ADVERTISEMENT

ಸ್ತ್ರೀ ಶಕ್ತಿ ಸಂವರ್ಧನೆಯ ಹೊಸ ಶಕೆ ಆರಂಭ

ನಗರದಲ್ಲಿ ವಿವಿಧ ಸಂಘಟನೆಗಳಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ; ಜಿ.ಪಂ. ಉಪಾಧ್ಯಕ್ಷೆ ರೂಪಾ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:01 IST
Last Updated 9 ಮಾರ್ಚ್ 2017, 11:01 IST
ಸ್ತ್ರೀ ಶಕ್ತಿ ಸಂವರ್ಧನೆಯ ಹೊಸ ಶಕೆ ಆರಂಭ
ಸ್ತ್ರೀ ಶಕ್ತಿ ಸಂವರ್ಧನೆಯ ಹೊಸ ಶಕೆ ಆರಂಭ   
ಗದಗ: ಈಚಿನ ದಶಕಗಳಲ್ಲಿ ಮಹಿಳಾ ಸಬಲೀಕರಣ ಆದ್ಯತೆ  ಪಡೆಯುತ್ತಿದ್ದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಅಪೂರ್ವ ಸಾಧನೆ ಮಾಡುತ್ತಿದ್ದಾರೆ. ಸ್ತ್ರೀ ಶಕ್ತಿ ಸಂವರ್ಧನೆಯ ಹೊಸ ಶಕೆ ಪ್ರಾರಂಭವಾ ಗಿದೆ ಎಂದು ಗದಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರೂಪಾ ಅಂಗಡಿ ಹೇಳಿದರು.  
 
ಗದಗ ಜಿಲ್ಲಾಡಳಿತ  ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ನೆರವು ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
ಸಮಾಜದಲ್ಲಿ ಗಂಡು, ಹೆಣ್ಣು ಸಮ ನಾಗಿ ಕಾರ್ಯನಿರ್ವಹಿಸಿದಾಗ ಕುಟುಂಬ, ಸಮಾಜದ ಶಾಂತಿ, ಸ್ಥಿರತೆ ಹಾಗೂ ಅಭಿ ವೃದ್ಧಿ ಸಾಧ್ಯ. ಪ್ರತಿ ಪುರುಷನ ಸಾಧನೆ ಹಿಂದೆ ಮಹಿಳೆ ಇರುವಂತೆ ಪ್ರತಿ ಮಹಿಳಾ  ಸಾಧಕಿಯರ ಹಿಂದೆ ಪುರುಷ ಪ್ರಯತ್ನ ಇದ್ದೇ ಇರುತ್ತದೆ.  ಮಕ್ಕಳ ಉತ್ತಮ ಭವಿ ಷ್ಯಕ್ಕಾಗಿ ದಂಪತಿ ನಡುವೆ ಪರಸ್ಪರ ಗೌರವ, ಪ್ರೀತಿ ಮೂಲಕ ಒಬ್ಬರಿಗೊ ಬ್ಬರು ಬೆಂಬೆಲವಾಗಿರುವುದು ಮುಖ್ಯ ಎಂದರು. 
 
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಹುಲ್ಲಣ್ಣವರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ತ್ರೀ ಶಕ್ತಿ, ಸ್ವ ಸಹಾಯ, ಪಂಚಾಯತ್‌ ವ್ಯವಸ್ಥೆ ಯಿಂದಾಗಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬಲ ಬಂದಿದೆ.  

ಈ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು ಮಹಿಳಾ ದಿನಾಚರಣೆ ಹೆಗ್ಗಳಿಕೆಯಾಗಿದೆ.  ಮಧ್ಯಮ ಮತ್ತು  ಕೆಳ ವರ್ಗದ ಮಹಿಳೆ ಯರಲ್ಲಿ ಟಿ.ವಿ. ವೀಕ್ಷಣೆ ಸಾಮಾನ್ಯವಾದ ವಿಷಯವಾಗಿದೆ. ಅನಗತ್ಯ ವಿಷಯಗಳತ್ತ ಗಮನ ಹರಿಸದೆ ಕುಟುಂಬದ ಭವಿಷ್ಯ ರೂಪಿಸಲು ಶ್ರಮ ವಹಿಸಬೇಕು ಎಂದರು. 
 
ವರ್ಷದ 365 ದಿನವೂ ಮನೆಗೆಲಸ ದಲ್ಲಿ ಬೆಳಿಗ್ಗೆ 5 ರಿಂದ ತಡರಾತ್ರಿಯವರಗೆ ದುಡಿದು ಇಡೀ ಕುಟುಂಬ ಸಲಹು ತ್ತಿರುವ ತಾಯಂದಿರು ದೇಶದ ದೊಡ್ಡ ಶ್ರಮಜೀವಿಗಳು. ಅವರನ್ನು ಗುರುತಿಸಿ, ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಅಭಿಪ್ರಾಯಪಟ್ಟರು.
 
ಭಾರತೀಯ ಸಂಸ್ಕೃತಿಯಲ್ಲಿ  ಸ್ತ್ರೀಗೆ ದೇವರ ಸ್ಥಾನ ಇದೆ. ಹಾಗಾಗಿಯೇ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರ ಕುರಿತು ತಿಳಿದುಕೊಳ್ಳಲು ಸಾಧ್ಯವಾಗಿದೆ.  ಸ್ವಾತಂತ್ರ್ಯಾ ನಂತರ ಆದ್ಯತೆಗಳು ಬದ ಲಾಗಿದ್ದು ಸಾಮಾಜಿಕವಾಗಿ, ಆರ್ಥಿಕ ವಾಗಿ, ರಾಜಕೀಯವಾಗಿ ಮಹಿಳೆಯಗೆ ಸಮಾನ ಅವಕಾಶ ನೀಡಲು ಅವರ ಸಬಲೀಕರಣಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ. ಮಕ್ಕಳು, ಪತಿ, ವೃದ್ದರು, ಅಂಗವಿಕಲರ ಆರೈಕೆ   ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಯರಿಗೆ ಶೇ 50 ಕ್ಕಿಂತ ಹೆಚ್ಚಿನ ಮೀಸಲಾತಿ, ಆದ್ಯತೆ ನೀಡ ಬೇಕು ಎಂದು ಅವರು ಹೇಳಿದರು.  
 
ಅಂತರಾಷ್ಟ್ರೀಯ ಮಹಿಳಾ ದಿನಾಚ ರಣೆ ಅಂಗವಾಗಿ ಏರ್ಪಡಿಸಿದ ಕ್ರೀಡಾ ಕೂಟ ಹಾಗೂ ಮಕ್ಕಳಿಗಾಗಿ ಪೌಷ್ಟಿಕ ಆಹಾರ ತಯಾರಿಕೆ, ಹಾಗೂ ಮಹಿಳಾ ಸಬಲೀಕರಣ ಕುರಿತ ಚಿತ್ರಕಲಾ  ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು.  ಸ್ವಾವಲಂಬನೆ ಜೀವನ ನಡೆ ಸುತ್ತಿರುವ ಬೀದಿ ವ್ಯಾಪಾರಸ್ಥ ಮಹಿಳೆಯ ರಿಗೆ ಪ್ರಶಂಸಾಪತ್ರಗಳನ್ನು ನೀಡಿ ಗೌರವಿಸಲಾಯಿತು.
 
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ರೇಣುಕಾ ಕುಲ ಕರ್ಣಿ ಮಾತನಾಡಿ, ಮಹಿಳೆಯರು ಸ್ವಂತ ಪ್ರತಿಭೆಯಿಂದ ಮುಂದೆ ಬರಬೇಕು. ಭಾರತೀಯ ಸಂಸ್ಕೃತಿಯನ್ನು ಕಾಪಾಡಿ ಕೊಂಡು ಹೋಗುವ  ನೈತಿಕ ಜವಾಬ್ದಾರಿ ಕೂಡ ಮಹಿಳೆಯರ ಮೇಲಿದೆ ಎಂದು ತಿಳಿಸಿದರು.  
 
ಜಿಲ್ಲಾ ಪಂಚಾಯಿತಿ ಸಿಇಓ ಮಂಜು ನಾಥ ಚವ್ಹಾಣ, ಕೃಷಿ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಪಿ. ಬಳಿ ಗಾರ, ದೇವಕ್ಕ ಲಮಾಣಿ, ಶ್ರೀಮತಿ ಶಕುಂತಲಾ ಮೂಲಿಮನಿ, ಶಕುಂತಲಾ ಚವ್ಹಾಣ, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಉಪನಿರ್ದೇಶಕಿ  ರೋಹಿಣಿ ಹಿರೇಮಠ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭಾರತಿ ಶೆಟ್ಟರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕಮಹಾದೇವಿ,  ಪ್ರೇಮಾ ಹಂದಿ ಗೋಳ ಇದ್ದರು. 
 
* ವರ್ಷದ 365 ದಿನವೂ ಮನೆಕೆಲಸದಲ್ಲಿ ಬೆಳಿಗ್ಗೆ 5 ರಿಂದ ತಡರಾತ್ರಿಯವರಗೆ ದುಡಿದು ಇಡೀ ಕುಟುಂಬ ಸಲಹುತ್ತಿರುವ ತಾಯಂದಿರು ದೇಶದ ದೊಡ್ಡ ಶ್ರಮಜೀವಿಗಳು
ಮನೋಜ್‌ ಜೈನ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.