ADVERTISEMENT

ಅಧಿಕಾರಿಗಳ ಗೈರಿಗೆ ಅಸಮಾಧಾನ

ಸಭೆಗೆ ಇಲಾಖೆಗಳ ಕನಿಷ್ಠ ಮಾಹಿತಿ ನೀಡುವುದು ಅಗತ್ಯ– ಸವಿತಾ ಸುತ್ತಕೋಟಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:36 IST
Last Updated 8 ಫೆಬ್ರುವರಿ 2017, 9:36 IST
ಬ್ಯಾಡಗಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸುವರ್ಣಸೌಧ ಸಭಾಭವನದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು
ಬ್ಯಾಡಗಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸುವರ್ಣಸೌಧ ಸಭಾಭವನದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು   

ಬ್ಯಾಡಗಿ: ‘ಇಲಾಖೆಯಲ್ಲಿ ಕೈಕೊಂಡ ಅಭಿವೃದ್ಧಿ  ಕಾರ್ಯಗಳ ಕುರಿತು ಕನಿಷ್ಠ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಮಾಸಿಕ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಅಧಿಕಾರಿಗಳ ಗೈರಿಗೆ ಅಸಮಾ ಧಾನ ವ್ಯಕ್ತಪಡಿಸಿದ ಅವರು,‘ ಕೆಲ ಅಧಿಕಾರಿಗಳು ಸಭೆಗೆ ಗೈರು ಹಾಜರಾ ಗುವುದು, ಅವರ ಸಹಾಯಕರು ಸಭೆಗೆ ತಪ್ಪು ಮಾಹಿತಿ ಒದಗಿಸುವುದು ನಡೆಯು ತ್ತಲೇ ಇದೆ. ಹೀಗಾಗಿ ಜನಪ್ರತಿ ನಿಧಿಗಳಿಗೆ ತಪ್ಪು ಮಾಹಿತಿ ರವಾನೆ ಆಗುವ ಜೊತೆಗೆ ನಿಜವಾದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದು ಸಾಧ್ಯ ವಾಗಲಾರದು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಗೆ ವಸ್ತುನಿಷ್ಠ ವರದಿ ಯನ್ನು ಪ್ರತಿ ತಿಂಗಳು ಕೊಡಬೇಕು’ ಎಂದು ಸೂಚಿಸಿದರು.

‘ನೋಂದಣಿ ಇಲಾಖೆ, ಎಪಿಎಂಸಿ, ಮೀನುಗಾರಿಕೆ, ಅಬಕಾರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಗಳು ಈ ತನಕ ಮಾಹಿತಿ ನೀಡಿಲ್ಲ. ಮೇಲಾಧಿಕಾರಿಗಳಿಗೆ ಇಲಾಖೆ ಯ ನಿರ್ಲಕ್ಷ್ಯದ ಕುರಿತು ದೂರು ನೀಡಲಾಗುವುದು’ ಎಂದು ಅವರು ಎಚ್ಚರಿಸಿದರು.

ವಲಯ ಅರಣ್ಯಾಧಿಕಾರಿ ಎಸ್‌.ಎ. ಪವಾರ ಇಲಾಖೆಯ ಪ್ರಗತಿಯನ್ನು ಮಂಡಿಸಿದರು. ‘ಸಂಜೆ 6 ಗಂಟೆಯ ಬಳಿಕ ಅರಣ್ಯ ಪ್ರದೇಶದಿಂದ ಮಣ್ಣು ಹಾಗೂ ಕಲ್ಲು ಸಾಗಿಸುವುದನ್ನು ನಿಷೇಧಿಸ ಲಾಗಿದ್ದರೂ, ಕೆಲವರು ನಿಯಮ ಉಲ್ಲಂಘಿಸಿದ್ದಾರೆ. ಅಂತಹ ವಾಹನ ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯ್ತಿ ಸಹಾಯಕ ಎಂಜಿನಿಯರ್‌, ‘ರೈತರಿಗೆ ಮಣ್ಣು ಸಾಗಿಸಲು ಯಾವುದೇ ಅಡ್ಡಿ ಇಲ್ಲ. ಆದರೆ ಸರ್ಕಾರದ ಸುತ್ತೋಲೆ ಎರಡೂ ಇಲಾಖೆಗಳ ನಡುವೆ ಗೊಂದಲ ಸೃಷ್ಟಿಸಿದೆ. ಇದಕ್ಕೆ ಸ್ಪಷ್ಟೀಕರಣ ಕೇಳಲಾಗಿದೆ’ ಎಂದರು.

‘ಇಲ್ಲಿಯ ಸರ್ಕಾರಿ ಆಸ್ಪತ್ರೆ ಹಾಗೂ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆ ನಡೆಸುವ ಕುರಿತು ದೂರು ಬಂದಿವೆ. ಪರಿಶೀಲನೆ ನಡೆಸುವಂತೆ ತಾಲ್ಲೂಕಾ ಆರೋಗ್ಯಾಧಿ ಕಾರಿ ಡಾ.ಬಿ.ಆರ್‌. ಲಮಾಣಿ ಅವರಿಗೆ ಸೂಚಿಸಲಾಯಿತು.

ಸಿಡಿಪಿಓ ಕೆ.ಎಸ್‌.ಉಮಾ, ಬಿಇಓ ಝಡ್‌.ಎಂ.ಖಾಜಿ, ಉಪ ತಹಶೀಲ್ದಾರ್ ಜಯಣ್ಣ ತಳವಾರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು.

*
ಮಲ್ಲೂರು-ತರೇದಹಳ್ಳಿ ನಡುವಣ ರಸ್ತೆ, ಗುಣಮಟ್ಟ ಇಲ್ಲದೇ ಹಾಳಾಗಿದ್ದು, ಕಾಮಗಾರಿ ಅಪೂರ್ಣಗೊಂಡಿದೆ. ಅದನ್ನು ಬೇಗ ಪೂರ್ಣಗೊಳಿಸಬೇಕು.
-ಶಾಂತವ್ವ ದೇಸಾಯಿ,
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT