ADVERTISEMENT

ಮಹಾಮಸ್ತಕಾಭಿಷೇಕಕ್ಕೆ ₹ 175 ಕೋಟಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 8:49 IST
Last Updated 16 ಮಾರ್ಚ್ 2017, 8:49 IST

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯ ಪಾಲಿಗೆ ಸಿಹಿ, ಕಹಿ ಉಣಿಸಿದೆ.

ಆಲೂಗೆಡ್ಡೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿಲ್ಲ. ರೈತರ ಸಾಲ ಮನ್ನಾ ಹಾಗೂ ಏಲಕ್ಕಿ ಬೆಳೆಗಾರರ ಬಾಕಿ ಸಾಲ ಮನ್ನಾ ನಿರೀಕ್ಷೆಯೂ ಹುಸಿಯಾಗಿದೆ.

ದಶಕದಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ಹಾಗೂ ನದಿ ಮೂಲದಿಂದ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯೂ ಜಾರಿಯಾಗಿಲ್ಲ. ಮಹಾಮಸ್ತಾಕಭೀಷಕಕ್ಕೆ ಸಲ್ಲಿಸಿದ್ದ ₹ 500 ಕೋಟಿ ಪ್ರಸ್ತಾವಕ್ಕೆ ₹ 175 ಕೋಟಿ ಘೋಷಣೆ ಮಾಡಿರುವುದು ಕೊಂಚ ಮಟ್ಟಿಗೆ ಸಮಾಧಾನ ತಂದಿದೆ.

ADVERTISEMENT

**

ಸ್ವಾಮೀಜಿ ಅಭಿನಂದನೆ
ಶ್ರವಣಬೆಳಗೊಳ:
ಶ್ರವಣಬೆಳಗೊಳದಲ್ಲಿ 2018ರ ಫೆಬ್ರುವರಿಯಲ್ಲಿ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇ ಕಕ್ಕೆ ಬಜೆಟ್‌ನಲ್ಲಿ ವಿಶೇಷ ಅನುದಾನ ಪ್ರಕಟಿಸಿದ್ದು ಸಂತಸ ತಂದಿದೆ ಎಂದು ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದ ಅವರು, ಪ್ರಸಕ್ತ ವರ್ಷದ ಆಯವ್ಯಯವು ಸರ್ವಜನಾಂಗ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಪೂರಕವಾಗಿದೆ ಎಂದು ಹೇಳಿದರು.

**

ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದು..
* ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ₹ 175ಕೋಟಿ  (ರಸ್ತೆ ಅಭಿವೃದ್ಧಿ ಕಾಮಗಾರಿ ಹೊರತುಪಡಿಸಿ)
* ರೇಷ್ಮೆ ತರಬೇತಿ ಸಂಸ್ಥೆ ಸ್ಥಾಪನೆ
* ಹಾಸನದ ಕೋರವಂಗಲದಲ್ಲಿ ಪಶು ವೈದ್ಯಕೀಯ ಡಿಪ್ಲೊಮಾ ಕಾಲೇಜು ಸ್ಥಾಪನೆ
* ಅಂತರ್ಜಲ ಕುಸಿತದಿಂದ ಉಂಟಾಗುವ ಸಮಸ್ಯೆಗಾಗಿ ಚೆಕ್ ಡ್ಯಾಂ ನಿರ್ಮಾಣಕ್ಕೆ ₹ 10 ಕೋಟಿ
* ಹಳ್ಳಿಮೈಸೂರು ಹೋಬಳಿಯ ರಂಗೇನಹಳ್ಳಿ ಏತನೀರಾವರಿ ಯೋಜನೆಗೆ ₹ * 6 ಕೋಟಿ
* ನಿರಾಶ್ರಿತರ ಪರಿಹಾರ ಕೇಂದ್ರ ಸ್ಥಾಪನೆ
* ಹಾರಂಗಿ ಎಡದಂಡೆ ನಾಲೆಯ ಆಧುನೀಕರಣ
* ಅರಸೀಕೆರೆಯ ಕಸ್ತೂರಬಾ ಆಶ್ರಮದ ಅಭಿವೃದ್ಧಿಗೆ ₹ 2 ಕೋಟಿ
* ಕೆಶಿಪ್ ಯೋಜನೆಯಡಿ ಜಿಲ್ಲೆಯ ಕೇರಳಾಪುರ ದಿಂದ ಕೊಡಗು ಗಡಿಯವರೆಗೆ ರಸ್ತೆ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.