ADVERTISEMENT

ಟಿಪ್ಪು ಜಯಂತಿ ಆಚರಣೆಗೆ ವಿರೋಧ ಸಲ್ಲದು –ಶಾಸಕ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:39 IST
Last Updated 11 ನವೆಂಬರ್ 2017, 6:39 IST

ಚನ್ನರಾಯಪಟ್ಟಣ: ‘ನಾಡಿನ ಸಂಸ್ಕೃತಿ, ಸಂಪತ್ತು ರಕ್ಷಿಸಿದ ಕೀರ್ತಿ ಟಿಪ್ಪುವಿಗೆ ಸಲ್ಲಲಿದೆ’ ಎಂದು ನವೋದಯ ವಿದ್ಯಾ ಸಂಸ್ಥೆಯ ಉಪನ್ಯಾಸಕ ಎಚ್‌.ಎನ್‌.ಮಂಜಪ್ಪ ಅಭಿಪ್ರಾಯಪಟ್ಟರು. ತಾಲ್ಲೂಕು ಆಡಳಿತ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಟಿಪ್ಪು ಅಪ್ರತಿಮ ಹೋರಾಟಗಾರ. ಗುಡಿಕೈಗಾರಿಕೆಗೆ ಪ್ರೋತ್ಸಾಹಿಸಲು ರೇಷ್ಮೆ ಉದ್ದಿಮೆ ಸ್ಥಾಪಿಸಿದರು. ಜನರಿಗೆ ಅನುಕೂಲ ಕಲ್ಪಿಸಲು 7 ಇಲಾಖೆ, ಟಂಕ ಶಾಲೆ ಆರಂಭಿಸಿದರು’ ಎಂದರು.

ಶಾಸಕ ಸಿ.ಎನ್‌.ಬಾಲಕೃಷ್ಣ ಅವರು,, ‘ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ಕೆಲವರ ಆಕ್ಷೇಪ ಸರಿಯಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲಾ ವರ್ಗದವರು ತಮ್ಮದೇ ಸಂಸ್ಕೃತಿ, ಆಚಾರ ವಿಚಾರ ಆಚರಿಸಲು ಅವಕಾಶವಿದೆ ಎಂದರು.

ADVERTISEMENT

ಸನ್ಮಾನ: ಸಮಾಜದ ಮುಖಂಡರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಇಒ ಎಚ್‌.ಕೆ. ಪುಷ್ಪಲತಾ ಸ್ವಾಗತಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಅನ್ಸರ್‌ ಬೇಗ್‌, ಮಾಜಿ ಸದಸ್ಯ ಬಷೀರ್‌ ಮಾತ ನಾಡಿದರು.

ತಾ.ಪಂ ಅಧ್ಯಕ್ಷೆ ಸೌಮ್ಯಾ ಚಂದ್ರೇಗೌಡ, ಪುರಸಭೆ ಅಧ್ಯಕ್ಷ ಕೆ.ಜೆ.ಸುರೇಶ್‌, ಸ್ಥಾಯಿಸಮಿತಿ ಅಧ್ಯಕ್ಷ ಎಚ್‌.ಎನ್‌. ನವೀನ್‌, ಉಪಾಧ್ಯಕ್ಷೆ ಕಲ್ಪನಾ ಸುರೇಶ್‌, ತಹಶೀಲ್ದಾರ್‌ ಸೋಮ ಶೇಖರ್‌, ಜಿ.ಪಂ ಸದಸ್ಯೆ ಮಂಜುಳಾ ಶಂಕರ್‌, ಪುರಸಭಾ ಸದಸ್ಯರಾದ ಸಿ.ಎಸ್‌.ಪ್ರಕಾಶ್‌, ಅನ್ಸರ್‌ಪಾಷ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್‌. ವೆಂಕಟೇಶ್, ಟಿಎಪಿಸಿಎಂಎಸ್‌ ಅಧ್ಯಕ್ಷ ಎನ್‌.ಕೃಷ್ಣೇಗೌಡ, ಮುಖಂಡರಾದ ಡಾ.ಹನೀಫ್‌, ಅಬ್ದುಲ್‌ ಆದಿ, ಅಬ್ದುಲ್‌ಅಜೀಂ, ಆರಿಫ್‌ ಉಲ್ಲಾ ಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.