ADVERTISEMENT

ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಿ

ರಾಣೆಬೆನ್ನೂರು: ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 11:14 IST
Last Updated 20 ಜುಲೈ 2017, 11:14 IST

ರಾಣೆಬೆನ್ನೂರು: ‘ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚಿ ಆದ್ಯತೆ ನೀಡಿದೆ. ಕುಡಿಯುವ ನೀರು, ರಸ್ತೆ, ನೀರಾವರಿ ಹಾಗೂ ಯುಟಿಪಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.

ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಪಿ.ಎಂ.ಜಿಎಸ್.ವೈ ಯೋಜನೆಯಡಿಯಲ್ಲಿ ಇಟಗಿ– ಹೊಳೆ ಆನ್ವೇರಿ (ವ್ಹಾಯಾ ಮುಷ್ಟೂರು) ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ 4 ವರ್ಷ ಸಾಧನೆಗಳಿಗೆ ರಾಜ್ಯದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒಲವು ತೋರಿಸಿದ್ದು, ತಾಲ್ಲೂಕಿನ 79 ಹಳ್ಳಿಗಳಲ್ಲಿ ಬಹತೇಕ ಎಲ್ಲಾ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದರು.

ADVERTISEMENT

ಪಿಎಂಜಿಎಸ್‌ವೈ ಯೋಜನೆಯಲ್ಲಿ ಇಟಗಿ ರಸ್ತೆ, ಮೇಡ್ಲೇರಿ ತಾಂಡದಲ್ಲಿ ರಸ್ತೆ ಕಾಮಗಾರಿ, ನಗರದ ಬಸ್‌ ನಿಲ್ದಾಣದ ಬಳಿ ₹ 8.10 ಲಕ್ಷ ಮತ್ತು ಶಂಕರ ಚಿತ್ರಮಂದಿರದ ಬಳಿ ಶುದ್ದ ಕುಡಿಯುವ ನೀರಿನ ಘಟಕ ₹ 8.10 ಲಕ್ಷ, ಬನಶಂಕರಿನಗರದ ಬಳಿ ₹ 167.50 ಲಕ್ಷ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಕಟ್ಟಡದ ಗುದ್ದಲಿ ಪೂಜೆ,  ಗುಡುಗೂರ ಕೆರೆ ಕಾಲುವೆ ದುರಸ್ಥಿ ಹಾಗೂ ಹೊಸ ಕಾಲುವೆ ನಿರ್ಮಾಣ ಕಾಮಗಾರಿಯ ₹ 20 ಲಕ್ಷ ಹಾಗೂ ಚೌಡಯ್ಯದಾನಪುರದಿಂದ ಹೊನ್ನತ್ತಿ ರಸ್ತೆ (ವ್ಹಾಯಾ ನೂಕಾಪುರ) ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಕೆಎಸ್‌ಡಿಎಲ್‌ ನಿಗಮದ ನಿರ್ದೇಶಕ ಮಂಡಳಿ ಸದಸ್ಯ ಮಂಜುನಾಥ ಮಠಪತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗಿರಿಜವ್ವ ಬ್ಯಾಲದಹಳ್ಳಿ ಮತ್ತು ಶಿವನಂದ ಕನ್ನಪ್ಪಳವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಕರಿಯಪ್ಪ ತೋಟಗೇರ, ಕೃಷ್ಣಪ್ಪ ಕಂಬಳಿ, ಇಟಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಡಂಬರ ಮುತ್ತೂರ, ಬಸಪ್ಪ ಓಲೇಕಾರ,ಶೌಖತ್‌ಅಲಿ, ಸುಭಾಸ ಕರೇಗೌಡ್ರ,  ನೀಲಪ್ಪ ಕೂನಬೇವು, ಕೃಷ್ಣ ರೆಡ್ಡಿ, ಪೌರಾಯುಕ್ತ ಡಾ.ಮಹಾಂತೇಶ, ನಗರಸಭೆ ಸದಸ್ಯೆ ಬಸವರಾಜ ಹುಚಗೊಂಡರ ಹಾಗೂ ಇಕ್ಬಾಲ್‌ಸಾಬ್‌ ರಾಣೆಬೆನ್ನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.