ADVERTISEMENT

ಮೋಡ ಬಿತ್ತನೆ ಆರಂಭ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 5:24 IST
Last Updated 3 ಸೆಪ್ಟೆಂಬರ್ 2017, 5:24 IST
ಗದಗ–ಹುಬ್ಬಳ್ಳಿ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಥಾಪಿಸಿರುವ ರಾಡಾರ್‌ ಕೇಂದ್ರವನ್ನು  ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಶನಿವಾರ ರಾತ್ರಿ ಪರಿಶೀಲಿಸಿದರು. ಇಲೆಕ್ಟ್ರಿಕಲ್ ಎಂಜಿನಿಯರ್‌ ರೇಯಾನ್, ಟೆಕ್ನಿಕಲ್ ಎಂಜಿನಿಯರ್ ಆರೋಗ್ಯಸ್ವಾಮಿ ಕಂಬಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ.ಶೇಖ್, ಗುರಣ್ಣ ಬಳಗಾನೂರ ಇದ್ದಾರೆ
ಗದಗ–ಹುಬ್ಬಳ್ಳಿ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಥಾಪಿಸಿರುವ ರಾಡಾರ್‌ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಶನಿವಾರ ರಾತ್ರಿ ಪರಿಶೀಲಿಸಿದರು. ಇಲೆಕ್ಟ್ರಿಕಲ್ ಎಂಜಿನಿಯರ್‌ ರೇಯಾನ್, ಟೆಕ್ನಿಕಲ್ ಎಂಜಿನಿಯರ್ ಆರೋಗ್ಯಸ್ವಾಮಿ ಕಂಬಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ.ಶೇಖ್, ಗುರಣ್ಣ ಬಳಗಾನೂರ ಇದ್ದಾರೆ   

ಗದಗ: ‘ಸೆ.3ರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಚ್.ಕೆ.ಪಾಟೀಲ ಇಲ್ಲಿ ಶನಿವಾರ ಹೇಳಿದರು. ಗದಗ–ಹುಬ್ಬಳ್ಳಿ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಥಾಪಿಸಿರುವ ರಾಡಾರ್‌ ಕೇಂದ್ರವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮೋಡ ಬಿತ್ತನೆಗಾಗಿ ವಿಶೇಷ ಎರಡು ವಿಮಾನಗಳು ಸೆ. 3ರಂದು ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಂದ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಭಾಗಗಳಲ್ಲಿ ಮೋಡ ಬಿತ್ತನೆ ನಡೆಯಲಿದೆ’ ಎಂದು ಅವರು ತಿಳಿಸಿದರು.

‘ಗದಗ ಕೇಂದ್ರದಿಂದ 200 ಕಿ.ಮೀ.ವ್ಯಾಪ್ತಿಯ ಮೋಡಗಳಲ್ಲಿ ನೀರಿನ ಸಾಂಧ್ರತೆ, ತೇವಾಂಶ ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ರಾಡಾರ್‌ ನೀಡಲಿದೆ. ವಿಮಾನ ಪೈಲಟ್, ರಾಡಾರ್‌ ಕೇಂದ್ರದ ಸಂಪರ್ಕ ಕುರಿತು ಈಗಾಗಲೇ ಪರೀಕ್ಷಿಸಲಾಗಿದೆ. 0.5 ಡಿಗ್ರಿ ಯಿಂದ 29 ಡಿಗ್ರಿವರೆಗೆ 13 ಹಂತಗಳ ವರೆಗೆ ಕ್ರಮಿಸಲಿದೆ. ಪ್ರತಿ 22 ಸೆಕೆಂಡಿ ಗೊಮ್ಮೆ 200 ಕಿ.ಮೀ.ಗೆ ಒಂದು ಸುತ್ತು ಪೂರ್ಣಗೊಳ್ಳಲಿದ್ದು, ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ’ ಎಂದರು.

ADVERTISEMENT

ರಾಡಾರ್‌ ಕೇಂದ್ರದ ಎಂಜಿನಿಯರ್ ಟಾಡ್ ಅವರು, ರಾಡಾರ್‌ ಕಾರ್ಯ ನಿರ್ವಹಣೆ ಕುರಿತು  ಸಚಿವರಿಗೆ ಮಾಹಿತಿ ನೀಡಿದರು. ಇಲೆಕ್ಟ್ರಿಕಲ್ ಎಂಜಿನಿಯರ್‌ ರೇಯಾನ್, ಟೆಕ್ನಿಕಲ್ ಎಂಜಿನಿಯರ್ ಆರೋಗ್ಯಸ್ವಾಮಿ ಕಂಬಳಿ,  ಗದಗ ವಿಭಾ ಗದ ಸಹಾಯಕ ಕಾರ್ಯಕಾರಿ ಎಂಜಿನಿ ಯರ್ ಬಿ.ಆರ್.ದೇಶಪಾಂಡೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ.ಶೇಖ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.