ADVERTISEMENT

‘ಮಹಿಳಾ ಸಾಕ್ಷರತೆಯಿಂದ ದೇಶದ ಪ್ರಗತಿ ಸಾಧ್ಯ’

ರಾಣಿ ಚನ್ನಮ್ಮ ವಸತಿ ನಿಲಯ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:54 IST
Last Updated 17 ಮಾರ್ಚ್ 2018, 9:54 IST

ಶಿರಹಟ್ಟಿ: ‘ಮಹಿಳೆಯರು ಶಿಕ್ಷಣ ಪಡೆದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜ್ಯ ಸರ್ಕಾರ ಮಹಿಳಾ ಶಿಕ್ಷಣ ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಶುಕ್ರವಾರ ತಾಲ್ಲೂಕಿನ ವರವಿ ಗ್ರಾಮದ ಸಮೀಪ ಕಿತ್ತೂರು ಚನ್ನಮ್ಮ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಅನಿವಾರ್ಯ. ಬೇಡಿಕೆಗಳು ಈಡೇರದೆ ಇದ್ದಲ್ಲಿ ಹೋರಾಟದ ಮೂಲಕ ಪಡೆದುಕೊಳ್ಳುವುದು ತಪ್ಪಲ್ಲ. ಆದರೆ ಹೋರಾಟ ನ್ಯಾಯಯುತ ಮತ್ತು ಶಾಂತಿಯುತವಾಗಿರಬೇಕು’ ಎಂದರು.

ಮಾಜಿ ಶಾಸಕ ಎಸ್.ಎನ್.ಪಾಟೀಲ, ಜಿ.ಎಸ್.ಗಡ್ಡದೇವರಮಠ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಉಮ ಹೊನಗಣ್ಣವರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬುಡನಶಾ ಮಕಾಂದರ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಪಿ.ಬಳಿಗಾರ, ಪಟ್ಟಣ ಪಂಚಾಯ್ತಿ ಸದಸ್ಯ ಎಚ್.ಡಿ.ಮಾಗಡಿ, ಸಂತೋಷ ಕುರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ADVERTISEMENT

ಸಿ.ಕೆ.ಮುಳಗುಂದ, ಬಾಲಚಂದ್ರ ಇಟಗಿ, ದೃವರಾಜ ಹೊನ್ನಪ್ಪನವರ, ದೇವಪ್ಪ ಲಮಾಣಿ, ಯು.ಎನ್. ಹೊಳಲಪೂರ, ಈರಣ್ಣ ಅಂಗಡಿ, ಮುತ್ತು ಪೋತರಾಜ, ಮಂಜು ಘಂಟಿ, ಗಂಗಮ್ಮ ಗದ್ದಿ, ಜಯಕ್ಕ ಕಳ್ಳಿ, ಶಿವನಗೌಡ ಪಾಟೀಲ, ಶಿವು ಕಬ್ಬೇರ, ಎ.ವೈ.ನವಲಗುಂದ, ಮಹಂತೇಶ ದಶಮನಿ, ಅಕ್ಬರ ಯಾದಗಿರಿ, ಸಿದ್ರಾಮಯ್ಯ ಹಾವೇರಿಮಠ, ಮುಖ್ಯಶಿಕ್ಷಕ ನಾಗರಾಜ ಕಳಸಾಪೂರ, ಎಂ.ಕೆ.ಲಮಾಣಿ, ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ.ಹರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.