ADVERTISEMENT

ರಾಜಕೀಯ ಕೆಸರೆರಚಾಟ ನಿಲ್ಲಿಸಿ

ಮಹಾದಾಯಿ ಧರಣಿ 579ನೇ ದಿನಕ್ಕೆ: ರೈತ ಮುಖಂಡ ಶ್ರೀಶೈಲ ಮೇಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 13:13 IST
Last Updated 15 ಫೆಬ್ರುವರಿ 2017, 13:13 IST
ನರಗುಂದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 579ನೇ ದಿನವಾದ ಮಂಗಳವಾರ  ಮಹಾದಾಯಿ ಹೋರಾಟ ಸಮಿತಿ ವಕ್ತಾರ ಶ್ರೀಶೈಲ ಮೇಟಿ ಮಾತನಾಡಿದರು
ನರಗುಂದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 579ನೇ ದಿನವಾದ ಮಂಗಳವಾರ ಮಹಾದಾಯಿ ಹೋರಾಟ ಸಮಿತಿ ವಕ್ತಾರ ಶ್ರೀಶೈಲ ಮೇಟಿ ಮಾತನಾಡಿದರು   

ನರಗುಂದ: ಉತ್ತರ ಕರ್ನಾಟಕದ ರೈತರು ತಮ್ಮ ಭವಿಷ್ಯಕ್ಕಾಗಿ  ಹೋರಾಟ ಮಾಡುತ್ತಲೇ ಎರಡನೇ ವರ್ಷಕ್ಕೆ ಕಾಲಿಡುತ್ತಿ ದ್ದಾರೆ. ಆದರೆ ರಾಜಕಾರಣಿಗಳಿಗೆ ಈ ಹೋರಾಟ ನಿಲ್ಲುವುದು ಬೇಕಾಗಿದೆ. ತಮ್ಮ ರಾಜಕೀಯ ಪ್ರತಿಷ್ಟೆ ಮರೆಯುತ್ತಿದ್ದಾರೆ.

ತಮ್ಮ ಉಳಿವಿಗಾಗಿ ರೈತರನ್ನೆ ಮರೆತು ಸಿಎಂ ಮಾಜಿ ಸಿಎಂ ರಾಜಕೀಯ ಕೆಸರೆರಚಾಟ ನಡೆಸುತ್ತಿರುವುದು ಸಲ್ಲ. ಇದನ್ನು ಬಿಟ್ಟು  ರೈತರ ಸಮಸ್ಯೆ ಬಗೆಹರಿ ಸಲು ಮುಂದಾಗಬೇಕೆಂದು ಮಹಾ ದಾಯಿ ಹೋರಾಟ ಸಮಿತಿ ವಕ್ತಾರ ಶ್ರೀಶೈಲ ಮೇಟಿ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 579ನೇ ದಿನವಾದ ಮಂಗಳವಾರ ಮಾತನಾಡಿದರು.

ಬರದಿಂದ ಸಂಕಷ್ಟ ಸಿಲುಕಿದ ರೈತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ. ಸಮೀಕ್ಷಾ ತಂಡಗಳು ಬರುತ್ತವೆ ಹೋಗುತ್ತವೆ. ಆದರೆ ಪರಿ ಹಾರ ಮಾತ್ರ ಗಗನ ಕುಸಮವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌್ ಪಕ್ಷ ರೈತರನ್ನು ಶೋಷಿಸಿದರೆ, ಕೇಂದ್ರದಲ್ಲಿ ಬಿಜೆಪಿ ಶೋಷಣೆ ಮಾಡುತ್ತಾ, ಜೆಡಿಎಸ್‌ ಇದನ್ನೇ ಬಂಡವಾಳಗಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸುತ್ತಾ ಹೊರಟಿದೆ. ಇದನ್ನು ನೋಡಿದಾಗ ನಮ್ಮ ನಾಯಕರಿಗೆ ರಾಜ ಕೀಯ ಮುಖ್ಯವಾಗಿದೆ ಹೊರತು, ರೈತರ ಏಳ್ಗೆ ಬೇಕಾಗಿಲ್ಲ. ಈಗಾಗಲೇ 550 ದಿನ ದಾಟಿದ ಮಹಾದಾಯಿ ಹೋರಾಟಕ್ಕೆ  ಬೆಲೆ ನೀಡದ ಎಲ್ಲ ಜನಪ್ರತಿನಿಧಿಗಳ ವಿರುದ್ಧ ಹೋರಾಟ ಕೈಗೊಳ್ಳಲು ಮುಂದಾ ಗಬೇಕೆಂದು ಸಲಹೆ ಮಾಡಿದರು.

ಹೋರಾಟ ಸಮಿತಿ ಹಿರಿಯ ಸದಸ್ಯ ವೆಂಕಪ್ಪ ಹುಜರತ್ತಿ ಮಾತನಾಡಿ  ಮಲ ಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರು ನಿರಂತರ ಹೋರಾಟ ನಡೆಸಿದರೂ ಬೆಲೆ ನೀಡದ ಸರ್ಕಾರಗಳು ಇದ್ದು ಸತ್ತಂತೆ ಆಗಿವೆ. ಸಂಸದರು, ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಬರಿ ಹಿಂಬಾಲಕರನ್ನೇ ಕರೆದು ಕೊಂಡು ಸಂಚರಿಸಿದ್ದಾಯಿತು. ಆದರೆ ಮಹಾದಾಯಿಗಾಗಿ ಯಾವ ಕೆಲಸವನ್ನು ಮಾಡದ ಈ ರಾಜಕಾರಣಿಗಳನ್ನು ಹೊಡೆ ದೋಡಿಸದಿದ್ದರೆ ನಮಗೆ ಇವರಿಂದ ಸಂಕಷ್ಟ ಕಟ್ಟಿಟ್ಟ ಬುತ್ತಿ. ಬದುಕಿನ ಬಂಡಿ ತುಂಬಿಕೊಳ್ಳುವ ಕಷ್ಟದ ದಿನದಲ್ಲಿ  ನಮ್ಮ ರಾಜಕೀಯ ವ್ಯವಸ್ಥೆ ದೇಶವನ್ನು ಅಧ ಪತನಕ್ಕೆ ಒಯ್ಯತ್ತಿದೆ. ಇದರ ವಿರುದ್ಧ ಯುವ ಜನತೆ ಜಾಗೃತಿಗೊಂಡು ಪಾಠ ಕಲಿಸಲು ಮುಂದಾಗಬೇಕೆಂದು ಹುಜ ರತ್ತಿ  ಸಲಹೆ ಮಾಡಿದರು.

ಧರಣಿಯಲ್ಲಿ ಚಂದ್ರಗೌಡ ಪಾಟೀಲ, ಬಸಮ್ಮ ಐನಾಪುರ, ವಾಸು ಚವ್ಹಾಣ, ಪುಂಡಲೀಕ ಯಾದವ, ಜಗನ್ನಾಥ ಮುಧೊಳೆ, ಎಸ್.ಕೆ.ಗಿರಿಯಣ್ಣವರ, ವೀರ ಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಯಲ್ಲಪ್ಪ ಚಲುವಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.