ADVERTISEMENT

ಮಾರ್ಕಂಡೇಶ್ವರ ಜಯಂತಿ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:25 IST
Last Updated 3 ಫೆಬ್ರುವರಿ 2017, 6:25 IST

ಗದಗ: ಮಾರ್ಕಂಡೇಶ್ವರ 60ನೇ ಜಯಂ­ತ್ಯು­ತ್ಸವದ ಅಂಗವಾಗಿ ಬೆಟ­ಗೇರಿಯ ಮಾರ್ಕಂಡೇಶ್ವರ ದೇವಸ್ಥಾನ ಪದ್ಮಸಾಲಿ ಸಮಾಜ ಟ್ರಸ್ಟ್‌ ಕಮಿಟಿ­ಯಿಂದ ನಗರದಲ್ಲಿ ಮಾರ್ಕಂಡೇಶ್ವರ ಭಾವಚಿತ್ರದ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು.

ಮೆರವಣಿಗೆಗೆ ಪದ್ಮಸಾಲಿ ಸಮಾಜದ ಅಧ್ಯಕ್ಷ ಮಾರ್ಕಂಡೇಪ್ಪ ಭಂಡಾರಿ, ಮಾಜಿ ಅಧ್ಯಕ್ಷ ಚಿದಾನಂದಪ್ಪ ಪೊಪ್ತಿ, ಟ್ರಸ್ಟ್‌ ಕಮಿಟಿ ಅಧ್ಯಕ್ಷ ರಾಮಕೃಷ್ಣಪ್ಪ ದೇವರಕೊಂಡಿ, ಉಪಾಧ್ಯಕ್ಷ ವೆಂಕಣ್ಣ ಜೇರಬಂಡಿ, ಉತ್ಸವ ಕಮಿಟಿ ಅಧ್ಯಕ್ಷ ಗಣೇಶ ದಾಸಾ ಮಾಜಿ ಅಧ್ಯಕ್ಷ ರಾಮು ಜೇರಬಂಡಿ ಚಾಲನೆ ನೀಡಿದರು.
ಬೆಟಗೇರಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ, ಮತ್ತೆ ಮಾರ್ಕಂಡೇಶ್ವರ ದೇವಸ್ಥಾನಕ್ಕೆ ಮರಳಿತು. 50ಕ್ಕೂ ಹೆಚ್ಚು ಮಹಿಳೆಯರು ಆರತಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯ ಮುನ್ನ ಮಾರ್ಕಂಡೇಶ್ವರ ಸ್ವಾಮಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ ನಡೆಯಿತು. ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ವೆಂಕಟೇಶ ಭೀಮಪಲ್ಲಿ, ಈರಣ್ಣ ಭಂಡಾರಿ, ವೆಂಕಟೇಶ ರೇವಣಕಿ, ಸೋಮಣ್ಣ ಕೊಂಗತಿ, ಹನಮಂತಪ್ಪ ನೀಲಿ, ಅಜ್ಜಪ್ಪ ಶ್ರೀರಾಂ, ಭೀಮಣ್ಣ ಜೇರಬಂಡಿ, ಸಿದ್ದಪ್ಪ ಶಾಖಾ, ಮಂಜು ಬಿಜ್ಜಿ, ರಂಗಪ್ಪ ನೀಲಿ, ರವಿ ಚುಂಚಾ, ಸೋಮಶೇಖರ ವನ್ನಾಲ, ದಿನೇಶ ದೇವರಕೊಂಡಿ, ಕೃಷ್ಣಾ ನರಾಲ, ಶ್ರೀನಿವಾಸ ವನ್ನಾಲ, ನಾರಾಯಣ ಪೊಪ್ತಿ, ಮಾರುತಿ ಕೊಂಗತಿ, ಶ್ರೀನಿವಾಸ ಚುಂಚಾ, ಶಿವು ವಗ್ಗಾ, ಮಂಜು ಪೆನಗೊಂಡ್ಲ, ವಾಸು ಮೆಟಗಲ್ಲ, ಪರಶುರಾಮ ಕೆಂಜರ್ಲಿ, ರಾಜೇಶ ತಾಡೋರ, ನಾಮದೇವ ಪುಂಜಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.