ADVERTISEMENT

ಮಳೆಯ ಕೊರತೆ: ಶೇ 20ರಷ್ಟು ಸಸಿಗಳು ನಾಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:54 IST
Last Updated 11 ಜನವರಿ 2017, 6:54 IST

ಡಂಬಳ: ಐತಿಹಾಸಿಕ ಹಿನ್ನೆಲೆಯುಳ್ಳ ಕಪ್ಪತ್ತಗುಡ್ಡದ ಪ್ರದೇಶದಲ್ಲಿನ ಪ್ರಕೃತಿ ದತ್ತವಾದ ಗಿಡಗಳು ವಿವಿಧ ಕಾರಣ ಗಳಿಂದ ನಾಶವಾಗುತ್ತಿದ್ದರೆ  ಮತ್ತೊಂದ ಡೆ ಮಳೆಯ ಅಭಾವದಿಂದ  ಅರಣ್ಯ ಇಲಾಖೆಯ ವತಿಯಿಂದ ನೆಟ್ಟಿರುವ ಸಾವಿರಾರು ಸಸಿಗಳು  ಒಣಗುತ್ತಿದ್ದು , ಸಸಿಗಳ ಸಂರಕ್ಷಣಿಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮುಂಡರಗಿ, ರೋಣ, ಗದಗ, ಶಿರಹಟ್ಟಿ ತಾಲ್ಲೂಕಿನಲ್ಲಿ ಒಟ್ಟು ಸುಮಾರ 44 ಸಾವಿರ ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಈ ಭಾಗದಲ್ಲಿ ವಾಸಿಸುವ  ಜನರು ಕಪ್ಪತ್ತಗುಡ್ಡದೊಂದಿಗೆ ಭಾವನಾ ತ್ಮಕವಾದ ಸಂಬಂಧವನ್ನು ಹೊಂದಿ ದ್ದಾರೆ. ಕಾಡು ಬೆಳೆಸಿ, ನಾಡು ಉಳಿಸ ಬೇಕು ಎನ್ನುವ ದೈಯವಾಕ್ಯವನ್ನು ಸಾಭಿತಪಡಿಸಲು ಅರಣ್ಯ ಇಲಾಖೆಯ ವತಿಯಿಂದ ಡಂಬಳ ಸಮೀಪದ ಕಪ್ಪತ್ತಗುಡ್ಡದ ವ್ಯಾಪ್ತಿಯ ಕಲ್ಲಪ್ಪನ ಕಣವಿಯಲ್ಲಿ 2015-16ನೇ ಸಾಲಿನಲ್ಲಿ ಮಳೆಗಾಲದ ನಡುತೋಪು ಅರಣ್ಯ ಇಲಾಖೆಯ ಸರ್ವೆ ನಂಬರ್ 346ಪಿ 347ಪಿ ರಲ್ಲಿ  ಒಟ್ಟು 82575   ಸಸಿಗಳನ್ನು 75 ಹೇಕ್ಟರ್ ಪ್ರದೇಶದಲ್ಲಿ ಪತ್ರಿಗಿಡ, ಶಿವಾನಿ, ಬೋಳಲ, ಹೊಂಗಿ, ನೆಲ್ಲಿ, ಗೊಬ್ಬರ ಗಿಡ ಸೇರಿದಂತೆ     ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ.

ಆದರೆ ನೆಟ್ಟಿರುವ ಸಸಿಗಳಲ್ಲಿ ಮಳೆ ಯ ಅಭಾವದಿಂದ ಶೇ.20ರಷ್ಟು ಸಸಿ ಗಳು ಒಣಗಿದ್ದು   ಮಳೆಗಾಲದಲ್ಲಿ ಗರಿಷ್ಟ ಪ್ರಮಾಣದಲ್ಲಿ ಮಳೆಯಾಗದೆ ಹೋದರೆ ಗಿಡಗಳು  ನಾಶವಾಗುವ ಪ್ರಮಾಣ ಶೇ.30 ರಷ್ಟಕ್ಕೆ  ಏರಿಕೆಯಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮತಿ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಕೇವಲ ಸಸಿ ನೆಟ್ಟರೆ ಸಾಲದು, ಅವುಗಳ ಸಂರಕ್ಷಣೆಗೆ ಮಾಡಬೇಕು ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡ ಬೇಕು. ಮತ್ತು ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಡೋಣಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ ಒತ್ತಾಯಿಸಿದ್ದಾರೆ.
- ಲಕ್ಷ್ಮಣ ಎಚ್ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.