ADVERTISEMENT

‘ವಿಲಾಸಿ ಬದುಕಿನತ್ತ ಒಲವು; ಮರೆಯಾಗುತ್ತಿರುವ ಸಂಸ್ಕೃತಿ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 6:46 IST
Last Updated 3 ನವೆಂಬರ್ 2017, 6:46 IST

ಸಕಲೇಶಪುರ: ‘ಮನುಷ್ಯ ವಿಲಾಸಿ ಬದುಕಿಗೆ ಮಾರು ಹೋಗಿ, ಹುಟ್ಟಿದ ಊರು, ನೆಲದ ಸಂಸ್ಕೃತಿ ಮರೆಯುತ್ತಿದ್ದಾನೆ’ ಎಂದು ಉಪನ್ಯಾಸಕ ಗೊರುರು ದೇವರಾಜ್‌ ಆತಂಕ ವ್ಯಕ್ತಪಡಿಸಿದರು. ಕೌಡಹಳ್ಳಿ ಜೆ.ಎಸ್‌.ಎಸ್‌ ಬಿಇಡಿ ಕಾಲೇಜಿನಲ್ಲಿ ಈಚೆಗೆ ಸಾಂಪ್ರದಾಯಕ ದಿನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಣ ಮತ್ತು ಆಸ್ತಿಯನ್ನು ಯಾರು ಬೇಕಾದರೂ ಸಂಪಾದಿಸಬಹುದು. ಆದರೆ ಎಲ್ಲರನ್ನೂ ಗೌರವಿಸುತ್ತಾ, ನೆಲದ ಸಂಸ್ಕೃತಿ, ಆಚರಣೆಗಳನ್ನು ಪಾಲಿಸುತ್ತಾ ಸಂಘ ಜೀವಿಯಾಗಿ ಬದುಕುವುದು ಅಗತ್ಯ ಎಂದರು.

ಪ್ರಾಂಶುಪಾಲ ಡಾ. ಎನ್‌.ಎಸ್‌. ಸುರೇಶ್‌ ಮಾತನಾಡಿ, ಸಾಂಪ್ರದಾಯಿಕ ದಿನ ಆಚರಣೆಯಿಂದಾಗಿ ಮಲೆನಾಡಿನ ಸಾಂಪ್ರದಾಯಿಕ ಹಲವು ತಿಂಡಿ ತಿನಿಸುಗಳನ್ನು ಸವಿಯುವ ಅವಕಾಶ ದೊರಕಿದೆ ಎಂದರು.

ADVERTISEMENT

ಕಾಲೇಜಿನ ಅಧೀಕ್ಷಕ ಮಂಜುನಾಥ್‌, ಉಪನ್ಯಾಸಕರಾದ ಡಾ. ವೀರೇಶ್‌, ಅಬ್ದುಲ್‌ ಖಾದರ್‌, ಮೀನಾಕ್ಷಿ ಕಾದರ್‌, ದೈಹಿಕ ಶಿಕ್ಷಣ ನಿರ್ದೇಶಕ ಕಾಳೇಗೌಡ, ಡಾ. ನಂಜುಂಡಸ್ವಾಮಿ, ಡಾ.ಎಂ.ಕೆ. ದಿನೇಶ್‌, ಡಾ. ನಂಜುಂಡಪ್ಪ, ಡಾ. ಸಿ.ಬಿ. ವಿಕ್ರಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.