ADVERTISEMENT

ಬಿತ್ತಿದ ರೈತರಿಗೆ ಈಗ ಮಳೆಯ ಚಿಂತೆ

ತಾಲ್ಲೂಕಿನಾದ್ಯಂತ ಮೋಡ ವಾತಾವರಣೆ ಇದ್ದರೂ ಸುರಿಯದ ಮಳೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:49 IST
Last Updated 12 ಜುಲೈ 2017, 5:49 IST

ಸವಣೂರ: ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಬಹುತೇಕ ಭಾಗದಲ್ಲಿ ಬಿತ್ತ ನೆಗೆ ಪೂರಕವಾಗುವಷ್ಟು ಮಳೆಯಾದ ಬೆನ್ನಲ್ಲೆ ಬಿತ್ತನ ಮಾಡಿದ ರೈತರಿಗೆ ಇದೀಗ ಮತ್ತೆ ಮಳೆಯ ಚಿಂತೆ ಶುರುವಾಗಿದೆ.

‘ಬಿತ್ತನೆ  ದಿನಗಳ ಮುಗಿಯುತ್ತವೆ ಎಂಬ ಧಾವಂತದಿಂದ ಅರೆ ಹಸಿಯಲ್ಲಿಯೇ ಬಿತ್ತನೆ ಮಾಡಿದ್ದೇವೆ. ಕುಳೆ ಬೆಳೆಯಲ್ಲಿ ದೇವರ ಮೇಲೆ ಭಾರ ಹಾಕಿ ಎಡೆಗುಂಟೆ ಹೊಡೆಯುತ್ತಿದ್ದೇವೆ. ಜುಲೈ ಬಂದರೂ ಮಳೆ ಆಗುತ್ತಿಲ್ಲ. ಇಲ್ಲಿಯವರೆಗೆ ನೀರು ಹರಿಯುವಷ್ಟು ಒಂದೂ ಮಳೆಯಾಗಿಲ್ಲ. ಕೇವಲ ಮೋಡಗಳನ್ನು ನೋಡುವುದಷ್ಟೆ ನಮ್ಮ ಕೆಲಸವಾಗಿದೆ’ ಎಂದು ರೈತ ದೇವಪ್ಪ ಹೇಳಿದರು.

ತಾಲ್ಲೂಕಿನ ವಿವಿಧೆಡೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು, ಹತ್ತಿ, ಎಳ್ಳು, ಜೋಳ, ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಿದ್ದಾರೆ. ಚಿಗುರೆಲೆ ಬಿಟ್ಟಿರುವ ಬೆಳೆಗಳು ಇದೀಗ ತೇವಾಂಶದ ಕೊರತೆಯಿಂದ ಬಾಡುತ್ತಿವೆ.

ADVERTISEMENT

‘ಮೂರು ವರ್ಷಗಳಿಂದಲೂ ಬರದ ಛಾಯೆಯಲ್ಲಿಯೇ ಇರುವ ನಮ್ಮ ಪಾಲಿಗೆ ಮತ್ತೊಂದು ಭೀಕರ ಬರ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಿಂದಿನ ವರ್ಷ ಬೆಳೆ ವಿಮೆ ಮಾಡಿದ್ದರೂ ಇಲ್ಲಿಯವರೆಗೂ ಕೆಲವರಿಗೆ ಕೈಗೆ ಹಣ ಬಂದಿಲ್ಲ. ಆದರೂ ಈ ಬಾರಿಯೂ ಮತ್ತೆ ವಿಮೆ ಮಾಡಿಸಿದ್ದೇವೆ’ ಎಂದು ಕಲಿವಾಳದ ರೈತರೊಬ್ಬರು ತಿಳಿಸಿದರು.

ಬಿತ್ತನೆ ಕುಸಿತ: ‘ತಾಲ್ಲೂಕಿನಲ್ಲಿ ಒಟ್ಟು 41,588 ಹೆಕ್ಟರ್‌ ಕೃಷಿ ಭೂಮಿಯಿದೆ.  ಮಳೆ ಕೊರತೆಯಿಂದ ಸವಣೂರ ಹೋಬ ಳಿಯಲ್ಲಿ  9,859 ಹೆಕ್ಟರ್‌, ಹತ್ತಿಮತ್ತೂರ ಹೋಬಳಿಯಲ್ಲಿ 1,296 ಹೆಕ್ಟರ್‌ ಸೇರಿ ದಂತೆ ಒಟ್ಟು ತಾಲ್ಲೂಕಿನಲ್ಲಿ 11,155 ಹೆಕ್ಟರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಇನ್ನುಳಿದ ರೈತರು ಮಳೆಯ ನಿರೀಕ್ಷೆಯಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡು ಕಾಯುತ್ತಿ ದ್ದಾರೆ’ ಎಂದು ಸಹಾಯಕ ಕೃಷಿ ನಿರ್ದೇ ಶಕ ಎನ್.ಎಫ್.ಕಟೇಗೌಡ್ರ ‘ಪ್ರಜಾವಾಣಿ’ ಗೆ ತಿಳಿಸಿದರು.
ಮಾಲತೇಶ ಹರ್ಲಾಪೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.