ADVERTISEMENT

ಪ್ರಮಾಣಪತ್ರ ನೀಡಿಕೆ ವಿಳಂಬಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:18 IST
Last Updated 23 ಮಾರ್ಚ್ 2017, 9:18 IST

ಹಾವೇರಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾತಿ ಪ್ರಮಾಣ ಪತ್ರ ನೀಡಲು ಹಾವೇರಿಯ ಗ್ರೇಡ್‌–2 ತಹಶೀ ಲ್ದಾರ್ ಸಿ.ಎಸ್‌.ಭಂಗಿ ಸತಾಯಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಹಾವೇರಿ ತಾಲ್ಲೂಕು ಪರಿಶಿಷ್ಟ ಪಂಗಡಗಳ ಮೀಸಲಾತಿ ಸಮಿತಿ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಈ ಕುರಿತು ಮನವಿ ಸಲ್ಲಿಸಿರುವ ಸಮಿತಿ ಅಧ್ಯಕ್ಷ ಪರಶುರಾಮ ಅಗಡಿ ಹಾಗೂ ನಗರಸಭೆ ಸದಸ್ಯ ವೆಂಕಟೇಶ ಇಟಗಿ, ‘ಶಿಕ್ಷಣ ಹಕ್ಕು ಕಾಯಿದೆ ಅಡಿ ಸೀಟು ಪಡೆಯಲು ಮಕ್ಕಳಿಗೆ ಜಾತಿ ಪ್ರಮಾಣದ ತುರ್ತು ಅವಶ್ಯಕತೆ ಇದೆ. ಆದರೆ, ಗ್ರೇಡ್‌–2 ತಹಶೀಲ್ದಾರ್, ಯಾವುದೇ ವಿಚಾರಣೆ ನಡೆಸದೇ ಅರ್ಜಿ ಗಳನ್ನು ತಿರಸ್ಕರಿಸುತ್ತಿದ್ದಾರೆ.

ಅಲ್ಲದೇ, ಸಂಬಂಧ ಪಡದ ದಾಖಲೆಗಳನ್ನು ತರುವಂತೆ ಹೇಳುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತ ಕಾಯಿದೆ ಗಳನ್ನು ಅವರ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ’ ಎಂದು ದೂರಿದ್ದಾರೆ.

‘ಈ ಹಿಂದೆ ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ನನ್ನನ್ನು, ಈಗ ಗ್ರೇಡ್–2 ತಹಶೀಲ್ದಾರ್ ಆಗಿ ಹಾಕಿರು ವುದು ಅವಮಾನವಾಗಿದೆ. ಹೀಗಾಗಿ ನನ್ನನ್ನು ಇಲ್ಲಿಂದ ಬಿಡುಗಡೆಗೊಳಿಸುವ ತನಕ ಹೀಗೆ ಮುಂದುವರಿಯಲಿದೆ’ ಎಂದು ಭಂಗಿ ಪ್ರತಿಕ್ರಿಯಿಯೆ ನೀಡಿದ್ದಾರೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಅಗಡಿ ಮನವಿಯಲ್ಲಿ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT