ನರಗುಂದ: ‘ಮಹದಾಯಿ ವಿವಾದ ಗೋವಾ ಮೊಂಡುತನದಿಂದ ಕಗ್ಗಂಟಾಗಿದೆ. ಮೂರು ರಾಜ್ಯಗಳ ನಡುವಿನ ಜಲವಿವಾದ ಇತ್ಯರ್ಥಪಡಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು’ ಎಂದು ಬದಾಮಿ ತಾಲ್ಲೂಕಿನ ಕರಡಿಗುಡ್ಡದ ರೈತ ಮುಖಂಡ ಬಿ.ಎಚ್‌.ನರಿ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆದ ಮಹದಾಯಿ ಧರಣಿಯ 862ನೇ ದಿನ ಗುರುವಾರ ಅವರು ಮಾತನಾಡಿದರು. ‘ಪ್ರಧಾನಿ ಮೂರು ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆ ಕರೆದು, ಸಂಧಾನ ನಡೆಸಿ, ಸಮಸ್ಯೆ ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಅವರ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ಎಸ್‌.ಬಿ.ಜೋಗಣ್ಣವರ ಮಾತನಾಡಿ ‘ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಕುರಿತು ಇಲ್ಲಿನ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಯಾಕೆ ಬೇಕು, ಅವರು ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎಲ್‌.ಎಚ್‌.ಪೂಜಾರ, ಎಂ.ಎನ್‌.ಕಾರಂಜಯ್ಯ, ಬಸಯ್ಯ ಗಣಾಚಾರಿ, ನಾಗಪ್ಪ ಹಾಲೊಳ್ಳಿ, ಪಿ.ಎಫ್‌.ನರಿ, ಎಚ್‌.ವೈ.ಗೊಂಡಂಗಡಿ, ವಾಸು ಚವ್ಹಾಣ, ಸಿದ್ದಪ್ಪ ಚಂದ್ರತ್ನವರ, ಎಸ್‌.ಕೆ.ಗಿರಿಯಣ್ಣವರ, ವಿರೂಪಾಕ್ಷ ಹುಲಜೋಗಿ, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಸಾಬಳೆ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.