ADVERTISEMENT

ಬೆಟಗೇರಿ: ವೈಭವದ ಜೋಡಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 6:17 IST
Last Updated 30 ಜನವರಿ 2015, 6:17 IST
ಬೆಟಗೇರಿಯಲ್ಲಿ ಗುರುವಾರ ಸಂಜೆ ಅದ್ಧೂರಿಯಾಗಿ ಜೋಡಿ ರಥೋತ್ಸವ ನೆರವೇರಿತು
ಬೆಟಗೇರಿಯಲ್ಲಿ ಗುರುವಾರ ಸಂಜೆ ಅದ್ಧೂರಿಯಾಗಿ ಜೋಡಿ ರಥೋತ್ಸವ ನೆರವೇರಿತು   

ಬೆಟಗೇರಿ: ಇಲ್ಲಿನ ನರಸಾಪೂರದ ರಂಗಾ­ವಧೂತರ ತಪೋ ಭೂಮಿಯಲ್ಲಿ ವಿರಪ್ಪಜ್ಜ ಹಾಗೂ ರಂಗಪ್ಪಜ್ಜ ಗುರು– ಶಿಷ್ಯರ ಜೋಡು ರಥೋತ್ಸವ ಗುರು­ವಾರ ಭಕ್ತ ಸಾಗರದ ನಡುವೆ ಸಂಜೆ ವೈಭವದಿಂದ ನೇರವೇರಿತು. 

ನರಸಾಪೂರದ ಹನುಮಂತ ದೇವರ ಗುಡಿಯಿಂದ ವಿರಪ್ಪಜ್ಜನ ತೇರನ್ನು ಅಲಂಕೃತಗೊಳಿಸಿ ವೇದ, ಘೋಷ­ದೊಂದಿಗೆ ಬೆಟಗೇರಿಯ ರಂಗಪ್ಪಜ್ಜನ ಮಠಕ್ಕೆ ತರಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಶಿವ­ಕುಮಾರ ಅಗ್ಗಿಮಠ ಹಾಗೂ ಭಕ್ತರು ಪೂಜೆ ಸಲ್ಲಿಸಿದ ಬಳಿಕ ಜೋಡು ರಥೋತ್ಸ­ವಕ್ಕೆ ಚಾಲನೆ ದೊರೆಯಿತು. ಭಜನಾ ತಂಡ, ಡೊಳ್ಳಿನ ಜಾಂಜ್‌ ಮೇಳ, ಗೊಂಬೆ  ವೇಷಧಾರಿಗಳು ಹೆಜ್ಜೆ ಹಾಕುವ ಮೂಲಕ ರಥೋತ್ಸವಕ್ಕೆ ಮೆರುಗು ನೀಡಿದವು.

ಗಣ್ಯರಾದ ಎಂ.ಆರ್. ರಾಜೋಳಿ, ಗಣೇಶಸಿಂಗ್ ಬ್ಯಾಳಿ, ಹೇಮಣ್ಣ ಮುಳುಗುಂದ, ಎಸ್. ಆರ್. ಬಸವಾ, ನಿಂಗಪ್ಪ ಚೇಗೂರ, ಮೈಲಾರೆಪ್ಪ, ಅರಣಿ, ರುದ್ರಪ್ಪಾ ಬಾದರದಿನ್ನಿ, ವಿರಣ್ಣ ಮುಳ್ಳಾಳ, ಬೋಜಪ್ಪಾ ಹೆಗಡಿ,   ರಂಗಪ್ಪ ಹುಯಿಲ­ಗೋಳ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.