ADVERTISEMENT

ಬಾಳಿಗೆ ಬೆಳಕಾದ ಗುರುವಿಗೆ ನಮನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 4:59 IST
Last Updated 1 ಸೆಪ್ಟೆಂಬರ್ 2017, 4:59 IST

ಗದಗ: ಪುಟ್ಟರಾಜ ಕವಿಗವಾಯಿಗಳ 7ನೇ ಪುಣ್ಯಸ್ಮರಣೆ ಅಂಗವಾಗಿ ಗುರು ವಾರ ಜಿಲ್ಲೆಯ ವಿವಿಧೆಡೆ, ವಿವಿಧ ಸಂಘಟನೆಗಳಿಂದ ಅನ್ನಸಂತರ್ಣಣೆ, ಸಂಗೀತ ಕಾರ್ಯಕ್ರಮಗಳು ನಡೆದವು. ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೀದರ, ಧಾರವಾಡ, ದಾವಣಗೆರೆ ಜಿಲ್ಲೆಗಳಿಂದ ಪಾದಯಾತ್ರೆ, ವಾಹನಗಳಲ್ಲಿ ಬಂದಿದ್ದ ಭಕ್ತಗಣ, ಜತೆಗೆ ತಂದಿದ್ದ ತರಕಾರಿ, ದವಸ ಧಾನ್ಯಗಳನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಆಶ್ರಮಕ್ಕೆ ನೀಡಿ, ಪುಟ್ಟರಾಜರ  ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದರು. 

ಬಳ್ಳಾರಿ ಜಿಲ್ಲೆಯ ಹೂವಿನಡಗಲಿ ತಾಲ್ಲೂಕಿನ ಹೊಳಲು ಸೇರಿ ವಿವಿಧೆಡೆ ಯಿಂದ ಸಾಕಷ್ಟು ಮಂದಿ ಪುಣ್ಯಾಶ್ರಮಕ್ಕೆ ಪಾದಾಯಾತ್ರೆ ಮೂಲಕ ಆಗಮಿಸಿದರು. ನಗರ ಪ್ರಮುಖ ವೃತ್ತಗಳಲ್ಲಿ ಪುಟ್ಟರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು. ನಗರದೆಲ್ಲೆಡೆ ಗುರುವಾರ ಸಂಭ್ರಮ ಮನೆ ಮಾಡಿತ್ತು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧರ ಬಾಳಿನ ಬೆಳಕು, ಸಂಗೀತ ದಿಗ್ಗಜ ಪುಟ್ಟ ರಾಜರ ಸ್ವರ ಸ್ಮರಣೆ ನಡೆಯಿತು. ನಾಡಿನ ವಿವಿಧೆಡೆಯಿಂದ ಆಗಮಿಸಿದ ಅಂಧ ಗಾಯಕರು ಸಂಗೀತದ ಮೂಲಕ ಗುರು ನಮನ ಸಲ್ಲಿಸಿದರು. ವಿವಿಧ ಭಜನಾ ಮಂಡಳಿಗಳು ಸಂಗೀತ ಪರಿಕರಗಳ ಜತೆ ಪುಟ್ಟರಾಜ ಗವಾಯಿಗಳು ರಚಿಸಿದ ಭಕ್ತಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು. ಮಹಿಳೆ ಯರು, ಮಕ್ಕಳು, ಯುವಕರು ಭಕ್ತಿ ರಸ ದಲ್ಲಿ ಮಿಂದೆದ್ದರು.

ADVERTISEMENT

ಅನ್ನಸಂತರ್ಪಣೆ: ಪುಣ್ಯಸ್ಮರಣೆ ಅಂಗ ವಾಗಿ ಆಟೊ ಚಾಲಕರ– ಮಾಲೀಕರ ಸಂಘ, ಸ್ಟೇಷನ್‌ ರಸ್ತೆ ವ್ಯಾಪಾರಿಗಳ ಸಂಘ, ಶ್ರೀರಾಮ ವಿವಿಧೋದ್ದೇಶಗಳ ಹಾಗೂ ಕ್ಷೇಮಾಭಿವೃದ್ಧಿ ಸಂಘದಿಂದ ಅನ್ನಸಂತರ್ಪಣೆ ನಡೆಯಿತು.

ಗದಗ ರೈಲು ನಿಲ್ದಾಣ, ಹಳೆಯ ಬಸ್ ನಿಲ್ದಾಣ, ಸ್ಟೇಷನ್ ರಸ್ತೆ, ಕಾಟನ್ ಮಾರು ಕಟ್ಟೆ ರಸ್ತೆ, ಕೆ.ಎಚ್. ಪಾಟೀಲ ವೃತ್ತ, ಭೀಷ್ಮ ಕೆರೆ ಹತ್ತಿರ, ಮುಳಗುಂದ ನಾಕಾ, ಪಂಚಾಕ್ಷರಿ ನಗರ, ಹಾತಲಗೇರಿ ನಾಕಾ, ಶಹಾಪುರ ಪೇಟೆ, ಜಿಲ್ಲಾ ಕ್ರೀಡಾಂಗಣ, ವೆಂಕಟೇಶ ಸಿನಿಮಾ ಮಂದಿರ ರಸ್ತೆ, ಬೆಟಗೇರಿಯ ತೆಂಗಿನಕಾಯಿ ಬಜಾರ್, ನಾಗಸಮುದ್ರ, ನಾರಾಯಣಪುರ, ನರ ಸಾಪುರ, ಕೋಟುಮಚಗಿಯಲ್ಲಿ ಅನ್ನ ಸಂತರ್ಪಣೆ ನಡೆಯಿತು. ನಗರದ ವಿವೇ ಕಾನಂದ ಬಡಾವಣೆ, ಬೆಟಗೇರಿ 27ನೇ ವಾರ್ಡ್‌ ಸೇರಿ ಹಲವೆಡೆ ವ್ಯಾಪಾರಿಗಳು, ಬಡಾವಣೆ ನಿವಾಸಿಗಳು ಪ್ರಮುಖ ಸ್ಥಳ ಗಳಲ್ಲಿ ವೇದಿಕೆ ನಿರ್ಮಿಸಿ, ಪುಟ್ಟರಾಜರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಸಾರ್ವ ಜನಿಕರಿಗೆ ಅನ್ನಸಂತರ್ಪಣೆ ಮಾಡಿದರು. ಬುಧವಾರ ರಾತ್ರಿಯಿಂದಲೇ ಆಶ್ರಯಮ ದಲ್ಲಿ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.