ADVERTISEMENT

ಕಾವೇರಿ ಪುಷ್ಕರ ಸ್ನಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 8:32 IST
Last Updated 13 ಸೆಪ್ಟೆಂಬರ್ 2017, 8:32 IST

ರಾಮನಾಥಪುರ (ಕೊಣನೂರು): ರಾಮನಾಥಪುರದ ಕಾವೇರಿ ನದಿಯಲ್ಲಿ ಸೆ. 23ವರೆಗೆ ಹಮ್ಮಿಕೊಂಡಿರುವ ಪುಷ್ಕರ ಸ್ನಾನ ಕಾರ್ಯಕ್ರಮ ಮಂಗಳವಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಮಂಗಳವಾರ ಆರಂಭವಾಯಿತು.

ರಾಮೇಶ್ವರ ಸನ್ನಿಧಿಯ ವಹ್ನಿ ಪುಷ್ಕರಣಿಯಲ್ಲಿ ಸ್ನಾನಾಚರಣೆ ಕೈಂಕರ್ಯ ಹಮ್ಮಿಕೊಂಡಿದ್ದು, ಅರೇಮಾದನಹಳ್ಳಿ ವಿಶ್ವಕರ್ಮ ಬ್ರಾಹ್ಮಣ ಮಹಾಸಂಸ್ಥಾನದ ಪೀಠಾಧಿಪತಿ ಶಿವಸುಜ್ಞಾನತೀರ್ಥ ಸ್ವಾಮೀಜಿ ಹಾಗೂ ಹೈದರಾಬಾದ್ ಗುರು ಪೀಠದ ಆಚಾರ್ಯ ಗುರುಪ್ರಕಾಶ್ ಗುರೂಜಿ ಪುಷ್ಕರ ಸ್ನಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ತುಲಾ ರಾಶಿಗೆ ಗುರು ಪ್ರವೇಶಿಸುವ ಇಂದಿನ ಮಹಾಪರ್ವ ಕಾಲದಲ್ಲಿ ದೇವತೆಗಳು, ಸಪ್ತ ಋಷಿಗಳು, ಮಹರ್ಷಿಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಇಂತಹ ದಿನಗಳಲ್ಲಿ ಪುಷ್ಕರಣಿಯಲ್ಲಿ ಸ್ನಾನ ಕೈಗೊಂಡರೆ ಒಳಿತಾಗಲಿದೆ ಎಂದು ಹೇಳಿದರು.

ADVERTISEMENT

ಸ್ನಾನದ ಸಂಧರ್ಭ ಜಪ–ತಪ, ಸಂಕಲ್ಪ ಸಹಿತ ಸ್ನಾನ, ಹೋಮ, ತೀರ್ಥಶ್ರಾದ್ಧ ಕಾರ್ಯಕ್ರಮಗಳು ನೆರವೇರಿದವು. ನೂರಾರು ಭಕ್ತರು ಕಾವೇರಿ ನೀರಲ್ಲಿ ಮಿಂದೆದ್ದು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.