ADVERTISEMENT

‘ಸಹಿ ಮಾಡದ ಅಧಿಕಾರಿ ವಿರುದ್ಧ ಕ್ರಮ’

​ಪ್ರಜಾವಾಣಿ ವಾರ್ತೆ
Published 27 ಮೇ 2015, 7:15 IST
Last Updated 27 ಮೇ 2015, 7:15 IST

ರೋಣ: ಹಾಜರಿ ಪುಸ್ತಕಕ್ಕೆ ತಿಂಗಳಿನಿಂದ ಸಹಿ ಹಾಕದಿರುವುದರಿಂದ  ಆಹಾರ ನಿರೀಕ್ಷಕರ ವಿರುದ್ಧ ಆಕ್ರೋಶ ವ್ಯಕ್ತವಾದ ಘಟನೆ ಸೋಮವಾರ ಲೋಕಾಯುಕ್ತ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ನಡೆಯಿತು.

ನಿರೀಕ್ಷಕ ಉಳ್ಳಟ್ಟಿ ಅವರು ತಿಂಗಳಿನಿಂದ ಸಹಿ ಹಾಕಿಲ್ಲ ಎಂದು ಆರೋಪ ಕೇಳಿಬಂತು. ಆಗ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್ ಸಹ ಸ್ವಿಚ್ ಆಫ್‌ ಆಗಿತ್ತು. ಆಗ ತಹಶೀಲ್ದಾರ್ ಅವರ ಗಮನಕ್ಕೆ ತರಲಾಯಿತು.

ಈ ಕುರಿತು ಮಾತನಾಡಿದ ತಹಶೀಲ್ದಾರ್‌ ಐ.ಎನ್.ಚಂದ್ರಯ್ಯ,  ಎಂತಹ ಕೆಲಸವಿದ್ದರೂ ಕಚೇರಿಗೆ ಬಂದು  ಸಹಿ ಹಾಕಿ ಅನುಮತಿ ಪಡೆದು ಮುಂದಿನ ಕೆಲಸಕ್ಕೆ ಹೋಗಬೇಕು. ಇದರಲ್ಲಿ ತಪ್ಪು ಕಂಡುಬಂದರೆ  ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 

ಕೊನೆಗೆ ವೈಯಕ್ತಿಕ  ಸಂಖ್ಯೆಗೆ ಸಂಪರ್ಕಿಸಿ ವಿಚಾರಿಸಿದಾಗ ಸರ್ಕಾರ ನೀಡಿದ ಸಿಮ್ ಅನ್ನು ಮೈಕ್ರೋ ಸಿಮ್‌ ಮಾಡಿಕೊಡಲಾಗುವುದು ಎಂದು ಪಡೆದಿದ್ದಾರೆ. ಇನ್ನು ನರೇಗಲ್ಲ, ಗಜೇಂದ್ರಗಡ ಹೆಚ್ಚುವರಿ ಕೆಲಸ   ಇರುವುದರಿಂದ ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.