ADVERTISEMENT

ಬೆಂಬಲ ಕೋರುವ ಅಗತ್ಯ ಬಾರದು –ಎಚ್‌ಡಿಕೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 9:08 IST
Last Updated 24 ಫೆಬ್ರುವರಿ 2018, 9:08 IST

ಹೊಳೆನರಸೀಪುರ: ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ರಚನೆ ನಿಶ್ಚಿತ. ಇದಕ್ಕಾಗಿ ಬೇರಾವ ಪಕ್ಷದ ಬೆಂಬಲ ಕೋರುವ ಅಗತ್ಯ ಬರುವುದಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುರುವಾರ ವಿಶ್ವಾಸ ವ್ಯಕ್ತ ಪಡಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಸಮಾವೇಶಕ್ಕೆ ತೆರಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಇಲ್ಲಿನ ನಿವಾಸಿ ಶ್ರೀನಿವಾಸ (40) ಮನೆಗೆ ಮನೆಗೆ ಭೇಟಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೃತನ ಪತ್ನಿಗೆ ಸ್ಥಳದಲ್ಲಿ ₹ 2 ಲಕ್ಷ ನೆರವು ನೀಡಿದರು.

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ಕೃಷಿಕರ ಸಾಲ ಮನ್ನಾ ಮಾಡ ಲಾಗುವುದು. ಇದಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ADVERTISEMENT

ನಾವು ಬೇರೆ ಪಕ್ಷಗಳ ನಾಯಕರಂತೆ ಅವರಿವರ ತಪ್ಪುಗಳ ಬಗ್ಗೆ ಚರ್ಚಿಸಿ ಮತ ಕೇಳುವುದಿಲ್ಲ. ಉತ್ತಮ ಆಡಳಿತ  ಕುರಿತು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.

ಶಾಸಕ ರೇವಣ್ಣ, ‘ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ಒತ್ತು ನೀಡುತ್ತೇವೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಕೃಷಿ ಹಾಗೂ ತೋಟಗಾರಿಕೆ ನಮ್ಮ ಆದ್ಯತೆ ಕ್ಷೇತ್ರ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.