ADVERTISEMENT

ಬಿಜೆಪಿ; ಬರ ಅಧ್ಯಯನ ಇಂದು

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:26 IST
Last Updated 24 ಮೇ 2017, 9:26 IST

ಹಾವೇರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಬುಧವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಬರ ಅಧ್ಯಯನ ನಡೆಸುವರು. ಬೆಳಿಗ್ಗೆ 9.30ಕ್ಕೆ ಶಿಗ್ಗಾವಿಯ ದಲಿತ ಕಾಲೋನಿಯ ಹನುಮಂತಪ್ಪ ಶಿಗ್ಗಾವಿ ಅವರ ಮನೆಯಲ್ಲಿ ಉಪಾಹಾರ ಸೇವನೆ, 10ಕ್ಕೆ ದಲಿತರರೊಂದಿಗೆ ಸಂವಾದ ಹಾಗೂ 10.30ಕ್ಕೆ ಬಿಸಲಹಳ್ಳಿಯಲ್ಲಿ ಕೆರೆ ವೀಕ್ಷಣೆ ಮಾಡುವರು.

ಬಳಿಕ, 11ಕ್ಕೆ ಹಾನಗಲ್‌ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಅಡಿಕೆ ಬೆಳೆಗಾರರ ಜತೆ ಚರ್ಚೆ. 12ಕ್ಕೆ ಹಾವೇರಿಯ ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಮಾಲಾ ರ್ಪಣೆ, ನಂತರ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸುವರು.

ಮಧ್ಯಾಹ್ನ 12.30ಕ್ಕೆ ಜಿಲ್ಲಾ ಗುರು ಭವನದಲ್ಲಿ ನಡೆಯುವ ಕಾರ್ಯಕರ್ತ ರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30ಕ್ಕೆ ನಾಗೇಂದ್ರನ ಮಟ್ಟಿಯ ಹಿಂದುಳಿದ ವರ್ಗದ ಬೀರಪ್ಪ ಬಾತೇಪ್ಪ ಅವರ ಮನೆಯಲ್ಲಿ ಊಟ, ಬಳಿಕ 3.45ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಜನಸಂಘ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಭಾಗವಹಿಸಿದ ವರೊಂದಿಗೆ ಸಂವಾದ ನಡೆಸುವರು.

ADVERTISEMENT

ಮಧ್ಯಾಹ್ನ 4ಕ್ಕೆ ರಾಣೆಬೆನ್ನೂರಿನ ತಳ ವಾರ ಓಣಿಯಲ್ಲಿ ಪರಿಶಿಷ್ಟ ಪಂಗಡ ದವರೊಂದಿಗೆ ಸಂವಾದ ಹಾಗೂ  ವಾಲ್ಮೀಕಿ ಸಮುದಾಯದ ಮುಖಂಡ ಭೀಮಪ್ಪ ಯಡಚಿಯವರ ಮನೆಯಲ್ಲಿ ಚಹಾ ಸೇವನೆ. ಸಂಜೆ 4.30ಕ್ಕೆ ನಗರದ ಆಂಗ್ಲೊ ಉರ್ದು ಹೈಸ್ಕೂಲ್‌ ಮೈದಾನ ದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊ ಳ್ಳುವರು. ರಾತ್ರಿ 7.30ಕ್ಕೆ ಮಾರುತಿ ನಗರದ ಚೋಳಪ್ಪ ಕಸವಾಳ ಮನೆಯಲ್ಲಿ ಊಟ ಮಾಡಲಿದ್ದಾರೆ, ಬಳಿಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಸಂಸದ ಶಿವಕುಮಾರ ಉದಾಸಿ, ಶೋಭಾ ಕರಂದಾಜ್ಲೆ, ಶ್ರೀರಾಮುಲು, ಶಾಸಕರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಮುರಗೇಶ ನಿರಾಣಿ, ಯು.ಬಿ.ಬಣಕಾರ, ಸೋಮಣ್ಣ ಬೇವಿನಮರದ, ಮಾಜಿ ಸಚಿವ ಸಿ.ಎಂ. ಉದಾಸಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನವರ ತಂಡದಲ್ಲಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.