ADVERTISEMENT

ಕಾಂಗ್ರೆಸ್‌ನಿಂದ ದಲಿತರಿಗೆ ನಿರಂತರ ಮೋಸ

ಮತಬ್ಯಾಂಕ್‌ ರಾಜಕಾರಣ ಮಾಡಿದವರಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ; ಬಿಎಸ್‌ವೈ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:26 IST
Last Updated 25 ಮೇ 2017, 9:26 IST

ಶಿಗ್ಗಾವಿ: ದಲಿತ ಸಮಾಜವನ್ನು ಚುನಾ ವಣೆಯಲ್ಲಿ ಮತಬ್ಯಾಂಕ್‌ ಮಾಡಿಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಭವಿಷ್ಯವಿಲ್ಲ. ಹೀಗಾಗಿ, ದಲಿತ ಬಗ್ಗೆ ಮಾತನಾಡಿವ ನೈತಿಕ ಹಕ್ಕು ಕಾಂಗ್ರೆಸ್‌ ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ  ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದರು.

ಪಟ್ಟಣದ ಅಂಬೇಡ್ಕರ್‌ ನಗರದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದಲಿತ ಕೆರಿಗಳಿಗೆ ಬಿಜೆಪಿ ಮುಖಂಡರು ಭೇಟಿ ನೀಡುವುದನ್ನು ಸಹಿಸಲಾಗದೇ ಸಲ್ಲದ ಆರೋಪ, ಟೀಕೆ ಮಾಡುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೇರಿ ಜಿಂದಾಲ್ ಕಂಪೆನಿ ಅವರಿಗೆ ಸುಮಾರು 7 ಟಿಎಂಸಿ ನೀರು ಮಾರಾಟ ಮಾಡಿದ್ದಾರೆ. ಈ ಕುರಿತು  ಪತ್ರಿಕೆಗಳ ಮೂಲಕ ಯಡಿಯೂರಪ್ಪ ಅವರಿಗೆ ಒಂದು ಟಿಎಂಸಿ ಎಂದರೆ ಗೊತ್ತಿದೆಯಾ? ಎಂದು ಬುದ್ಧಿ ಹೇಳುತ್ತಿದ್ದಾರೆ. ಅದರ ಪರಿಶೀಲನೆ ನಡೆಸಿದ ನಂತರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಆಗಿದೆ ಎಂದರು.

‘ರಾಜ್ಯದಲ್ಲಿ ಸುಮಾರು 34 ಸಾವಿರ ಕ್ವಿಂಟಲ್‌ ಅಕ್ಕಿ ಅಕ್ರಮ ನಡೆದಿದೆ ಎಂದು  ಕೆಲ ಕಾಂಗ್ರೆಸ್ಸಿಗರೇ ಒಪ್ಪಿಕೊಂಡಿದ್ದಾರೆ.  ಐಎಎಸ್‌ ಅಧಿಕಾರಿಗಳಿಗೆ ಸರಿಯಾಗಿ ವೇತನ ನೀಡಿಲ್ಲ.  ಅಧಿಕಾರಿಗಳಿಗೆ ಪ್ರಾಣ ಭಯ ಹಾಕುವುದು. ಕುರಿ ಸತ್ತರೆ ಪರಿ ಹಾರ ವಿತರಣೆ, ಎತ್ತು ಸತ್ತರೆ ಪರಿಹಾರ ಇಲ್ಲ.

ಈ ಎಲ್ಲ ಅನ್ಯಾಯಗಳ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್‌ ಈಗ ಮುಳುಗು ತ್ತಿರುವ ಹಡಗಿನಂತಾಗಿದೆ ಎಂದರು.

ಮಾಜಿ ಸಚಿವ ಗೋವಿಂದ ಕಾರ ಜೋಳ ಮಾತನಾಡಿ, ಅಂಬೇಡ್ಕರ ಏಳ್ಗೆ ಸಹಿಸದ ಕಾಂಗ್ರೆಸ್‌ಗರು ಬ್ರಿಟಿಷರಿಗಿಂತ ಕ್ರೂರಿಗಳು, ಸುಮಾರು 54 ವರ್ಷ ಆಡ ಳಿತ ನಡೆಸಿ ಇಲ್ಲಿನ ಸಂಪತ್ತನ್ನು ದೋಚಿ ದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿದರು.

ಕೇಂದ್ರದ ಹಣ ಹಂಚಿಕೆಯಲ್ಲಿ ವಿಫಲ: ಕೇಂದ್ರ ಸರ್ಕಾರ ಬರ ಬರಿಹಾರಕ್ಕೆ ಬಿಡು ಗಡೆ ಮಾಡಿರುವ ಹಣವನ್ನು ರಾಜ್ಯದ ಜನತೆಗೆ ಹಂಚಿಕೆ ಮಾಡುವುದರಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ. ಹಣ ಹಂಚುವಲ್ಲಿ ಯೋಗ್ಯತೆಯಿಲ್ಲ. ಅದನ್ನು ಸಚಿವ ಕಾಗೋಡು ತಿಮ್ಮಪ್ಪ ಒಪ್ಪಿಕೊಂಡಿದ್ದಾರೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಎಷ್ಟು ಗೋಶಾಲೆ ತೆರೆದಿದ್ದಾರೆ? ತೆರೆದ ಗೋಶಾಲೆಗಳಲ್ಲಿ ದಿನಕ್ಕೆ ಬರಿ 5 ಕೆ.ಜಿ. ಮೇವು ಮಾತ್ರ ವಿತರಿಸಲಾಗುತ್ತಿದೆ. ಅಲ್ಲನ ರೈತರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಸಂಕಷ್ಟಕ್ಕೆ ಸಿಲುಕಿರುವ ರೈತರ  ಸಾಲ ಮನ್ನಾ ಮಾಡಬೇಕು ಎಂದರು.

ಮಹದಾಯಿ  ಹೋರಾಟಗಾರರ ಜತೆಗೆ ಚರ್ಚಿಸಿದ್ದೇನೆ. ಸದ್ಯದಲ್ಲಿ ನ್ಯಾಯಾ ಲಯದಿಂದ ಅಂತಿಮ ತಿರ್ಪು ಹೊರ ಬರಲಿದ್ದು, ರಾಜ್ಯಕ್ಕೆ ನ್ಯಾಯ ಸಿಗುವ  ಭರವಸೆ ಇದೆ ಎಂದರು.

ದಲಿತ ಹನುಮಂತಪ್ಪ ಅವರ ಮನೆಯಲ್ಲಿ ಉಪಾಹಾರ: ಶಿಗ್ಗಾವಿ ಪಟ್ಟಣದ ಅಂಬೇ ಡ್ಕರ್‌ ಓಣಿಯಲ್ಲಿನ ದಲಿತ ಸಮಾಜದ ಹನುಮಂತಪ್ಪ ಕಟ್ಟಿಮನಿ ಅವರ ಮನೆ ಯಲ್ಲಿ ಯಡಿಯೂರಪ್ಪ ಅವರ ನೇತೃತ್ವ ದಲ್ಲಿ ಬಿಜೆಪಿ ಮುಖಂಡರು ಬುಧವಾರ ಬೆಳಿಗ್ಗೆ ಉಪಾಹಾರ ಸೇವಿಸಿದರು.

ಹನುಮಂತಪ್ಪ ಅವರ ಪತ್ನಿ ದೇವಕ್ಕ ಹಾಗೂ ಕುಟುಂಬದವರು ತಯಾರಿಸಿದ ಇಡ್ಲಿ, ಚಟ್ನಿ, ಸಾಂಬಾರ, ಪಡ್ಡು, ವಡಾ, ಹೆಸರು ಬೆಳೆ ಪಾಯಸ, ಕೇಸರಿಬಾತ್‌, ಉಪ್ಪಿಟು ಹಾಗೂ ಚಹಾ ಸವಿದರು. ಯಡಿಯೂರಪ್ಪ ಅವರ ಆಗಮನಕ್ಕಾಗಿ ದಲಿತ ಸಮಾಜದ ಹನುಮಂತಪ್ಪ ಕಟ್ಟಿ ಮನಿ ಅವರ ಪತ್ನಿ ದೇವಕ್ಕಾ ಕುಟುಂಬ ಸ್ಥರು ಸೇರಿಕೊಂಡು ಬೆಳಿಗ್ಗೆ ಉಪಾಹಾರ ಸಿದ್ಧಪಡಿಸಿದ್ದರು.

ಈ ವರೆಗೆ ಯಾವುದೇ ರಾಜಕೀಯ ಮುಖಂಡರು ನಮ್ಮ ಓಣಿ ಮತ್ತು ನಮ್ಮ ಮನೆಗೆ ಬಂದಿಲ್ಲ. ಈಗ ಯಡಿಯೂರಪ್ಪ ಅವರು ಬಂದು ಉಪಾ ಹಾರ ಸೇವಿಸುತ್ತಾರೆ ಎಂದಾಗ ಎಲ್ಲರಿಗೂ ಸಂತಸವಾಗಿದೆ ಎಂದು ದಲಿತ ಸಮಾ ಜದ ಹನುಮಂತಪ್ಪ, ಸಹೋದರ ಕರೆ ಯಪ್ಪ ಕಟ್ಟಿಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.