ADVERTISEMENT

ಪರಿಸರ ಉಳಿವಿಗೆ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:45 IST
Last Updated 6 ಫೆಬ್ರುವರಿ 2017, 5:45 IST

ಹಾಸನ: ನಗರದ ಚಿತ್ಕಲಾ ಫೌಂಡೇಶನ್,  ಜಿಲ್ಲಾ ಸಾಂಸ್ಕೃತಿಕ ವೇದಿಕೆ ಹಾಗೂ ರೋಟರಿ ಕ್ಲಬ್‌ ಆಫ್‌ ಕ್ವಾಂಟಾ ಸಹಯೋಗದಲ್ಲಿ ಚಿತ್ರಕಲಾ ಶಿಕ್ಷಕ ಬಿ.ಎಸ್‌.ದೇಸಾಯಿ ಅವರು ಹುಣಸಿನಕೆರೆ ದಡದಲ್ಲಿ ಪರಿಸರ ಉಳಿವಿಗಾಗಿ ಕಲಾಕೃತಿ ರಚಿಸಿದರು.

ಚಿತ್ರ ಬಿಡುಸುವ ಮುನ್ನ ದೇಸಾಯಿ ಅವರು ಹುಣಸಿನಕೆರೆಯನ್ನು ಒಂದು ಸುತ್ತು ಹಾಕಿದರು. ನಂತರ ಹುಣಸಿನಕೆರೆಯ ನಿಸರ್ಗ ಚಿತ್ರವನ್ನು 5X20 ಅಡಿ ವಿಸ್ತಾರದ ಕ್ಯಾನ್‌ವಾಸ್‌ನಲ್ಲಿ 45 ನಿಮಿಷದಲ್ಲಿ ಬಿಡಿಸಿದರು. 

ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಪ್ರತಿನಿಧಿ ಅಕ್ಕಿಕಾಳು ವೆಂಕಟೇಶ್ ಅವರು ವೀಕ್ಷಣೆ ಮಾಡಿ, ಈ ವಿಡಿಯೊವನ್ನು ದಾಖಲೆಗೆ ಸೇರಿಸಲು ಸಂಸ್ಥೆಗೆ ಕಳುಹಿಸುವುದಾಗಿ ಹೇಳಿದರು.

‘ಮಾನವನ ಮೀತಿ ಮೀರಿದ ದುರಾಸೆಯಿಂದ ಕಾಡು, ಕೆರೆಕಟ್ಟೆಗಳು ನಾಶವಾಗಿ, ನದಿಗಳು ಬತ್ತಿ ಹೋಗಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುತ್ತಿವೆ. ಕೆರೆ, ಕಟ್ಟೆಗಳನ್ನು ಉಳಿಸಲು, ಜೀವರಾಶಿಗಳ ಸಮತೋಲನ ಕಾಪಾಡಲು ಹಾಗೂ ಗಿಡ, ಮರ ಬೆಳೆಸಲು ಎಲ್ಲರೂ ಮುಂದಾಗಬೇಕು’ ಎಂದು ದೇಸಾಯಿ ತಿಳಿಸಿದರು.

ಶನಿವಾರ ಸಂಜೆ ನಗರಸಭೆ ವಸ್ತು ಪ್ರದರ್ಶನದಲ್ಲಿ  ವಿಶ್ವದಾಖಲೆಗಾಗಿ ಅತೀ ವೇಗ ಮತ್ತು ಅತೀ ದೊಡ್ಡ ಒಂದೇ ವರ್ಣ ಚಿತ್ರ ಕಲಾಕೃತಿಯನ್ನು 38 ಮಕ್ಕಳು 40 ನಿಮಿಷದಲ್ಲಿ ಬಿಡಿಸಿದ್ದನ್ನು ಸ್ಮರಿಸಬಹುದು.  ಸಾಹಿತಿ ಚಂದ್ರಕಾಂತ್ ಪಡೆಸೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.