ADVERTISEMENT

ಮಕ್ಕಳಲ್ಲಿ ಸಂಸ್ಕೃತಿ ಅರಿವು ಮೂಡಿಸಿ

ಮುಂಡರಗಿ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:40 IST
Last Updated 16 ಫೆಬ್ರುವರಿ 2017, 11:40 IST
ಮುಂಡರಗಿ: ಮಕ್ಕಳ ಮನಸ್ಸು ಶುಭ್ರ ಆಗಿರುವುದರಿಂದ ಅವರನ್ನು ದೇವರಿಗೆ ಹೋಲಿಸಲಾಗುತ್ತಿದೆ. ಬೆಳೆಯುತ್ತಿರುವ ಮಕ್ಕಳೊಂದಿಗೆ ನಾವೆಲ್ಲ ನಮ್ಮ ಸಂಸ್ಕೃತಿ, ಪರಂಪರೆ, ನೆಲ– ಜಲಗಳ ಕುರಿತು ಚರ್ಚಿಸಬೇಕು ಎಂದು ನಿಜಗುಣಪ್ರಭು ತೊಂಟದಾರ್ಯ ಸ್ವಾಮೀಜಿ ಸಲಹೆ ನೀಡಿದರು.
 
ಪಟ್ಟಣದ ಜಗದ್ಗುರು ತೋಂಟ ದಾರ್ಯ ಶಾಖಾ ಮಠದಲ್ಲಿ ಏರ್ಪಡಿಸಿದ್ದ 7ನೇ ಮಾಸಿಕ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
 
ಇಂದಿನ ಮಕ್ಕಳು ನಾಳಿನ ನಾಗರಿಕರಾಗಿದ್ದು, ತಂದೆ– ತಾಯಿಗಳು ಹಾಗೂ ನೆರೆ ಹೊರೆಯವರು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ನಾಗರಿಕ ಪ್ರಜ್ಞೆ ಹಾಗೂ ಉತ್ತಮ ಸಂಸ್ಕಾರ ನೀಡಬೇಕು. ವಿದ್ಯಾವಂತರ ಕುಟುಂಬದಲ್ಲಿ ಜನಿಸಿದ ಮಗುವಿಗೂ ಅವಿದ್ಯಾವಂತರ ಕುಟುಂಬ ದಲ್ಲಿ ಜನಿಸಿರುವ ಮಗುವಿಗೂ ಬಹಳ ವ್ಯತ್ಯಾಸವಿರುತ್ತದೆ ಎಂದು ತಿಳಿಸಿದರು.
 
ಡಾ.ನಿಂಗು ಸೊಲಗಿ ಮಾತನಾಡಿ, ಬಸವಣ್ಣನವರನ್ನೂ ಒಳಗೊಂಡಂತೆ ಬಹುತೇಕ ಶರಣರು ಸಮಾನ್ಯ  ಜನತೆಗೆ ತಲುಪುವಂತೆ ವಚನಗಳನ್ನು ರಚನೆ ಮಾಡಿದರು. ಮಕ್ಕಳಿಗಾಗಿ ಶರಣರ ವ್ಯಕ್ತಿ ಚಿತ್ರಣ ಹಾಗೂ ವಚನಗಳನ್ನು ಆಧರಿಸಿ ಕತೆ, ಕವಿತೆ, ನಾಟಕಗಳು, ಜೀವನ ಚರಿತ್ರೆಗಳು ಹೊರಬರಬೇಕು ಎಂದು ತಿಳಿಸಿದರು.
 
ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಉಪಾಧ್ಯಕ್ಷ ವಿರುಪಾಕ್ಷಗೌಡ ಮರಿಗೌಡ್ರ, ಸದಸ್ಯರಾದ ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶ ಅಂಗಡಿ, ಹೇಮಾವತಿ ಅಬ್ಬೀಗೇರಿ ಅವರನ್ನು ಶ್ರೀಗಳು ಸನ್ಮಾನಿಸಿದರು. 
 
ಗುರುಪ್ರಸಾದ ಲಿಂಬಿಕಾಯಿ ಧರ್ಮ ಗ್ರಂಥ ಪಠಣ ಮಾಡಿದರು. ಅಂಜಲಿ ಜವಳಗೇರಿ ವಚನ ಚಿಂತನ ಮಾಡಿದರು. ಗುತ್ತಿಗೆದಾರ ಡಿ.ಡಿ.ಮೋರನಾಳ ಶಿವಾ ನುಭವದ ಭಕ್ತಿಸೇವೆ ವಹಿಸಿಕೊಂಡಿ ದ್ದರು. ಧ್ರುವಕುಮಾರ ಹೊಸಮನಿ, ಈಶ್ವರಪ್ಪ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ವೀರಣ್ಣ ತುಪ್ಪದ, ಎ.ಪಿ.ದಂಡಿನ, ಗಿರೀಶ ಗೌಡ ಪಾಟೀಲ, ಎ.ಎಸ್. ಮಕಾಂದಾರ, ಸೊಲಬಣ್ಣ, ಉಮೇಶ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.