ADVERTISEMENT

ರೈತ ಸಂಘದಿಂದ ಪ್ರತಿಭಟನೆ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 9:37 IST
Last Updated 1 ಆಗಸ್ಟ್ 2015, 9:37 IST

ಚನ್ನರಾಯಪಟ್ಟಣ: ರೈತರು ಎದುರಿ ಸುತ್ತಿರುವ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿದ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಮಿನಿವಿಧಾನಸೌಧದ ಮುಂದೆ ಗುರುವಾರ ಧರಣಿ ನಡೆಸಿದರು.

ಬಾಗೂರು ಹೋಬಳಿ ಮರಗೂರು ಗ್ರಾಮದಲ್ಲಿ ರೈತ ಶಿವರಾಂ ಎರಡು ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಈಚೆಗೆ ದುಷ್ಕರ್ಮಿಗಳು ಅದಕ್ಕೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ಇದರಿಂದ ರೈತ ಕುಟುಂಬ ಹತಾಶರಾಗಿತ್ತು. ಅವರಿಗೆ ರೈತ ಸಂಘ ಧೈರ್ಯ ತುಂಬಬೇಕಾಯಿತು ಎಂದರು.

ಸಕ್ಕರೆ ಕಾರ್ಖಾನೆಯ ಕ್ಷೇತ್ರ ಅಧಿಕಾರಿ ಪರ್ಮಿಟ್‌ ಅನ್ನು ರೈತ ಶಿವರಾಂ ಅವರಿಗೆ ನೀಡದೇ ತನ್ನಲ್ಲಿ ಇರಿಸಿಕೊಂಡಿದ್ದಾರೆ. ಪರ್ಮಿಟ್‌ ಪಡೆಯಲು  ಲಂಚ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಇದುವರೆಗೆ ಕಬ್ಬು ಅರೆಯುವಿಕೆ ಆರಂಭಿಸಿಲ್ಲ. 
 6 ಕೋಟಿ ಬಾಕಿ ಉಳಿಸಿ ಕೊಂಡಿರುವ ಹಣ ಕೂಡಲೇ ಪಾವತಿಸ ಬೇಕು. ಕಾರ್ಖಾನೆಗೆ ಕಬ್ಬು ಪೂರೈಸಿದ 14 ದಿನದ ಒಳಗೆ ಹಣ ಪಾವತಿಸುವಂತಾ ಗಬೇಕು ಎಂದು ಒತ್ತಾಯಿಸಿದರು.

ಬುಧವಾರ ರಾತ್ರಿಯಿಂದ ಧರಣಿ ನಡೆಸುತ್ತಿದ್ದರೂ ಕಾರ್ಖಾನೆ ಅಧಿಕಾರಿ ಗಳು ಭೇಟಿ ನೀಡಿಲ್ಲ. ತಹಶೀಲ್ದಾರ್‌ ಭೇಟಿ ನೀಡಿದರಾದರು ಸಮಸ್ಯೆ ಬಗೆಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎ.ಎನ್‌. ಮಂಜೇಗೌಡ, ಕಲಾವಿದ ಮಿಲ್ಟ್ರಿ ಮಂಜು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT