ADVERTISEMENT

ಸೂಚನಾ ಫಲಕ, ರಸ್ತೆಉಬ್ಬು ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 9:19 IST
Last Updated 10 ಜನವರಿ 2018, 9:19 IST

ಮುಳಗುಂದ: ಗದಗ ಹಾಗೂ ಲಕ್ಷ್ಮೇಶ್ವರ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಬಸಾಪುರ ಕ್ರಾಸ್ ಹಾಗೂ ಪಟ್ಟಣ ಪ್ರವೇಶಿಸುವ 3 ರಸ್ತೆ ಮಾರ್ಗಗಳಲ್ಲಿ ಎಚ್ಚರಿಕೆಯ ಸೂಚನಾ ಫಲಕ, ರಸ್ತೆ ಉಬ್ಬು (ರೋಡ್‌ ಬ್ರೆಕ್) ಹಾಕಿಲ್ಲ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಸವಾರರು, ವಾಹನ ಚಾಲಕರಿಗೆ ತಲೆನೋವಾಗಿ ಪರಿಣಮಿದ್ದು ದಿನೇದಿನೇ ಅಪಘಾತ ಸಂಭವಿಸುವಂತಾಗಿದೆ.

ರಾಜ್ಯ ಹೆದ್ದಾರಿ ಸೇರುವ ಗ್ರಾಮೀಣ ರಸ್ತೆಗಳಾದ ಸೊರಟೂರ, ಬಸಾಪುರ, ಶೀತಾಲಹರಿ ಹಾಗೂ ಪಟ್ಟಣ ಪ್ರವೇಶಿಸುವ ವಾಲಿಯವರ ಮಸಾರಿ ಹತ್ತಿರದ ರಸ್ತೆಗಳನ್ನು ಈಚೆಗೆ ಅಭಿವೃದ್ದಿಪಡಿಸಲಾಗಿದೆ. ಇವುಗಳಿಗೆ ರಸ್ತೆ ಅಡತಡೆ ಹಾಕಿಲ್ಲ. ಹೀಗಾಗಿ ವಾಹನ ವೇಗವಾಗಿ ರಾಜ್ಯ ಹೆದ್ದಾರಿಗೆ ಸೇರುತ್ತದೆ.

ಹೀಗಾಗಿ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಮೂರು ಜನ ಗಂಬೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದಿದ್ದರೂ ಸಂಬಂಧಿಸಿದವರು ಇತ್ತ ಗಮನ ಹರಿಸಿಲ್ಲ ಎಂದು ಜೆಡಿಎಸ್ ಮುಖಂಡ ದತ್ತು ಯಳವತ್ತಿ ಆಗ್ರಹಿಸಿದ್ದಾರೆ. ಈ ಕುರಿತು ಪಿಡ್ಲೂಡಿ ಎಂಜನಿಯರ್ ಪ್ರತಿಕ್ರಿಯಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.