ADVERTISEMENT

‘ಮಕ್ಕಳಿಗೆ ಕಾನೂನು ಅರಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 8:08 IST
Last Updated 24 ಜುಲೈ 2017, 8:08 IST

ರೋಣ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯವಾಗಿದೆ. ಅದರಲ್ಲಿಯೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಕಾನೂನಿನ ಅರಿವು ಮೂಡಿದರೆ ಉತ್ತಮ ಸಮಾಜ ವನ್ನು ರೂಪಿಸಲು ಸಹಾಯಕವಾಗುತ್ತದೆ ಎಂದು ಹಿರಿಯ ಶ್ರೇಣೆಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ವಿ.ನಾಗಮಣಿ ಹೇಳಿದರು.

ಅವರು ಭಾನುವಾರ ಪಟ್ಟಣದ ಸರ್ಕಾರಿ ಪರಶಿಷ್ಟ ಪಂಗಡಗಳ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದಲ್ಲಿ ತಾಲ್ಲೂಕ ಕಾನೂನು ಸೇವೆಗಳ ಸಮೀತಿ ರೋಣ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಜರುಗಿದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರಲ್ಲಿ ಕಾನೂ ನಿನ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇರುವುದಿಲ್ಲ ಈ ನಿಟ್ಟಿನಲ್ಲಿ ನಿರ್ಗತಿಕ ಅನಕ್ಷರಸ್ಥ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಭಾರತ ಶೇ 70ರಷ್ಟು ಯುವಕರನ್ನು ಹೊಂದಿದ ದೇಶವಾಗಿದೆ. ಇಂದಿನ ಮಕ್ಕಳು ಮುಂದಿನ ದೇಶದ ಉತ್ತಮ ಪ್ರಜೆಗಳು ಅವರಿಗೆ ಕಾನೂನು ಎಂದರೆ ಏನು? ನ್ಯಾಯಾಲಯಗಳಲ್ಲಿ ಯಾವ ರೀತಿ ಪ್ರಕರಣಗಳು ಬರುತ್ತವೆ ಮತ್ತು ಅವುಗಳಿಗೆ ಹೇಗೆ ತೀರ್ಪು ನೀಡಲಾಗುತ್ತದೆ.

ಎಂಬ ವಿಚಾರಗಳನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋ ಜಿಸುವ ಅಗತ್ಯವಾಗಿದೆ. ಮಕ್ಕಳು ಕಾನೂ ನುಗಳ ಬಗ್ಗೆ ಅರಿವು ಮೂಡಿಸಿಕೊಂಡು ತಮ್ಮ ಪಾಲಕರಿಗೂ ಕಾನೂನಿನ ಅರಿವು ಮೂಡಿಸಬೇಕು ಎಂದು ಸೂಚಿಸಿರು.

ವಕೀಲರಾದ ಪಿ.ಎಸ್.ಪಲ್ಲೇದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಜನನ ಮತ್ತು ಮರಣ ನೋಂದಣಿ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ, ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣಗಳು ಹಾಗೂ ಅದನ್ನು ತಡೆಯವ ಮಾರ್ಗಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ರಾಯಭಾಗಿ, ಉಪಾಧ್ಯಕ್ಷ ವಿ.ಡಿ.ಪವಾ ಸ್ಕರ್, ಸರಕಾರಿ ಅಭಿಯೋಜಕರಾದ ಎನ್.ಆರ್.ಆರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಆರ್.ಬೇವಿನ ಮರದ, ಬಿ.ಎಸ್.ಸಜ್ಜನರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.