ADVERTISEMENT

₹ 22.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೈದಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 7:04 IST
Last Updated 6 ಜೂನ್ 2017, 7:04 IST
ಬೇಲೂರು ಪುರಸಭೆಯಿಂದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ಆಟದ ಮೈದಾನಕ್ಕೆ ಪುರಸಭೆ ಅಧ್ಯಕ್ಷ ಕೆ.ಎಸ್‌.ಉಮಾ(ಮುದ್ದಮ್ಮ) ಸೋಮವಾರ ಭೂಮಿಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಅರುಣ್‌ಕುಮಾರ್, ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಇದ್ದಾರೆ
ಬೇಲೂರು ಪುರಸಭೆಯಿಂದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್‌ ಆಟದ ಮೈದಾನಕ್ಕೆ ಪುರಸಭೆ ಅಧ್ಯಕ್ಷ ಕೆ.ಎಸ್‌.ಉಮಾ(ಮುದ್ದಮ್ಮ) ಸೋಮವಾರ ಭೂಮಿಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಅರುಣ್‌ಕುಮಾರ್, ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಇದ್ದಾರೆ   

ಬೇಲೂರು: ‘ಇಲ್ಲಿನ ಸರ್ಕಾರಿ ಪಿಯು ಕಾಲೇಜು ಮೈದಾನದ ಆವರಣದಲ್ಲಿ ₹ 22.75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್‌ ಆಟದ ಮೈದಾನ ಮತ್ತು ಉದ್ಯಾನ ನಿರ್ಮಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ) ಸೋಮವಾರ ಹೇಳಿದರು.

ಮೈದಾನಕ್ಕೆ ಭೂಮಿಪೂಜೆ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೇಲೂರು ಪಟ್ಟಣದಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಇತ್ತು. ಆದ್ದರಿಂದ ಈ ಮೈದಾನದಲ್ಲಿ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗುವುದು, ಕಾರಂಜಿ  ಹಾಗೂ ಕುರ್ಚಿಗಳನ್ನು ಹಾಕಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ 23 ಉದ್ಯಾನಗಳು ಇವೆಯಾದರೂ ಅವು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಜತೆಗೆ ಹೈಟೆಕ್‌ ಪಾರ್ಕ್‌ಗಳೂ ಇಲ್ಲ’ ಎಂದರು.

ADVERTISEMENT

ಪುರಸಭೆಯ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಮಾತನಾಡಿ, ‘ಇಂದಿನಿಂದ ಒಣ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡಿ ಸಂಗ್ರಹಿಸಲಾಗುವುದು. ಸಾರ್ವಜನಿಕರೂ ಕಸವನ್ನು ವಿಂಗಡಿಸಿ ಮಾಡಿ ಆಟೊ ಟಿಪ್ಪರ್‌ಗಳಿಗೆ ಹಾಕಬೇಕು. ಸಂಗ್ರಹವಾದ ಕಸವನ್ನು ವಿಂಗಡಿಸಿ ಗೊಬ್ಬರ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು. ಜನರೂ ನೀರನ್ನು ಮಿತವಾಗಿ ಬಳಸಬೇಕು’ ಎಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್‌, ಸದಸ್ಯ ಕಾಶಿ ಶಿವು, ಆರೋಗ್ಯಾಧಿಕಾರಿ ಎಸ್‌.ವೆಂಕಟೇಶ್‌, ಎಂಜಿನಿಯರ್‌ ಚಂದನ್‌, ಗುತ್ತಿಗೆದಾರ ಬಿರಟೆಮನೆ ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.