ADVERTISEMENT

‘ಬದುಕಿನ ತಿರುವು ಅವಲೋಕಿಸಬೇಕು’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 7:20 IST
Last Updated 8 ನವೆಂಬರ್ 2017, 7:20 IST

ರಟ್ಟೀಹಳ್ಳಿ: ‘ಬದುಕಿನಲ್ಲಿ ಅನೇಕ ವಿಚಿತ್ರ ತಿರುವುಗಳು ಬರುತ್ತವೆ. ಅವುಗಳನ್ನು ನಿರ್ಲಕ್ಷಿಸದೆ ಸೂಕ್ಷ್ಮವಾಗಿ ಅವಲೋಕನೆ ಮಾಡಿದರೇ ಬದುಕು ಬದಲಾಗುತ್ತದೆ. ಇದಕ್ಕೆ ಕನಕದಾಸರು ಅತ್ಯುತ್ತಮ ನಿದರ್ಶನ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸ ಹದಡೇರ ನುಡಿದರು. ಇಲ್ಲಿನ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸೋಮವಾರ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಮಹಬೂಬಸಾಬ್ ಮುಲ್ಲಾ, ಗ್ರಾಮ ಪಂಚಾಯ್ತಿ ಸದಸ್ಯರಾದ ಗೋಪಾಲ ಮಡಿವಾಳರ, ಬಸವರಾಜ ಆಡಿನವರ, ಶಿವನಗೌಡ ದ್ಯಾವಕ್ಕಳವರ, ವೀರಭದ್ರಪ್ಪ ಮಳಗೊಂಡರ, ಬಾಬುಸಾಬ್‌ ಜಡದಿ, ಶಶಿಕಲಾ ಬೆಣ್ಣಿ, ಮಕ್ಬುಲಸಾಬ ಹಳಿಯಾಳ, ಝಾಕೀರ ಮುಲ್ಲಾ, ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಮಂಜುನಾಥ ಚಲವಾದಿ, ಸಂತೋಷ ಬಿಳಚಿ ಭಾಗವಹಿಸಿದ್ದರು.

‘ಕೀರ್ತನೆ ಅರಿತರೆ ಬುದುಕು ಸರಳ’
ರಟ್ಟೀಹಳ್ಳಿ: ‘ದಾಸರಲ್ಲಿಯೇ ಕನಕದಾಸ ಸರ್ವ ಶ್ರೇಷ್ಠ. ಅವನ ಕೀರ್ತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕನ್ನು ಕಂಡುಕೊಳ್ಳಬೇಕು’ ಎಂದು ಲಯನ್ಸ್‌ ಕ್ಲಬ್ ಅಧ್ಯಕ್ಷ ಕೆ.ವೈ.ಬಾಜೀರಾಯ ಹೇಳಿದರು. ಗ್ರಾಮದ ಲಯನ್ಸ್‌ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಕನಕದಾಸರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.

ADVERTISEMENT

ಮುಖ್ಯ ಶಿಕ್ಷಕ ವಿ.ಎಸ್.ಆರ್ಕಾಚಾರಿ, ಆರ್.ಬಿ.ಬಳ್ಳೇರ, ಟಿ.ಕೆ.ಶೆಟ್ಟರ್‌, ವಿಜಯ ಬುಳ್ಳಾಪುರ, ಶಿವಕುಮಾರ ಹಿತ್ತಲಮನಿ, ಸಂತೋಷ ಪವಾರ, ಉಷಾ ಪಾಟೀಲ, ರೇಖಾ ಬಡಿಗೇರ, ಮಮತಾ ಮೋರೆ, ಮಹಾಂತೇಶ ಅಡಿವೇರ, ರೇಣುಕಾ ಕಿರಗೇರಿ, ಶೃತಿ ಮೋಹಿತೆ, ಸುಧಾ ಸೊಪ್ಪಿನವರ, ಎಸ್.ಜಿ.ಶಾಂತಾ, ಸುಹಾನಾ ಮೆಡ್ಲೇರಿ, ಶ್ವೇತಾ ಪಾಟೀಲ, ಬಿ.ಬಿ.ಅಮೀನಾ, ಮಂಜುಳಾ ಹಲಗೇರಿ, ಅರ್ಚನಾ ಎಸ್., ಉಮಾ ಕಾಯಕದ, ಸುಮಾ ಬಿಳಚಿ, ರೇಷ್ಮಾ ಬಿ. ಹಾಗೂ ಮಕ್ಕಳು ಇದ್ದರು.

ಬೆಳ್ಳೂರ: ರಟ್ಟೀಹಳ್ಳಿ ಸಮೀಪದ ಬೆಳ್ಳೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸೋಮವಾರ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಮಕರಿ: ರಟ್ಟೀಹಳ್ಳಿ ಸಮೀಪದ ಮಕರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸೋಮವಾರ ಕನಕ ಜಯಂತ್ಯುತ್ಸವ ಸಂಭ್ರಮ ಮನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.