ADVERTISEMENT

ಮಲಪ್ರಭಾ ಕಾಲುವೆಗಳ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 10:09 IST
Last Updated 14 ಜುಲೈ 2017, 10:09 IST
ರೋಣ ತಾಲ್ಲೂಕಿನ ಬೆಳವಣಕಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಾಸಕ ಬಿ.ಆರ್.ಯಾವಗಲ್ ಚಾಲನೆ ನೀಡಿದರು
ರೋಣ ತಾಲ್ಲೂಕಿನ ಬೆಳವಣಕಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಾಸಕ ಬಿ.ಆರ್.ಯಾವಗಲ್ ಚಾಲನೆ ನೀಡಿದರು   

ರೋಣ: ಸಾಲದಲ್ಲಿ ಸಿಲುಕಿದ ರೈತರಿಗೆ ಸಾಲ ಮನ್ನಾದಿಂದ ಲಾಭವಾಗಿದೆ ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು. ಅವರು ಮಂಗಳವಾರ ತಾಲ್ಲೂಕಿನ ಕೌಜಗೇರಿ, ಬೆಳವಣಕಿ, ಮಲ್ಲಾಪುರ ಗ್ರಾಮಗಳಲ್ಲಿ ಸಿ.ಸಿ.ರಸ್ತೆ, ಮೇಲ್ಮಟ್ಟದ ಜಲಗಾರ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನರಗುಂದ ಮತ್ತು ರೋಣ ತಾಲ್ಲೂ ಕಿನ ರೈತರ ಜನರ ಬಹುದಿನದ ಬೇಡಿಕೆ ಯಾದ ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆ ಇತರ್ಥ್ಯ ಮತ್ತು ಶೀಘ್ರ ಅನುಷ್ಠಾನಕ್ಕೆ ನಡೆದಿರುವ ಹೋರಾಟಕ್ಕೆ ರೈತರ ಮತ್ತು ಜನರ ಆಗ್ರಹಕ್ಕೆ ಶೀಘ್ರವೆ ಕಾಲ ಒದಗಿ ಬಂದಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಮಲ್ಲಪ್ರಭಾ ಬಲದಂಡೆ ಕಾಲುವೆಗಳ ಪುನ:ಶ್ಚೇತನಕ್ಕೆ ಬಿಡುಗಡೆಯಾದ ₹ 1100 ಕೋಟಿ ಅನುದಾನಕ್ಕೆ ಬಿಜೆಪಿ ಮುಖಂಡರು  ತಡೆ ಒಡ್ಡುತ್ತಿದ್ದಾರೆ. ಈಗಾಗಲೇ ನವಲಗುಂದ, ರೋಣ ನರಗುಂದ ಸೇರಿ ವಿವಿಧೆಡೆ ನಿರ್ಮಾಣಗೊಂಡ ಮಲಪ್ರಭಾ ಕಾಲುವೆಗಳು ದುಸ್ಥಿತಿ ಯಲ್ಲಿದ್ದು ಇದರಿಂದ ನೀರು ಹರಿಯಲು ಅಡೆತಡೆಯಾಗತ್ತಿದೆ.

ADVERTISEMENT

ಕೆಲ ಭಾಗಗಳಲ್ಲಿ ಕಾಲುವೆಗಳ ಮೂಲಕ ನೀರಾವರಿಗೆ ಹಿನ್ನಡೆಯಾಗುತ್ತಿದೆ ಇದರಿಂದ ಸತತ ಬರದ ತೊಂದರೆಗೆ ಸಿಲುಕಿದ ರೈತರಿಗೆ ತೊಂದರೆಯಾಗಿದೆ.  ಇದರಿಂದ ಸರ್ಕಾರ ಯಾವುದೇ ವಿರೋಧಗಳಿಗೆ ಗಮನ ನೀಡದೇ ಕಾಲುವೆಗಳ ಪುನಶ್ಚೇತನ ಕೈಗೊಳಲಿದೆ ಎಂದರು.

ನಿವೃತ ಪ್ರಾಧ್ಯಾಪಕ ಪಿ.ಎಸ್. ಔದಕ್ಕನವರ, ವಕೀಲ ಜಿ.ಎಂ.ಕಲಹಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಬೇಡಿಕೆಗಳನ್ನು ಶಾಸಕರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ರೇಣವ್ವ ಚಲವಾದಿ, ಉಪಾಧ್ಯಕ್ಷ ತಪ್ಪನಗೌಡ ಆಡೂರ, ಮಲ್ಲಣ್ಣ ಪಾಟೀಲ, ಶಿವಣ್ಣ ಅರಹುಣಸಿ, ಶಂಕರಗೌಡ ಪಾಟೀಲ, ವಿಜಯಕುಮಾರ ತೋಟರ, ಹೇಮಾವತಿ ಕಡದಳ್ಳಿ, ವಿರೂಪಾಕ್ಷಗೌಡ ಪಾಟೀಲ, ರಾಮ ಲಿಂಗಗೌಡ ಸುರಕೋಡ, ಬಸವರಾಜ ಮಂತೂರ, ಉಮೇಶ ಸವಡಿ, ರಮೇಶ ನಾಗನೂರ, ವಿ.ಬಿ.ಮೆಣಸಗಿ, ಬಿ.ಎಸ್. ಮೊಕಾಶಿ, ಶರಣಪ್ಪ ಚಟರಕಿ, ಆರ್.ಎಸ್. ಪಾಟೀಲ, ಶಿವಪ್ಪ ಹಾಲಬಾವಿ, ರತ್ನವ್ವ ಹೊಂಬಳ, ಗುರುಪಾದಪ್ಪ ಕುರಹಟ್ಟಿ, ವೀರಪ್ಪ ತಾಳಿ, ನೀಲವ್ವ ಶಿವಶಿಂಪರ, ಸೋಮಶೇಖರ ಚೇರದ, ಗಣೇಶ ಚಿಕ್ಕ ರಡ್ಡಿ ಪಾಲ್ಗೊಂಡಿದ್ದರು. ಬಸವರಾಜ ಸಜ್ಜನರ ಸ್ವಾಗತಿಸಿ, ಎಸ್.ಬಿ.ಶಿವಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.