ADVERTISEMENT

ಹತ್ಯೆ, ದೌರ್ಜನ್ಯಕ್ಕೆ ಖಂಡನೆ

ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕರು, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:14 IST
Last Updated 2 ಮಾರ್ಚ್ 2017, 5:14 IST
ಕೋರ್ಟ್‌ ಎದುರುಗಡೆ ಹೆದ್ದಾರಿಯಲ್ಲಿ ಕಮ್ಯೂನಿಸ್ಟ್‌ ಪಕ್ಷದ ಧೋರಣೆ ಖಂಡಿಸಿ ಜಿಲ್ಲಾ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
ಕೋರ್ಟ್‌ ಎದುರುಗಡೆ ಹೆದ್ದಾರಿಯಲ್ಲಿ ಕಮ್ಯೂನಿಸ್ಟ್‌ ಪಕ್ಷದ ಧೋರಣೆ ಖಂಡಿಸಿ ಜಿಲ್ಲಾ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು   

ರಾಣೆಬೆನ್ನೂರು: ಆರ್‌ಎಸ್‌ಎಸ್ ಕಾರ್ಯ ಕರ್ತರ ಹಾಗೂ ಕನ್ನಡಿಗರ ಮೇಲೆ ಕೇರಳದಲ್ಲಿ ಕಮ್ಯೂನಿಸ್ಟ್‌ರು ನಡೆಸು ತ್ತಿರುವ ಹತ್ಯೆ ಮತ್ತು ದೌರ್ಜನ್ಯವನ್ನು ಖಂಡಿಸಿ ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕರು ಹಾಗೂ ಬಿಜೆಪಿ ಕಾರ್ಯ ಕರ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರು ಕೋರ್ಟ್‌ ಎದುರು ಗಡೆ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕಮ್ಯೂನಿಸ್ಟ್‌ ತೊಲಗಿಸಿ ಪ್ರಜಾ ಪ್ರಭುತ್ವ ಉಳಿಸಿ ಎಂದು ಘೋಷಣೆ ಗಳನ್ನು ಕೂಗುತ್ತ ಕೇರಳದ ಮುಖ್ಯ ಮಂತ್ರಿ ವಿರುದ್ದ ಧಿಕ್ಕಾರ ಕೂಗಿದರು. ತಹಶೀಲ್ದಾರ್‌ ಕಚೇರಿಯ ಬಳಿ ಧರಣಿ ಕುಳಿತು ನಂತರ ತಹಶೀಲ್ದಾರ್‌ ಬಿ.ರಾಮಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಜಿಲ್ಲಾ ಕಾರ್ಯನಿರ್ವಾಹಕ ಗುರುರಾಜ ಕುಲಕರ್ಣಿ ಮಾತನಾಡಿ, ಕಮ್ಯೂನಿಸ್ಟ್‌ ಪಕ್ಷವು ಕಳೆದ 30  ವರ್ಷಗಳಲ್ಲಿ 300 ಕ್ಕೂ ಹೆಚ್ಚು ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹತ್ಯೆ ಮತ್ತು ದೌರ್ಜನ್ಯವೆಸಗಿದೆ ಎಂದು ದೂರಿದರು.

ಸಂಘದ ಬೆಳವಣಿಗೆ ಮತ್ತು ವಿಚಾರಧಾರೆಗಳನ್ನು ವಿರೋಧಿಸುವ ಕಮ್ಯೂನಿಸ್ಟ್‌ ಪಕ್ಷವು ನಿರಂತರವಾಗಿ ಮಾನಸಿಕ ಹಿಂಸೆಯ ಜೊತೆಗೆ ಕೊಲೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್ ಯುವ ಮುಖಂಡ ನಿರಂಜನ ಪೂಜಾರ ಮಾತನಾಡಿ, ಸಂಘ ಪರಿವಾರಕ್ಕೆ ಆಗಮಿಸುವವರನ್ನು ಮಾನ ಸಿಕ ಹಿಂಸೆ ನೀಡುವುದರ ಮೂಲಕ ಕೊಲೆ ಬೆದರಿಕೆ ಹಾಕುತ್ತ ಅವರನ್ನು ಸಂಘದಿಂದ ದೂರ ಮಾಡುವ ಪ್ರಯತ್ನ ಕಮ್ಯೂನಿಸ್ಟ್‌ ಮಾಡುತ್ತಿದೆ. ಸಂಘದ ಬೆಳವಣಿಗೆ ಸಹಿಸಲಾರದೆ ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಗೃಹಮಂತ್ರಿಗಳು ಮುಂದಾಗಬೇಕಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಆರ್‌ಎಸ್‌ಎಸ್ ಕಾರ್ಯಕರ್ತರ ಹಾಗೂ ಕನ್ನಡಿಗರ ಮೇಲೆ ಹತ್ಯೆ ಮತ್ತು ದೌರ್ಜನ್ಯಗಳು ಮುಂದುವರಿದರೆ ದೇಶಾದ್ಯಂತ ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ. ಜೊತೆಗೆ ಭಾರತ್ ಬಂದ್‌ಗೂ ಸಹ ಕರೆ ನೀಡಲಾಗುವುದು ಎಂದರು. ಬಿಜೆಪಿ ಹಿರಿಯ ಮುಖಂಡ ಕೆ.ಶಿವಲಿಂಗಪ್ಪ ಮಾತನಾಡಿದರು.

ಈಶ್ವರ ಹಾವನೂರ, ಅಶೋಕ ನಾಡಿಗೇರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ, ಚೋಳಪ್ಪ ಕಸವಾಳ, ಭಾರತಿ ಜಂಬಗಿ, ಗಂಗಮ್ಮ ಹಾವನೂರ, ರೂಪಾ ಬಾಕಳೆ, ಜಿ.ಜಿ.ಹೊಟ್ಟಿಗೌಡ್ರ, ಅರುಣಕುಮಾರ ಪೂಜಾರ, ಬಸವರಾಜ ಲಕ್ಷ್ಮೇಶ್ವರ, ಸಿದ್ದರಾಜ ಕಲಕೋಟಿ, ಕೆ.ವಿ.ಶ್ರೀನಿವಾಸ, ಕೆ.ಎನ್.ಪಾಟೀಲ, ಶಿವಪ್ಪ ಕುರುವತ್ತಿ, ಉಮೇಶಣ್ಣ ಹೊನ್ನಾಳಿ, ಸಂಕಪ್ಪ ಮಾರನಾಳ, ಮಾಲತೇಶ ಜಾಧವ, ಆನಂದ ದೇಸಿ, ಚೇತನ್ ಪ್ರಭಾವತಿ ತಿಳುವಳ್ಳಿ, ಶಶಿಕಲಾ ಮಾಗನೂರ, ಮಮತಾ ಜಾಧವ, ಭಾರತಿ ಕಮದೋಡ, ಮಂಜುನಾಥ ಓಲೇಕಾರ, ಡಾ.ನಾರಾಯಣ ಪವಾರ, ಎ.ಬಿ.ಪಾಟೀಲ, ಪ್ರಕಾಶ ಪೂಜಾರ, ರಾಮಕೃಷ್ಣ ತಾಂಬೆ, ದೀಪಕ್ ಹರಪನಹಳ್ಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.