ADVERTISEMENT

‘ಸರ್ಕಾರಗಳು ರೈತರ ನೆರವಿಗೆ ಬರಲಿ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:36 IST
Last Updated 23 ಏಪ್ರಿಲ್ 2017, 5:36 IST

ನರಗುಂದ: ಬದುಕಿಗಾಗಿ ನಿರಂತರ ಇದ ರಲ್ಲಿ ತೊಡಗಿದ್ದೇವೆ. ಆದರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಬರದ ಛಾಯೆ ದಟ್ಟವಾಗಿದೆ. ಆದ್ದರಿಂದ   ರೈತರ  ಸಂಕಷ್ಟಕ್ಕೆ ಸರ್ಕಾರಗಳು ನೆರವಾಗ ಬೇಕು ಎಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ವೀರಬಸಪ್ಪ ಹೂಗಾರ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 646ನೇ ದಿನವಾದ ಶುಕ್ರವಾರ   ಮಾತನಾಡಿದರು.

ಉತ್ತರ ಕರ್ನಾಟಕದ ಜನಪ್ರತಿನಿಧಿ ಗಳ ನಿರ್ಲಕ್ಷದ ಪರಿಣಾಮ ಯೋಜನೆ ಜಾರಿಯಾಗುತ್ತಿಲ್ಲ. ಹೋರಾಟ ಆರಂಭ ವಾದಾಗಿನಿಂದಲೂ ಸಕಾರಾತ್ಮಕ ಪ್ರತಿ ಕ್ರಿಯೆ ಇಲ್ಲ. ಒಂದಿಲ್ಲ ಒಂದು ರೀತಿಯಲ್ಲಿ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿ ದ್ದಾರೆ. ಆದರೂ ರೈತರು ವಿಶ್ವಾಸ ಕಳೆದು ಕೊಂಡಿಲ್ಲ. ತಮ್ಮ ಹಕ್ಕು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ರೈತರನ್ನು ಸಂಕಷ್ಟಕ್ಕೆ ದೂಡಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರಿಗೆ ರೈತರ ಹಿತ ಬೇಕಾಗಿಲ್ಲ ಎಂದು ಆರೋಪಿಸಿದರು.

ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ  ವೀರೇಶ ಸೊಬರದಮಠ ಮಾತನಾಡಿ ರೈತರು ರಾಜಕೀಯ ಹುನ್ನಾರಕ್ಕೆ ಒಳಗಾಗದೇ ಹೋರಾಟದಲ್ಲಿ ಪಾಲ್ಗೊಳ್ಳ ಬೇಕು. ಆಗ ನಮ್ಮ ಗುರಿ ಈಡೇರುವುದು ನಿಶ್ಚಿತ ಎಂದರು.ಧರಣಿಯಲ್ಲಿ ಎಸ್‌.ಬಿ.ಜೋಗಣ್ಣ ವರ,  ಶ್ರೀಶೈಲ ಮೇಟಿ, ಹನಮಂತ ಪಡೆ ಸೂರು, ಎಸ್‌.ಕೆ.ಗಿರಿಯಣ್ಣವರ, ಯಲ್ಲಪ್ಪ ಚಲುವಣ್ಣವರ, ಈರಣ್ಣ ಗಡಗಿಶೆಟ್ಟರ,  ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, ಜಗನ್ನಾಥ ಮುಧೋಳೆ, ವಾಸು ಚವ್ಹಾಣ, ಎಲ್‌.ಬಿ.ಮುನೇನಕೊಪ್ಪ, ಗಂಗಮ್ಮ ಹಡಪದ, ರತ್ನವ್ವ ಸವಳಬಾವಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.