ADVERTISEMENT

ಹಣ ಅಪಮೌಲ್ಯ; ಆರಂಭಿಕ ಸಮಸ್ಯೆ ಸಹಜ

ಅನಿವಾರ್ಯ ಸಂದರ್ಭದಲ್ಲಿ ತುರ್ತು ಕ್ರಮ ಅತ್ಯಗತ್ಯ; ತಜ್ಞ ಡಾ.ಅನಿಲಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:43 IST
Last Updated 12 ಜನವರಿ 2017, 8:43 IST
ಶಿಗ್ಗಾವಿ: ದೇಶದಲ್ಲಿನ ಆರ್ಥಿಕತೆಗೆ ಕುತ್ತು ಬರುತ್ತಿದೆ ಎಂದಾಗ ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯ ಅನಿವಾರ್ಯ ವಾಗುತ್ತದೆ ಎಂದು ಹುಬ್ಬಳ್ಳಿ ಗ್ಲೋಬಲ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ನಿರ್ದೇಶಕ ಡಾ.ಅನಿಲಕುಮಾರ್ ಗರಗ ಹೇಳಿದರು.
 
ತಾಲ್ಲೂಕಿನ ಗೊಟಗೋಡಿಯಲ್ಲಿ ಇರುವ ಕರ್ನಾಟಕ ಜಾನಪದ ವಿಶ್ವವಿದ್ಯಾ ಲಯದಲ್ಲಿ ಬುಧವಾರ ನಡೆದ ವಿತ್ತಿಯ ಸಾಕ್ಷರತಾ ಅಭಿಯಾನ ಕಾರ್ಯಕ್ರಮದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿ, ಹಿಂದೆ ಪ್ರತಿ ದೇಶಗಳಲ್ಲಿ ಅನ್ಯ ಕಾರಣಗಳಿಗೆ ಹಣದ ಅಪಮೌಲ್ಯವಾಗಿವೆ. ಅದೇ ಬಗೆಯಲ್ಲಿ ಭಾರತದಲ್ಲಿ ಇದುವರೆಗೆ 3 ಬಾರಿ ಹಣ ಅಪಮೌಲ್ಯಗೊಳಿಸಲಾಗಿದೆ ಎಂದರು.
 
ಅಪಮೌಲ್ಯವಾದಾಗ ಆಯಾ ದೇಶ ಗಳಲ್ಲಿ ಈ ಬಗೆಯ ಸಮಸ್ಯೆ, ಕೋಲಾಹಲ ಸಾಮಾನ್ಯ. ಕೆಲವೇ ದಿನಗಳಲ್ಲಿ ಇದು ಸರಿ ಹೋಗುತ್ತದೆ ಎಂದರು.
 
ರಸೀದಿ ರಹಿತ ವ್ಯವಹಾರ ಕಾಳಧನ ಸೃಷ್ಟಿಗೆ ಕಾರಣವಾಗಿದೆ. ಐದು ಸಾವಿ ರಕ್ಕೂ ಹೆಚ್ಚಿನ ಮೌಲ್ಯದ ವ್ಯವಹಾರವನ್ನು ಬ್ಯಾಂಕಿನ ಮೂಲಕ ಮಾಡುವುದು ಸೂಕ್ತ.
 
ಅರ್ಥಕ್ರಾಂತಿ ಸಂಸ್ಥೆ ಪ್ರತಿಪಾದಿ ಸುವ ಹಾಗೆ ನೂರು ರೂಗಿಂತ ಅಧಿಕ ಮೌಲ್ಯದ ನೋಟುಗಳು ಇದ್ದಲ್ಲಿ ಕಾಳ ಧನದ ಸಂಗ್ರಹ ಸಾಧ್ಯ. ತೆರಿಗೆಗೆ ಹೆದರಿ ಖರೀದಿಯನ್ನು ಜನ ಕಡಿಮೆ ಮಾಡಿದ್ದು, ಇದರಿಂದ ತೆರಿಗೆ ಸಂಗ್ರಹ ಕಡಿಮೆಯಾ ಗಿದೆ. ಜಿಎಸ್‌ಟಿ. ಅಂತಹ ಏಕರೂಪ ತೆರಿಗೆ ನೀತಿ ಬಂದರೆ ರಸೀದಿ ಮತ್ತು ರಸೀದಿ ರಹಿತ ವಹಿವಾಟಿನ ಗೊಂದಲ ನಿವಾರಣೆ ಆಗುತ್ತದೆ ಎಂದರು.
 
ಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ  ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿಜಿಟಲ್ ಹಣ ವ್ಯವಹಾರದ ನಿರ್ವಹಣೆ ಮಾಡು ವುದು ಆಶಾದಾಯಕವಾದ ಸಾಮಾಜಿಕ ಜವಾಬ್ದಾರಿಯುತ ನಿರ್ಧಾರವಾಗಿದೆ. ಎಲ್ಲ ವ್ಯವಹಾರಗಳನ್ನು ಬ್ಯಾಂಕಿನ ಮೂಲಕವೇ ನಿರ್ವಹಿಸುವ ಆರ್ಥಿಕ ಕ್ರಾಂತಿಗೆ ಈ ಅಪಮೌಲ್ಯದ ನಡೆ ಕಾರಣ ವಾಗಿದೆ. ಭಾರತೀಯರಲ್ಲಿ ಬದಲಾವಣೆ ಯನ್ನು ದಿಢೀರಣೆ ಸ್ವೀಕರಿಸುವ ಗುಣ ಕಡಿಮೆ ಎಂದರು.
 
ಮೌಲ್ಯಮಾಪನ ಕುಲಸಚಿವ ಪ್ರೊ.ಡಿ. ಮುರಹರಿ ನಾಯಕ  ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಹನಗೋಡಿ ಮಠ ಪ್ರಾರ್ಥಿಸಿದರು. ಪವಿತ್ರಾ ಸ್ವಾಗತಿಸಿ ದರು. ಪ್ರಾಧ್ಯಾಪಕ ಡಾ.ಅರುಣಬಾಬು ಅಂಗಡಿ ಅತಿಥಿಗಳ ಪರಿಚಯ ಮಾಡಿ ದರು. ಪ್ರಾಧ್ಯಾಪಕಿ ಎಚ್‌.ಅಭಿನಯಾ ನಿರೂಪಿಸಿದರು. ಅರುಣಕುಮಾರ ಯರನಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.