ADVERTISEMENT

ಲಿಂಗ ತಾರತಮ್ಯ ಸಲ್ಲದು: ಕೃಷ್ಣಪ್ಪ

ಕೆಎಸ್ಆರ್‌ಪಿಯಲ್ಲಿ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:26 IST
Last Updated 17 ಮಾರ್ಚ್ 2018, 10:26 IST

ಹಾಸನ: ಹೆಣ್ಣು, ಗಂಡು ಎಂಬ ತಾರತಮ್ಯ ಸಲ್ಲದು. ಉತ್ತಮ ಸಮಾಜಕ್ಕೆ ಇಬ್ಬರೂ ಅಗತ್ಯ ಎಂದು ಕೆಎಸ್ಆರ್‌ಪಿ ಕಮಾಂಡೆಂಟ್ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಕೆಎಸ್ಆರ್‌ಪಿ 11ನೇ ಪಡೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವಯತ್ರಿ ಭಾರತಿ ಹಾದಿಗೆ ಮಾತನಾಡಿ, ವಿದ್ಯಾವಂತ ಯುವಕರು ಕೆಲವೊಂದು ಗೊಡ್ಡು ಸಂಪ್ರದಾಯಕ್ಕೆ ಆದ್ಯತೆ ನೀಡುತ್ತಿದ್ದಾರೆ. ವರದಕ್ಷಿಣೆ, ಪತಿ ಮೃತಪಟ್ಟಾಗ ಪತ್ನಿಯ ಬಳೆ, ಕುಂಕುಮ ತೆಗೆಯುವುದು, ಹಳದಿ ಸೀರೆ ಉಡಿಸಿ ಹಿಂಸೆ ನೀಡಲಾಗುತ್ತಿದೆ. ಇಂತಹ ಸಂಸ್ಕೃತಿ ಕೈ ಬಿಟ್ಟು, ಸತ್ಯ ಹೇಳುವ ವಿಚಾರ ವಂತಿಕೆ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ದುದ್ದ ಜಿ.ಜೆ.ಸಿ. ಶಿಕ್ಷಕಿ ಬಿ.ಎಸ್. ವನಜಾಕ್ಷಿ ಮಾತನಾಡಿ, ಮನೆಯೇ  ಮೊದಲ ಶಾಲೆ, ಜನನಿ ತಾನೆ ಮೊದಲ ಗುರು. ಜನನಿಯಿಂದ ಪಾಠ ಕಲಿತ ಜನರು ಧನ್ಯರು. ವಿವೇಕಾನಂದ, ಪರಮಹಂಸ, ಗಾಂಧಿ ಎಲ್ಲರೂ ತಾಯಿಯ ಪ್ರಭಾವದಿಂದ ಬೆಳೆದು ಸಾಧಕರಾದವರು. ಮಹಿಳಾ ಕ್ಷೇತ್ರದಲ್ಲಿ ಕಿರಣ್ ಬೇಡಿ, ಕಲ್ಪನಾಚಾವ್ಲಾ, ಮೇರಿಕೋಮ್ ಸಾಧನೆ ಪುರುಷರಿಗೂ ಕಡಿಮೆಯಲ್ಲ. ಆದ್ದರಿಂದ ಮಹಿಳೆ ಮತ್ತು ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮಹಿಳೆಗೆ ನೈತಿಕ ಬೆಂಬಲ ನೀಡಬೇಕೆಂದು ತಿಳಿಸಿದರು.

ಅಂತರರಾಷ್ಟ್ರೀಯ ಕ್ರಿಡಾಪಟು ಭಾರತಿ ಹಾಗೂ ಪೊಲೀಸ್ ತರಬೇತಿ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಇನ್‌ಸ್ಪೆಕ್ಟರ್‌ಗಳಾದ ಶರತ್, ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.