ADVERTISEMENT

ಭೂ ವಿಜ್ಞಾನಿಗಳು ಗುರುತಿಸಿದಲ್ಲಿ ನೀರಿಲ್ಲ: ಕೊಳವೆಬಾವಿಗಾಗಿ ಪೂಜಾರಿಗಳ ಮೊರೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:44 IST
Last Updated 13 ಮಾರ್ಚ್ 2017, 6:44 IST
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದಲ್ಲಿ ಸ್ವಾಮೀಜಿ ಗುರುತಿಸಿದ್ದ ಜಾಗದಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಉಕ್ಕುತ್ತಿರುವುದು.
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದಲ್ಲಿ ಸ್ವಾಮೀಜಿ ಗುರುತಿಸಿದ್ದ ಜಾಗದಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಉಕ್ಕುತ್ತಿರುವುದು.   

ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮದಲ್ಲಿ ಭೂವಿಜ್ಞಾನಿಗಳು ಗುರುತಿಸಿ ಸ್ಥಳದಲ್ಲಿ ನೀರು ಬಾರದೇ, ಸ್ವಾಮೀಜಿ, ಪುರೋಹಿತ–ಪೂಜಾರಿಗಳು ಗುರುತಿಸಿದ ಸ್ಥಳದಲ್ಲಿ ಆಶ್ಚರ್ಯವೆಂಬಂತೆ ಸಾಕಷ್ಟು ನೀರು ದೊರಕಿದೆ.

ಈ ಗ್ರಾಮದಲ್ಲಿ ಮೊದಲು ಭೂ ವಿಜ್ಞಾನಿಗಳು ಎರಡು ಮೂರು ಕಡೆ ನೀರಿನ ಮೂಲ ಗುರುತಿಸಿದ್ದರು. ಆದರೆ ಅಲ್ಲಿ 400–500 ಅಡಿ ಕೊರೆಯಿಸಿದರೂ ನೀರು ಸಿಗದ ಕಾರಣ ಕಂಗೆಟ್ಟ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸದಸ್ಯರು, ಸ್ಥಳೀಯರು ರೋಣ ತಹಶೀಲ್ದಾರ್‌ ಶಿವಲಿಂಗ ವಾಲಿ ಅವರನ್ನು ಭೇಟಿಯಾಗಿ, ಸ್ವಾಮೀಜಿ ಮತ್ತು ಪೂಜಾರಿಗಳ ನೆರವು ಪಡೆಯೋಣ ಎಂದು ಸಲಹೆ ನೀಡಿದರು.

ಆಗ ನರಗುಂದ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಹುಚ್ಚಯ್ಯಸ್ವಾಮಿ ಹಿರೇಮಠ ಮತ್ತು ಕುಷ್ಟಗಿ ತಾಲೂಕಿನ ಸೇಬನಕಟ್ಟಿ ಗ್ರಾಮದ ರುದ್ರಗೌಡ ಪಾಟೀಲ ಅವರನ್ನು ಕರೆಯಿಸಿ ಜಲ ಮೂಲ ಗುರುತಿಸಲಾಯಿತು. ಇಬ್ಬರೂ ಒಂದೇ ಕಡೆ ಎರಡು ಜಲಮೂಲ ಗುರು ತಿಸಿದರು. ಅಲ್ಲಿ ಕೊರೆಯಿಸಿದಾಗ 240 ಅಡಿಗೆ ಸುಮಾರು 3ರಿಂದ 3.5 ಇಂಚು ನೀರು, ಇನ್ನೊಂದು ಕಡೆ 320 ಅಡಿಗೆ 3 ರಿಂದ 4 ಇಂಚು ನೀರು ದೊರಕಿತು.

ADVERTISEMENT

‘ಸ್ಥಳೀಯರ ಮತ್ತು ಗ್ರಾಮ ಪಂಚಾ ಯ್ತಿಯ ಒತ್ತಾಯದ ಮೇರೆಗೆ ಹೊಸ ಪ್ರಯತ್ನ ಮಾಡಲಾಗಿದ್ದು ,ಇದು ಯಶಸ್ವಿ ಯಾಗಿದ್ದು ಸಂತಸ ತಂದಿದೆ’ ಎಂದು ತಹಶೀಲ್ದಾರ್‌ ಶಿವಲಿಂಗ ವಾಲಿ ಮತ್ತು ರಾಜೂರ ಗ್ರಾ.ಪಂ. ಅಧ್ಯಕ್ಷ ಸುರೇಶಗೌಡ ಪಾಟೀಲ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.