ADVERTISEMENT

ಶೌಚಾಲಯ ನಿರ್ಮಾಣ: ಜಿಲ್ಲೆಗೆ 15ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:37 IST
Last Updated 16 ಫೆಬ್ರುವರಿ 2017, 11:37 IST
ಶಿರಹಟ್ಟಿ: ತಾಲ್ಲೂಕಿನಲ್ಲಿರುವ 40 ಸಾವಿರ ಕುಟುಂಬಗಳ ಪೈಕಿ 24 ಸಾವಿರ ಕುಟುಂಬಗಳು ಮಾತ್ರ ಶೌಚಾಲಯ ನಿರ್ಮಿಸಿಕೊಂಡಿದ್ದು, ಇನ್ನು 16 ಸಾವಿರ ಶೌಚಾಲಯಗಳ ನಿರ್ಮಾಣವಾಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ ಮಾಹಿತಿ ನೀಡಿದರು.
 
ಪಟ್ಟಣದ ಜ.ಫಕೀರೇಶ್ವರ ಸಮು ದಾಯ ಭವನದಲ್ಲಿ ಸ್ವಚ್ಛ ಭಾರತ ಮಿಷನ್‌ ಕುರಿತು ಗ್ರಾ.ಪಂ ಸದಸ್ಯರಿಗಾಗಿ ಬುಧವಾರ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಪಂಚಾಯತ ರಾಜ್‌ ಸಚಿವರ ಜಿಲ್ಲೆ ಶೌಚಾಲಯ ಹಾಗೂ ಮನೆ ನಿರ್ಮಾಣ ದಲ್ಲಿ 15ನೇ ಸ್ಥಾನದಲ್ಲಿರುವುದು ಆತಂಕದ ವಿಷಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಶ್ರಮ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರವೂ ಮುಖ್ಯ ಎಂದು ತಿಳಿಸಿದರು.
 
ಮನೆ ನಿರ್ಮಾಣ ಹಾಗೂ ಶೌಚಾ ಲಯ ನಿರ್ಮಾಣ ಪ್ರಕ್ರಿಯೆಯಲ್ಲಿ ಅಧಿ ಕಾರಿಗಳು ವಿಳಂಬ ತೋರಿದಲ್ಲಿ ತಕ್ಷಣ ಸಂಬಂಧಿಸಿದವರ ಗಮನಕ್ಕೆ ತರಬೇಕು. ಮಾ. 31ರ ಒಳಗೆ ಗುರಿ ಮುಟ್ಟಬೇಕಿದ್ದು, ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
 
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾ ಹಕ ಅಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರೂಪಾ ಅಂಗಡಿ, ಯೋಜನಾ ನಿರ್ದೆಶಕ ಟಿ. ದಿನೇಶ, ತಾಲ್ಲೂಕ ಪಂಚಾಯಿತಿ ಉಪಾ ಧ್ಯಕ್ಷೆ ಉಮಾ ಹೊನಗಣ್ಣವರ, ತಾ.ಪಂ ಇಓ ಆರ್‌.ಐ. ಗುರಿಕಾರ, ಗ್ರಾ.ಪಂ. ಅಧ್ಯಕ್ಷ ವಸಂತ ಲಮಾಣಿ, ವಿಲಾಸರಾವ್‌ ಕುಲಕರ್ಣಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.