ADVERTISEMENT

‘ನೀರಾವರಿಗೆ ₹48 ಸಾವಿರ ಕೋಟಿ ವೆಚ್ಚ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:09 IST
Last Updated 9 ಸೆಪ್ಟೆಂಬರ್ 2017, 5:09 IST
‘ನೀರಾವರಿಗೆ ₹48 ಸಾವಿರ ಕೋಟಿ ವೆಚ್ಚ’
‘ನೀರಾವರಿಗೆ ₹48 ಸಾವಿರ ಕೋಟಿ ವೆಚ್ಚ’   

ಹಾನಗಲ್: ತಾಲ್ಲೂಕಿನ ಶಿಗೀಹಳ್ಳಿ–ಶಿಂಗಾಪೂರ (ಪ್ಲಾಟ್‌) ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯ್ತಿಯ ರಾಜೀವಗಾಂಧಿ ಸೇವಾ ಕೇಂದ್ರ ಉದ್ಘಾಟನೆ ಮತ್ತು ಗ್ರಾಮದೇವಿ ಸಭಾ ಭವನದ ಉದ್ಘಾಟನೆ ಸಮಾರಂಭ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ,‘5 ವರ್ಷದ ಅವಧಿಯಲ್ಲಿ ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗಾಗಿ ₹ 48 ಸಾವಿರ ಕೋಟಿ ವೆಚ್ಚ ಮಾಡಿದೆ’ ಎಂದರು.

ಶಾಸಕ ಮನೋಹರ ತಹಸೀಲ್ದಾರ್‌ ಮಾತನಾಡಿ, ‘ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಿಂದ ಸೇವಾ ಕೇಂದ್ರ ಕಟ್ಟಡ ನಿರ್ಮಾಣಗೊಂಡಿವೆ. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಶಿಕ್ಷಣ ಕ್ಷೇತ್ರಕ್ಕಾಗಿ ₹50 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಈ ಅನುದಾನ ಬಳಸಲಾಗುವುದು’ ಎಂದರು.

ADVERTISEMENT

‘ಶಿಗೀಹಳ್ಳಿ–ಶಿಂಗಾಪೂರ ಪ್ಲಾಟ್‌ ಸದ್ಯದಲ್ಲೇ ಕಂದಾಯ ಗ್ರಾಮವಾಗಿ ಪರಿವರ್ತನೆಗೊಳ್ಳಲಿದ್ದು, ಗ್ರಾಮಸ್ಥರ ಆಶಯದಂತೆ ವಿಜಯನಗರ ಎಂದು ನಾಮಕರಣ ಮಾಡಲಾಗುತ್ತದೆ’ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಉಪಾಧ್ಯಕ್ಷೆ ಸರಳಾ ಜಾಧವ, ಜಿಲ್ಲಾ ಪಂಚಾಯ್ತಿ ಸದಸ್ಯೆ ಗೌರಮ್ಮ ಶೇತಸನದಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರಮ್ಮ ತಿಮ್ಮಣ್ಣನವರ, ಉಪಾಧ್ಯಕ್ಷೆ ನೀಲವ್ವ ಕೊಂಡೋಜಿ, ಮುಖಂಡರಾದ ಪ್ರಕಾಶಗೌಡ ಪಾಟೀಲ, ವಿಷ್ಣುಕಾಂತ ಜಾಧವ, ಅಭಿವೃದ್ಧಿ ಅಧಿಕಾರಿ ಎಂ.ಬಿ.ಕುಳ್ಳನಿಂಗಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.