ADVERTISEMENT

ಆದಿಶಕ್ತಿ ದೇವಿ ಹಾಗೂ ಭೂತರಾಜ ದೇವರ ಕಾರ್ತೀಕ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 10:24 IST
Last Updated 13 ಡಿಸೆಂಬರ್ 2017, 10:24 IST

ರಾಣೆಬೆನ್ನೂರು: ‘ಸತ್ಸಂಗ ಮತ್ತು ಧರ್ಮದ ಕಾರ್ಯಕ್ರಮಗಳು ಜನರನ್ನು ಅಜ್ಞಾನದಿಂದ ಸುಜ್ಞಾನದಡೆಗೆ ಕರೆದೊಯ್ಯುತ್ತವೆ. ಪ್ರತಿಯೊಬ್ಬರು ಪವಿತ್ರ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಪಾವನಗೊಳಿಸಲು ಧರ್ಮ ಮಾರ್ಗದಲ್ಲಿ ಸಾಗಬೇಕು’ ಎಂದು ಹದಡಿ ಚಂದ್ರಗಿರಿ ಮಠದ ಮುರುಳೀಧರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಆದಿಶಕ್ತಿ ದೇವಿ ಹಾಗೂ ಭೂತರಾಜ ದೇವರ ಕಾರ್ತೀಕ ಮಹೋತ್ಸವದ ಅಂಗವಾಗಿ ಈಚೆಗೆ ನಡೆದ ಧರ್ಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಯಕದ ಮಹತ್ವ ತಿಳಿದವ ಯೋಗಿಯಾಗಿದ್ದಾನೆ. ಭಕ್ತಿ, ಜ್ಞಾನ, ವೈರಾಗ್ಯಗಳು ಮೋಕ್ಷ ಸಂಪಾದನೆಯ ಮಾರ್ಗಗಳಾದರೆ, ದೀನ, ದಲಿತರ, ಅನಾಥರ ಕಲ್ಯಾಣಕ್ಕಾಗಿ ಸಲ್ಲಿಸುವ ನಿಸ್ವಾರ್ಥ ಸೇವೆಯೇ ಧರ್ಮ ಕಾರ್ಯವಾಗಿದೆ’ ಎಂದರು.

ADVERTISEMENT

ನಿವೃತ್ತ ಶಿಕ್ಷಕಿ ಹೇಮಕ್ಕ ಕರಿಯಜ್ಜಿಯವರ ಮಾತನಾಡಿ, ‘ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ’ ಎಂದರು. ರಾಜನಹಳ್ಳಿಯ ಪ್ರಿಯಾನಂದ ಸ್ವಾಮೀಜಿ, ಕೃಷ್ಣಪಾದಾಚಾರ್ಯ ಸ್ವಾಮೀಜಿ, ಸಾಸರವಾಡದ ಚೆನ್ನವೀರ ಸ್ವಾಮೀಜಿ ಮಾತನಾಡಿದರು. ವೀರಣ್ಣ ಕರಿಯಜ್ಜೇರ, ಮಂಜಪ್ಪ ಹುಬ್ಬಳ್ಳಿ, ತಿರುಕಪ್ಪ ಹುಯಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.