ADVERTISEMENT

ಸೋಮನಾಥನ ಸನ್ನಿಧಿಯಲ್ಲಿ ಸಾಂಸ್ಕೃತಿಕ ವೈಭವ

ಇನ್ಫೊಸಿಸ್‌ ಪ್ರತಿಷ್ಠಾನ, ಭಾರತೀಯ ವಿದ್ಯಾಭವನದ ವತಿಯಿಂದ ಪುಲಿಗೆರೆ–ಉತ್ಸವ–2017ಕ್ಕೆ ಸಂಭ್ರಮದ ಸಿದ್ಧತೆ

ನಾಗರಾಜ ಹಣಗಿ
Published 5 ಜನವರಿ 2017, 10:26 IST
Last Updated 5 ಜನವರಿ 2017, 10:26 IST

ಲಕ್ಷ್ಮೇಶ್ವರ: ಇಲ್ಲಿನ ಐತಿಹಾಸಿಕ ಸೋಮೇ ಶ್ವರ ದೇವಸ್ಥಾನದಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನ, ಭಾರತೀಯ ವಿದ್ಯಾ ಭವನ ಹಾಗೂ ಸೋಮೇಶ್ವರ ಭಕ್ತರ ಸೇವಾ ಸಮಿತಿ, ಪುರಸಭೆ ಲಕ್ಷ್ಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಪುಲಿಗೆರೆ ಉತ್ಸವ ಜ.6ರಿಂದ 8ರವರೆಗೆ ಜರುಗಲಿದೆ.

6ರಂದು ಬೆಳಿಗ್ಗೆ 6–15ಕ್ಕೆ ಇನ್ಫೊಸಿಸ್‌ನ ಬಿನೋದ್‌ ಹಂಪಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. 6–30ಕ್ಕೆ ಮಾರುತಿ ಭಜಂತ್ರಿಯವರ ಶಹ ನಾಯಿ ವಾದನದ ಮೂಲಕ ಉದಯ ರಾಗದೊಂದಿಗೆ ಸಂಗೀತ ಕಾರ್ಯಕ್ರಮ ಆರಂಭಗೊಳ್ಳುವುದು. ಪಂ.ಕೇಶವ ಜೋಷಿ ತಬಲಾ ಸಾಥ್‌ ನೀಡುವರು.

ಬೆಳಿಗ್ಗೆ 7–30ಕ್ಕೆ ಅಯ್ಯಪ್ಪಯ್ಯ ಹಲಗಲಿಮಠ ಇವರು ಹಿಂದೂಸ್ತಾನಿ ಗಾಯನ ನಡೆಸಿಕೊಡಲಿದ್ದು ಇವರಿಗೆ ಪಂ.ಕೇಶವ ಜೋಷಿ ತಬಲಾ ಸಾಥ್‌ ಮತ್ತು ವೀರೇಶ ಹಿತನಾಲ್‌ ಹಾರ್ಮೋ ನಿಯಂ ಸಾಥ್‌ ನೀಡುವರು. ಸಂಜೆ 4ಕ್ಕೆ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನಡೆಯುವುದು.

ಇದರಲ್ಲಿ ವಿರುಪಾಕ್ಷಪ್ಪ ಗುರನವರ್‌ ಹಾಗೂ ಸಂಗಡಿಗರಿಂದ ಕೋಲಾಟ ಪ್ರದರ್ಶನ ನಡೆಯುವುದು. ಸಂಜೆ 6ಕ್ಕೆ ಕೈವಲ್ಯ ಕುಮಾರ ಗುರವ್‌ ಇವರಿಂದ ಹಿಂದೂ ಸ್ತಾನಿ ಗಾಯನ ನಡೆಯಲಿದ್ದು, ಲಕ್ಷ್ಮೇಶ್ವರದ ತಬಲಾ ಕಲಾವಿದ ಶ್ರೀಧರ ಮಾಂಡ್ರೆ ತಬಲಾ ಮತ್ತು ಡಾ.ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್‌ ನೀಡುವರು. 7–30ಕ್ಕೆ ನೂಪುರ ಪರ್ಫಾಮಿಂಗ್‌ ಕಲಾ ಕೇಂದ್ರದ ಕಲಾವಿದರಿಂದ ಕಥಕ್‌ ನೃತ್ಯ ಪ್ರದರ್ಶನ ಜರುಗಲಿದ್ದು 8–30ಕ್ಕೆ ಧಾರವಾಡದ ರತಿಕ ನೃತ್ಯ ನಿಕೇತನ್‌ ತಂಡದಿಂದ ಭರತ ನಾಟ್ಯ ಪ್ರದರ್ಶನ ನಡೆಯುವುದು.

ದಿ.7ರಂದು ಬೆಳಿಗ್ಗೆ 6–30ಕ್ಕೆ ಶ್ರೀನಿವಾಸ ಜೋಷಿ ಇವರು ಸಿತಾರ್‌ ನುಡಿಸುವುದರೊಂದಿಗೆ ಉದಯರಾಗ ಆರಂಭಿಸುವರು. 7–30ಕ್ಕೆ ಕಿರಣ ಹಾನಗಲ್‌ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದ್ದು ಶ್ರೀಧರ ಮಾಂಡ್ರೆ ತಬಲಾ ಪಂ.ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್‌ ನೀಡುವರು.

ಸಂಜೆ 6ಕ್ಕೆ ಗಣಪತಿ ಭಟ್‌ ಹಾಸಣಗಿ ಇವರಿಂದ ಹಿಂದೂಸ್ಥಾನಿ ಗಾಯನ ಜರುಗಲಿದ್ದು ಶ್ರೀಧರ ಮಾಂಡ್ರೆ ತಬಲಾ ಮತ್ತು ಡಾ.ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂ ಸಾಥ್ ನೀಡುವರು. ಸಂಜೆ 7–30ಕ್ಕೆ ಉಡುಪಿಯ ನೃತ್ಯ ನಿಕೇತನ ತಂಡದವರು ಭರತ ನಾಟ್ಯ ಪ್ರದರ್ಶನ ಮಾಡುವರು.

ರಾತ್ರಿ 8–30ಕ್ಕೆ ಪುಣೆಯ ನೃತ್ಯಾಂ ಜಲಿ ನೃತ್ಯ ಸಂಸ್ಥೆಯ ಕಲಾವಿದರಿಂದ ಅರ್ಧನಾರೀಶ್ವರಮ್‌ ಭರತ ನಾಟ್ಯ ಪ್ರದರ್ಶನ ನಡೆಯವುದು. ಜ.8ರಂದು ಬೆಳಿಗ್ಗೆ 6–30ಕ್ಕೆ ಪಂ.ಮೊಹಸಿನ್‌ ಖಾನ್‌ ಮತ್ತು ಪಂ.ರಘುನಾಥ್‌ ಬಡಿಯವರ ಸಿತಾರ್‌ ಮತ್ತು ಕೊಳಲು ಜುಗಲ್‌ ಬಂದಿ ಯೊಂದಿಗೆ ಉದಯರಾಗಕ್ಕೆ ಚಾಲನೆ. ಪಂ.ರವಿಕಿರಣ ನಾಕೋಡ್‌ ತಬಲಾ ಸಾಥ್‌ ನೀಡುವರು. 7–30ಕ್ಕೆ ವಿದ್ವಾನ್‌ ಪೂರ್ಣಿಮಾ ಭಟ್‌ ಅವರಿಂದ ಹಿಂದೂ ಸ್ತಾನಿ ಗಾಯನ ನಡೆಯಲಿದ್ದು ಇವರಿಗೆ ಪಂ.ವಿಶ್ವನಾಥ ನಾಕೋಡ್‌ ತಬಲಾ ಮತ್ತು ಡಾ.ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂ ಸಾಥ್‌ ನೀಡುವರು.

ಸಂಜೆ 6ಕ್ಕೆ ಜಯತೀರ್ಥ ಮೇವುಂಡಿ ಯವರಿಂದ ಹಿಂದೂಸ್ತಾನ ಗಾಯನ ಜರುಗುವುದು. ಇವರಿಗೆ ಉದಯ ಕುಲ ಕರ್ಣಿ ತಬಲಾ ಹಾಗೂ ಗುರುಪ್ರಸಾದದ ಹೆಗಡೆ ಸಾಥ್ ನೀಡುವರು.

7–30ಕ್ಕೆ ಶಿರಸಿಯ ನಾಟ್ಯದೀಪ ಸಾಂಸ್ಕೃತಿಕ ತಂಡದಿಂದ ಭರತ ನಾಟ್ಯ ಜರುಗುವುದು. 8–30ಕ್ಕೆ ದಾವಣಗೆರೆಯ ಭರತಾಂಜಲಿ ಅಕಾಡೆಮಿ ಫಾರ್‌ ಪರ್ಫಾಮಿಂಗ್‌ ಆರ್ಟ್ಸ್‌ ಇವರು ಶ್ರೀಕೃಷ್ಣ ತುಲಾಭಾರ ಭರತ ನಾಟ್ಯ ರೂಪಕ ಪ್ರದರ್ಶನ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.