ADVERTISEMENT

ಮುಂಬೈ, ಬೆಳಗಾವಿ ರೈಲು ಸಂಚಾರಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 7:51 IST
Last Updated 1 ನವೆಂಬರ್ 2014, 7:51 IST

ಹುಬ್ಬಳ್ಳಿ: ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ಟರ್ಮಿನಸ್‌ ವೀಕ್ಲಿ ಎಕ್ಸ್‌ಪ್ರೆಸ್‌ ಹಾಗೂ ಹುಬ್ಬಳ್ಳಿ–ಬೆಳಗಾವಿ ಫಾಸ್ಟ್‌ ಪ್ಯಾಸೆಂಜರ್‌ ರೈಲುಗಳು ಇದೇ 2ರಿಂದ ಸಂಚಾರ ಆರಂಭಿಸಲಿವೆ.

ಗಾಡಿ ಸಂಖ್ಯೆ 17321 ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ವೀಕ್ಲಿ ಎಕ್ಸ್‌ಪ್ರೆಸ್‌ ಪ್ರತಿ ಶನಿವಾರದಂದು ರಾತ್ರಿ 10.30ಕ್ಕೆ ಹುಬ್ಬಳ್ಳಿಯಿಂದ ಹೊರಟು ಗದಗ, ಬಾಗಲಕೋಟೆ, ವಿಜಾಪುರ, ಸೊಲ್ಲಾಪುರ, ಪುಣೆ, ಥಾಣೆ ಮಾರ್ಗವಾಗಿ ಮರುದಿನ ಸಂಜೆ 4.55ಕ್ಕೆ ಮುಂಬೈನ ಲೋಕಮಾನ್ಯ ತಿಲಕ್‌ ನಿಲ್ದಾಣ ತಲುಪಲಿದೆ. ನಂ. 17322 ಲೋಕಮಾನ್ಯ ತಿಲಕ್‌ ಟರ್ಮಿನಸ್‌ ವೀಕ್ಲಿ ಎಕ್ಸ್‌ಪ್ರೆಸ್‌ ಪ್ರತಿ ಭಾನುವಾರ 9.15ಕ್ಕೆ ಮುಂಬೈ ನಿಲ್ದಾಣದಿಂದ ಹೊರಟು ಮರುದಿನ ಸಂಜೆ 5.35ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ನಂ. 56921 ಹುಬ್ಬಳ್ಳಿ–ಬೆಳಗಾವಿ ಫಾಸ್ಟ್‌ ಪ್ಯಾಸೆಂಜರ್‌ ಪ್ರತಿ ದಿನ ಸಂಜೆ 6ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಧಾರವಾಡ, ಮುಗದ, ಅಳ್ನಾವರ, ತಾವರಗಟ್ಟಿ, ದೇವರಾಯಿ, ಲೊಂಡಾ, ಖಾನಾಪುರ, ದೇಸೂರು ಮಾರ್ಗವಾಗಿ ರಾತ್ರಿ 9.30ಕ್ಕೆ ಬೆಳಗಾವಿ ನಿಲ್ದಾಣ ತಲುಪಲಿದೆ. 

ನಂ. 56922 ಬೆಳಗಾವಿ–ಹುಬ್ಬಳ್ಳಿ ಫಾಸ್ಟ್‌ ಪ್ಯಾಸೆಂಜರ್‌ ಬೆಳಿಗ್ಗೆ 6ಕ್ಕೆ ಬೆಳಗಾವಿಯಿಂದ ಹೊರಟು 9.50ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.  ನ,1ರಂದು ಬೆಳಿಗ್ಗೆ 11ಕ್ಕೆ ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ಸುರೇಶ ಅಂಗಡಿ ಅವರು ಹುಬ್ಬಳ್ಳಿ ನಿಲ್ದಾಣದಲ್ಲಿ ಈ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT