ADVERTISEMENT

ಸೋರುತಿಹುದು ‘ಜ್ಞಾನಾಲಯ’ದ ಮಾಳಿಗೆ

ಹರ್ಷವರ್ಧನ ಪಿ.ಆರ್.
Published 1 ಸೆಪ್ಟೆಂಬರ್ 2014, 7:13 IST
Last Updated 1 ಸೆಪ್ಟೆಂಬರ್ 2014, 7:13 IST

ಹಾವೇರಿ: ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ...
-ಸಂತ ಶಿಶುನಾಳ ಶರೀಫರು ಸುಮಾರು ಒಂದೂವರೆ ಶತಮಾನದ ಹಿಂದೆ ಹಾಡಿದ ಹಾಡು ಹಾವೇರಿ ಜಿಲ್ಲೆ ಯಲ್ಲಿ ಇಂದಿಗೂ ಜೀವಂತ. ಜಿಲ್ಲಾ ಕೇಂದ್ರದ ಜ್ಞಾನಾಲಯವಾದ ‘ನಗರ ಕೇಂದ್ರ ಗ್ರಂಥಾಲಯ’ವೇ ಅಕ್ಷರಶಃ  ಸೋರುತ್ತಿದ್ದು, ಜ್ಞಾನಾರ್ಥಿಗಳ ಜೀವಕ್ಕೆ ಅಪಾಯ ಆಹ್ವಾನಿಸುತ್ತಿದೆ.

ನಗರ ಸಭೆಯ ಮುಂಭಾಗದ ಈ ಗ್ರಂಥಾಲಯದ ಮಾಳಿಗೆಯಲ್ಲಿ ಗಿಡ ಗಳು ಬೇರು ಬಿಟ್ಟಿವೆ. ಒಮ್ಮೊಮ್ಮೆ ವಿದ್ಯುತ್‌ ಶಾಕ್‌ ಹೊಡೆಯುವುದು, ಜಾಗವಿಲ್ಲದೇ ಮಹಿಳೆಯರು, ವಿದ್ಯಾ ರ್ಥಿನಿಯರು ಪರದಾಡುವುದು, ಪತ್ರಿಕೆ– ಪುಸ್ತಕಗಳು ಹಾಳಾಗುತ್ತಿರುವುದು, ಕುಡಿಯುವ ನೀರು, ಶೌಚಾಲಯವಿ ಲ್ಲದೇ ಪರಿತಪಿಸು ವುದು ಸಾಮಾನ್ಯ ವಾಗಿದೆ. ನಿವೃತ್ತರು, ಮಕ್ಕಳ ಪಾಡು ಹೇಳತೀರದು. ನಾಲ್ಕೈದು ದಶಕ ಕಂಡ ಕಟ್ಟಡವು ಶಿಥಿಲಾವಸ್ಥೆಯ ಲ್ಲಿದೆ. ಪಕ್ಕದ ಆವರಣದ ಗೋಡೆಯೇ ‘ಸಾರ್ವಜನಿಕ ಶೌಚಾಲಯ’ವಾಗಿದೆ.

ಇದು ಸೋಮವಾರ ಹೊರತು ಪಡಿಸಿ ಪ್ರತಿನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 8ರ ತನಕ ತೆರೆದಿರುತ್ತದೆ. ಸುಮಾರು 22.5 ಸಾವಿರ ಪುಸ್ತಕಗಳು,

‘ಈ ಗ್ರಂಥಾಲಯವು ಸ್ಪರ್ಧಾತ್ಮಕ ಪರೀಕ್ಷೆಯನ್ನೇ ಅವಲಂಬಿಸಿರುವ ಸಹಸ್ರಾರು ಯುವಜನರ ಬದುಕಿನ ದಾರಿದೀಪವಾಗಿದೆ. ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿ ಸುವ ದೇಗುಲವು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಥಳಾಂತರಗೊಂಡಿಲ್ಲ. ಅಪಾಯ ಎದುರಾಗುವ ಮುನ್ನವೇ ಕಟ್ಟಡವನ್ನು ಸ್ಥಳಾಂತರಿಸಬೇಕು’
–ರವಿ, ಓದುಗ

ದಿನನಿತ್ಯ 17 ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಯ ನಿಯತಕಾಲಿಕಗಳು ಸೇರಿದಂತೆ ಜ್ಞಾನದ ಭಂಡಾರವೇ ಇಲ್ಲಿದೆ. 1,358 ಮಂದಿ ಚಂದಾದಾರರಿದ್ದರೆ, ಇಲ್ಲಿ ಪ್ರತಿ ನಿತ್ಯ ಒಂದೂವರೆ ಸಾವಿರ ಓದುಗರಿಗೆ ಜ್ಞಾನ ದಾಸೋಹ ನಡೆಯುತ್ತಿದೆ. ₨100 ಠೇವಣಿ ಇಟ್ಟು ಸದಸ್ಯರಾದರೆ, ಮೂರು ಪುಸ್ತಕಗಳನ್ನು ಉಚಿತವಾಗಿ (15 ದಿನ) ಕೊಂಡೊಯ್ಯಬಹುದು. ಪ್ರತಿನಿತ್ಯ 500 ರಷ್ಟು ಪುಸ್ತಕಗಳನ್ನು ಕೊಂಡೊಯ್ಯುತ್ತಾರೆ.

ಅಲ್ಲಿದೆ ನಮ್ಮನೆ: ಈ ಗ್ರಂಥಾಲಯಕ್ಕೆ ಸುಸಜ್ಜಿತವಾದ ಕಟ್ಟಡ ಕೂಗಳತೆ ದೂರ ದಲ್ಲಿದೆ. ಆದರೆ ಜನಪ್ರತಿನಿಧಿಗಳ ನಿರ್ಲ ಕ್ಷ್ಯದಿಂದ ಸ್ಥಳಾಂತರಗೊಂಡಿಲ್ಲ. ‘ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ’ ಎಂಬ ಪಾಡು ಓದುಗರದ್ದು. ನೂತನ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದಿದೆ. ಉದ್ಘಾಟನೆಗೊಂಡಿಲ್ಲ. ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಹೆಚ್ಚುವರಿ ಪುಸ್ತಕಗಳು, ಪ್ರತ್ಯೇಕ ವಿಭಾಗಗಳು, ಗಣಕೀಕರಣ, ಇ–ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಯ ಹೊಸ ನಿಯತ ಕಾಲಿಕಗಳು ಸೇರಿದಂತೆ ಆಧುನಿಕತೆಗೆ ತಕ್ಕಂತೆ ಹಲವು ಸೌಕರ್ಯ ಬರಲಿವೆ.

ಅಲ್ಲದೇ ಹೆಚ್ಚು ವರಿ ಸಿಬ್ಬಂದಿಯೂ ಸಿಗಲಿದ್ದಾರೆ. ಈಗ ವೈ.ಡಿ,ಪೂಜಾರ (ಗ್ರಂಥಪಾಲಕ ರು), ಕೆ.ಎಚ್‌್. ಮುನಿಯಣ್ಣನವರ (ಸಹಾಯಕ ಗ್ರಂಥಪಾಲಕರು) ಹಾಗೂ ಸಿಬ್ಬಂದಿ ಐ.ಎಸ್‌. ಸುರಕೋಡ, ಪಿ.ವಿ ಹರಕುಣಿ ಓದುಗರಿಗೆ ನೆರವಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT