ADVERTISEMENT

ಮೆಣಸಿನಕಾಯಿ ಆವಕ ಹೆಚ್ಚು: ಗುಣಮಟ್ಟದ ಕೊರತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 8:48 IST
Last Updated 28 ನವೆಂಬರ್ 2017, 8:48 IST

ಬ್ಯಾಡಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 15,601 ಚೀಲ (4,680 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿದೆ. ಈ ಪೈಕಿ ಗುಂಟೂರು ತಳಿಯ ಪ್ರಮಾಣ ಹೆಚ್ಚಿದ್ದು, ಗುಣಮಟ್ಟದ ಕೊರತೆ ಕಂಡು ಬರುತ್ತಿದೆ.

ಬ್ಯಾಡಗಿ ಕಡ್ಡಿ  ₹2,099 ರಿಂದ ₹13,350ರ ವರೆಗೆ, ಬ್ಯಾಡಗಿ ಡಬ್ಬಿ ₹2,509 ರಿಂದ ₹ 16,499ರ ವರೆಗೆ ಹಾಗೂ ಗುಂಟೂರು ₹ 709 ರಿಂದ ₹ 7,669ರ ವರೆಗೆ ಮಾರಾಟವಾಗಿದೆ.

ಮಾರುಕಟ್ಟೆಯ 143 ದಲಾಲಿ ಅಂಗಡಿಗಳಿಗೆ ಒಟ್ಟು 2,492 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಇಳಿಸಲಾಗಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ 145 ಖರೀದಿ ವರ್ತಕರು ಭಾಗವಹಿಸಿದ್ದು, ಗುಣಮಟ್ಟದ ಕೊರತೆ ಇರುವ 143 ಲಾಟ್‌ಗಳಿಗೆ ಟೆಂಡರ್‌ ನಿರಾಕರಿಸಲಾಗಿದೆ ಎಂದು ಮಾರುಕಟ್ಟೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.