ADVERTISEMENT

ಬಾಗಿಲು ತೆರೆಯದ ಎಟಿಎಂ ಕೇಂದ್ರ; ಗ್ರಾಹಕರ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:37 IST
Last Updated 23 ಏಪ್ರಿಲ್ 2017, 5:37 IST

ಗಜೇಂದ್ರಗಡ: ಪಟ್ಟಣದಲ್ಲಿರುವ ರಾಷ್ಟ್ರೀ ಕೃತ ಬ್ಯಾಂಕುಗಳ ಎಟಿಎಂ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ, ಗ್ರಾಹಕರ ಪರದಾಟ ಹೇಳ ತೀರದಾಗಿದೆ.ಇಲ್ಲಿನ ರೋಣ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಮತ್ತು ಎಸ್.ಬಿ.ಐ ಬ್ಯಾಂಕ್ ಗಳ ಎಟಿಎಂ ಕೇಂದ್ರಗಳು ಸದಾ ಬಾಗಿಲು ಹಾಕಿಕೊಂಡಿರುತ್ತವೆ. ಇಲ್ಲವೇ ಬಾಗಿಲಿಗೆ ನೋಕ್ಯಾಶ್ ಎಂಬ ಫಲಕ ಹಾಕಲಾಗಿರುತ್ತದೆ. ಕಳೆದ ಹಲವು ತಿಂಗಳಿನಿಂದ ಈ ಪರಿಸ್ಥಿತಿ ಇದೆ. ಜೋಡು ರಸ್ತೆ ಮತ್ತು ಕುಷ್ಟಗಿ ರಸ್ತೆಯಲ್ಲಿ ಇರುವ ಇತರ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳ ಪರಿಸ್ಥಿತಿಯೂ ಇದೇ ರೀತಿ ಇದೆ.

ಈ ಕುರಿತು ಆಯಾ ಬ್ಯಾಂಕ್ ಮ್ಯಾನೇಜರ್‌ಗಳನ್ನು ಪ್ರಶ್ನಿಸಿದರೆ, ‘ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಹಣವಿಲ್ಲದ ಕಾರಣ ನಮ್ಮ ಎಟಿಎಂಗೆ ಲಕ್ಷಾಂತರ ರೂಪಾಯಿ ಹಾಕಿದರೂ ಒಂದು ದಿನ ದಲ್ಲಿ ಖಾಲಿಯಾಗುತ್ತದೆ. ಹೀಗಾಗಿ, ಮತ್ತೆ ಹಣ ಹಾಕುವವರೆಗೆ ಎಟಿಎಂ ಬಾಗಿಲು ಮುಚ್ಚುವುದು ಅನಿವಾರ್ಯ’ ಎಂದು ಸ್ಪಷ್ಟೀಕರಣ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT