ADVERTISEMENT

ಅಗ್ನಿ ಶಾಮಕ ಸಿಬ್ಬಂದಿಯ ಪರಿಸರ ಪ್ರೇಮ

ಪ್ರಮೀಳಾ ಹುನಗುಂದ
Published 10 ಸೆಪ್ಟೆಂಬರ್ 2017, 4:16 IST
Last Updated 10 ಸೆಪ್ಟೆಂಬರ್ 2017, 4:16 IST
ಫಲ ನೀಡುತ್ತಿರುವ ಚಿಕ್ಕು(ಎಡಚಿತ್ರ), ಗುಲಾಬಿ ಗಿಡದಲ್ಲಿ ಅರಳಿರುವ ಹೂವು
ಫಲ ನೀಡುತ್ತಿರುವ ಚಿಕ್ಕು(ಎಡಚಿತ್ರ), ಗುಲಾಬಿ ಗಿಡದಲ್ಲಿ ಅರಳಿರುವ ಹೂವು   

2009ರಲ್ಲಿ ಬ್ಯಾಡಗಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಆರಂಭಗೊಂಡಾಗ ಕಟ್ಟಡ ಬಿಟ್ಟು ಬೇರೇನೂ ಇರಲಿಲ್ಲ. ಆದರೆ, ಇದೀಗ ಅಲ್ಲಿನ ವಾತಾವರಣವು ಯಾವುದೇ ಉದ್ಯಾನಕ್ಕೆ ಕಮ್ಮಿಯಿಲ್ಲ. ತೆಗ್ಗು–ಗುಂಡಿಗಳಿಂದ ಕೂಡಿದ್ದ ಸುಮಾರು ಮೂರು ಎಕರೆ ಜಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕೆಲಸ ಹೊರತಾಗಿ ಪಟ್ಟ ಶ್ರಮದ ಫಲ.

ಹೌದು. ಠಾಣೆ ಆರಂಭಗೊಂಡ ಜಾಗ ಸಮತಟ್ಟಾಗಿರಲಿಲ್ಲ. ಜನವಸತಿಯೂ ಇರಲಿಲ್ಲ. ನೀರಿನ ಸಮಸ್ಯೆಯೂ ತೀವ್ರವಾಗಿತ್ತು. ಆದರೆ,  ಇದೀಗ ಅಲ್ಲಿ ಗಜಗೌರಿ, ಗುಲಾಬಿ, ದಾಸವಾಳ ಅರಳಿವೆ. ಅಂಜೂರ, ತೆಂಗು,  ನಿಂಬೆ, ಮಾವು, ಗಾಳಿ ಮರ ಸೇರಿದಂತೆ ಮತ್ತಿತರ ಗಿಡಗಳು ಬೆಳೆದು ನಿಂತಿವೆ. ವರ್ಷಗಳ ಹಿಂದೆ ನೆಟ್ಟ ಚಿಕ್ಕು(ಸಪೋಟಾ), ಸೀತಾಫಲ ಹಾಗೂ ಪೇರಲ ಗಿಡಗಳು ಫಲ ಕೊಡುತ್ತಿವೆ.

ಸಿಬ್ಬಂದಿಯ ಪರಿಸರ ಕಾಳಜಿಯು ಇಡೀ ಅಗ್ನಿಶಾಮಕ ಠಾಣೆಯ ವಾತಾವರಣದಲ್ಲಿ ಚೈತನ್ಯ ತುಂಬಿದೆ. ಬೆಳ್ಳಿಗೆ ಹಾಗೂ ಸಂಜೆ ವಾಯು ವಿಹಾರಕ್ಕೆಂದು ಬರುವ ಹಿರಿಯ ನಾಗರಿರು, ಯುವಕರು, ಮಹಿಳೆಯರು ಇತ್ತವೂ ಕೆಲ ಹೆಜ್ಜೆ ಹಾಕಿ ಹೋಗುತ್ತಾರೆ.

ADVERTISEMENT

ತ್ಯಾಜ್ಯ ನೀರು: ‘ಇಲ್ಲಿನ ಗಿಡಗಳಿಗೆ ನಿರುಪಯುಕ್ತ ನೀರನ್ನು ಉಪಯೋಗಿಸುತ್ತೇವೆ. ಪಕ್ಕದಲ್ಲಿಯೇ ಬ್ಯಾಡಗಿ ಪಟ್ಟಣಕ್ಕೆ ನೀರು ಪೂರೈಸುವ ಜಲ ಶುದ್ಧೀಕರಿಸುವ ಘಟಕ ಇದೆ. ಅಲ್ಲಿ ಕ್ಲೋರಿನ್‌ನಿಂದ ಶುದ್ಧೀಕರಿಸಿ ಬೇಡವಾದ ತ್ಯಾಜ್ಯ ನೀರು ಬಿಡಲಾಗುತ್ತದೆ. ಅದನ್ನು ದೊಡ್ಡ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಇಲ್ಲಿನ ಗಿಡ–ಮರಗಳಿಗೆ ಉಣಿಸುತ್ತೇವೆ. ದೊಡ್ಡ ಟ್ಯಾಂಕ್‌ಗಳಲ್ಲಿ ಮೀನುಗಳನ್ನೂ ಸಾಕಲಾಗುತ್ತಿದೆ.ಈ ಹಸರೀಕರಣಕ್ಕೆ ಸಿಬ್ಬಂದಿಯ ಸಾಂಘಿಕ ಶ್ರಮವೇ ಕಾರಣ’ ಎನ್ನುತ್ತಾರೆ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಎ.ಎಂ.ಗುರುಶಾಂತಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.