ADVERTISEMENT

ಶಾಂತಿ ಕದಡಲು ಮಂಗಳೂರು ಚಲೋ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 6:16 IST
Last Updated 6 ಸೆಪ್ಟೆಂಬರ್ 2017, 6:16 IST
ಎ.ಮಂಜು
ಎ.ಮಂಜು   

ಹಾಸನ: ಬಿಜೆಪಿ ಮಂಗಳೂರು ಚಲೋ ಮಾಡುತ್ತಿರುವುದು ಶಾಂತಿ ಕಾಪಾಡುವುದಕ್ಕೆ ಅಲ್ಲ, ಬದಲಾಗಿ ಗಲಭೆ ವಿಷಯ ಜೀವಂತವಾಗಿರಬೇಕು ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ಟೀಕಿಸಿದ್ದಾರೆ.

ಮಂಗಳೂರಿನಲ್ಲಿ ಕೋಮುಗಲಭೆಯಾದಾಗ ಸರ್ಕಾರ ಶಾತಿ ಸಭೆ ಕರೆದಿತ್ತು. ಅಂದು ಆ ಸಭೆ ಬಹಿಷ್ಕಾರ ಮಾಡಿದ್ದ ಬಿಜೆಪಿ, ಈಗ ಪ್ರಚೋದನೆ ಮೂಲಕ ಶಾಂತಿ ಕದಡಲು ಹೀಗೆ ಮಾಡುತ್ತಿದೆ. ಸರ್ಕಾರ ಪೊಲೀಸರನ್ನು ಬಳಸಿಕೊಂಡು ರ್‍್ಯಾಲಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಕಾನೂನಿಗೆ ಭಂಗ ತರಲಿದೆ ಎಂಬ ಕಾರಣದಿಂದಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡರು.

ಬಿಜೆಪಿ ಪ್ರಚೋದನಾ ಕಾರ್ಯಕ್ರಮ ಮಾಡುತ್ತಿದೆ. ಸರ್ಕಾರ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯಕ್ಕೆ ಅಮಿತ್‌ ಷಾ ಸೇರಿದಂತೆ ಯಾರೇ ಬಂದರೂ ಕಾಂಗ್ರೆಸ್‌ ಹೆದರುವುದಿಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.